ಚಂದ್ರಗ್ರಹಣ 2026
2026ರ ಮೊದಲ ಚಂದ್ರಗ್ರಹಣವು ಫಾಲ್ಗುನ ಪೂರ್ಣಿಮೆಯಂದು, ಮಾರ್ಚ್ 3, ಮಂಗಳವಾರ ಸಂಭವಿಸುತ್ತದೆ. ಇದು “ಗ್ರಸ್ತೋದಿತ ಚಂದ್ರಗ್ರಹಣ”ವಾಗಿದ್ದು, ಕರ್ನಾಟಕದಲ್ಲಿ ಚಂದ್ರೋದಯವಾಗುವ ಮೊದಲೇ ಗ್ರಹಣ ಆರಂಭವಾಗುತ್ತದೆ. ಅಂದರೆ, ಗ್ರಹಣ ಹಿಡಿದಿರುವ ಚಂದ್ರನು ಪೂರ್ವ ದಿಕ್ಕಿನಲ್ಲಿ ಉದಯಿಸುತ್ತಾನೆ.
ಕರ್ನಾಟಕದಲ್ಲಿ ಚಂದ್ರ ಗ್ರಹಣ ಗೋಚರ ಸಮಯ
*ಸಂಜೆ 6:28 ರಿಂದ 6:48ರವರೆಗೆ ಮಾತ್ರ ಗೋಚರ
*ಗ್ರಹಣಮೋಕ್ಷ: ಸಂಜೆ 6:48ಕ್ಕೆ (ಸಂಪೂರ್ಣ ಚಂದ್ರಬಿಂಬ ಸ್ಪಷ್ಟವಾಗಿ ಗೋಚರಿಸುತ್ತದೆ)
ಪ್ರಮುಖ ನಗರಗಳಲ್ಲಿ ಚಂದ್ರೋದಯ ಸಮಯ
- ಬೆಂಗಳೂರು – ಸಂಜೆ 6:28
- ಶಿವಮೊಗ್ಗ – ಸಂಜೆ 6:36
- ಶಿರಸಿ – ಸಂಜೆ 6:38
- ಮಂಗಳೂರು – ಸಂಜೆ 6:36
ನಗರವಾರು ಸಮಯದಲ್ಲಿ ಸ್ವಲ್ಪ ವ್ಯತ್ಯಾಸವಿರುವುದರಿಂದ ಸ್ಥಳಾನುಸಾರ ಗೋಚರ ಅವಧಿ ಬದಲಾಗಬಹುದು.
ಯಾವ ರಾಶಿಗಳಿಗೆ ದೋಷ?
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಚಂದ್ರಗ್ರಹಣದ ಪರಿಣಾಮ ಕೆಲ ರಾಶಿಗಳಿಗೆ ಹೆಚ್ಚು ಕಂಡುಬರುವ ಸಾಧ್ಯತೆ ಇದೆ.
ದೋಷಪ್ರದ ರಾಶಿಗಳು:
*ಸಿಂಹ
*ಕನ್ಯಾ
*ವೃಷಭ
*ಮಕರ
ಮಧ್ಯಮ ಫಲ:
*ಕರ್ಕ
*ಮೇಷ
*ಧನು
*ಕುಂಭ
ಈ ರಾಶಿಯವರು ವಿಶೇಷ ಜಪ, ದಾನ, ಶಾಂತಿ ವಿಧಾನಗಳನ್ನು ಅನುಸರಿಸುವುದು ಉತ್ತಮವೆಂದು ಪಂಡಿತರು ಸೂಚಿಸಿದ್ದಾರೆ.
ಚಂದ್ರ ಗ್ರಹಣದ ದಿನ ಪಾಲಿಸಬೇಕಾದ ಆಚರಣೆಗಳು
- ಅಕ್ಕಿ, ಬಿಳಿ ವಸ್ತ್ರ, ಹುರುಳಿ ಇತ್ಯಾದಿಗಳನ್ನು ದಕ್ಷಿಣಾಸಹಿತ ದಾನ ಮಾಡಬಹುದು
- ಆ ದಿನ ಹಗಲು ಭೋಜನವನ್ನು ತ್ಯಜಿಸುವುದು ಶ್ರೇಯಸ್ಕರ
- ಬಾಲಕರು, ವೃದ್ಧರು ಹಾಗೂ ರೋಗಿಗಳು ಮಧ್ಯಾಹ್ನದವರೆಗೆ ಆಹಾರ ಸೇವಿಸಬಹುದು
- ಶ್ರಾದ್ಧ ಇದ್ದಲ್ಲಿ ಮರುದಿನ ಆಚರಿಸುವುದು ಸೂಕ್ತ
- ಪುಣ್ಯಕಾಲದಲ್ಲಿ ಜಪ, ತರ್ಪಣ, ದಾನ, ಧ್ಯಾನ ಮಾಡುವುದು ಉತ್ತಮ
ಗ್ರಹಣ ಶಾಂತಿ ಮತ್ತು ಪರಿಹಾರ ಕ್ರಮಗಳು
ಯಾವ ರಾಶಿ ಅಥವಾ ನಕ್ಷತ್ರಕ್ಕೆ ವಿಶೇಷ ದೋಷವಿದ್ದರೆ, ಮಾರನೇ ದಿನ ಪೂರ್ವಾಹ್ನದಲ್ಲಿ ಗ್ರಹಣ ಶಾಂತಿ, ಹವನ, ಜಪ ಇತ್ಯಾದಿ ವಿಧಾನಗಳನ್ನು ಮಾಡಬಹುದು ಅಥವಾ ಮಾಡಿಸಬಹುದು. ಇದು ದೋಷ ಪರಿಹಾರಕ್ಕೆ ಸಹಾಯಕವಾಗುತ್ತದೆ ಎಂದು ಶಾಸ್ತ್ರೋಕ್ತ ನಂಬಿಕೆ ಇದೆ.
2026 ಮಾರ್ಚ್ 3ರ ಫಾಲ್ಗುನ ಪೂರ್ಣಿಮೆಯಂದು ಸಂಭವಿಸುವ ಈ ಚಂದ್ರಗ್ರಹಣವು ಕರ್ನಾಟಕದಲ್ಲಿ ಅಲ್ಪಕಾಲ ಮಾತ್ರ ಗೋಚರವಾಗುತ್ತದೆ. ಆದ್ದರಿಂದ, ಸಮಯದ ಅರಿವು ಮಾಡಿಕೊಂಡು ಆಚರಣೆಗಳನ್ನು ನೆರವೇರಿಸುವುದು ಮುಖ್ಯ. ವಿಶೇಷವಾಗಿ ದೋಷಪ್ರದ ರಾಶಿಯವರು ಶಾಂತಿ ವಿಧಾನಗಳನ್ನು ಅನುಸರಿಸುವುದು ಒಳಿತು. ಧಾರ್ಮಿಕ ನಂಬಿಕೆ, ಜ್ಯೋತಿಷ್ಯ ಮತ್ತು ಸಂಪ್ರದಾಯಗಳನ್ನು ಗೌರವಿಸುವವರು ಈ ದಿನವನ್ನು ಆಧ್ಯಾತ್ಮಿಕ ಚಿಂತನೆಗೆ ಬಳಸಿಕೊಳ್ಳಬಹುದು.
ಆರಾಧ್ಯ ಅವರು ಐದು ವರ್ಷಗಳಿಂದ ಜ್ಯೋತಿಷ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಅನುಭವ ಹೊಂದಿರುವ ಕಂಟೆಂಟ್ ರೈಟರ್. ಜ್ಯೋತಿಷ್ಯ ವಿಷಯಗಳನ್ನು ಆಧಾರಿತ ಮಾಹಿತಿಯೊಂದಿಗೆ ಸಂಶೋಧಿಸಿ, ಸರಳ ಮತ್ತು ನಿಖರ ರೀತಿಯಲ್ಲಿ ಓದುಗರಿಗೆ ತಲುಪಿಸುವಲ್ಲಿ ಅವರಿಗೆ ವಿಶೇಷ ನೈಪುಣ್ಯ ಇದೆ. ವಿಶ್ವಾಸಾರ್ಹ ಮತ್ತು ಉಪಯುಕ್ತ ಮಾಹಿತಿಯನ್ನು ನೀಡುವುದು ಅವರ ಬರವಣಿಗೆಯ ಮೂಲ ಸಿದ್ಧಾಂತ.
