
ವಿವಾದಕ್ಕೆ ಸಿಲುಕಿದ ಮಂಗಳೂರು ಕರ್ನಾಟಕ ಬ್ಯಾಂಕ್
ಕರ್ನಾಟಕ ಬ್ಯಾಂಕ್ [Karnataka Bank] 100 ವರ್ಷ ಪೂರ್ಣಗೊಳಿಸುತ್ತಿರುವ ಸಂಭ್ರಮದಲ್ಲಿದೆ. ಈ ಸಮಯದಲ್ಲಿ ಶತಮಾನೋತ್ಸವದ ಸಂಭ್ರಮಾಚರಣೆಗೆ ಒಂದು ಜಾಹಿರಾತನ್ನು ರೆಡಿ ಮಾಡಿತ್ತು. ಕರ್ನಾಟಕ ಬ್ಯಾಂಕ್ ನ ಈ ಜಾಹಿರಾತು ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ಜಾಹಿರಾತಿಗೆ ಈಗ ಅಲ್ಲಿನ ಜನರು ಆಕ್ಷೇಪವನ್ನು ವ್ಯಕ್ತಪಡಿಸುತ್ತಿದ್ದಾರೆ.
ಈ ಜಾಹಿರಾತು ಹಿಂದುತ್ವದ ವಿರುದ್ಧ ಇದೆ ಎಂದು ಅಲ್ಲಿನ ಜನರು ಆಕ್ರೋಶವನ್ನು ವ್ಯಕ್ತಪಡಿಸ್ತಾ ಇದ್ದಾರೆ. ಕರ್ನಾಟಕ ಬ್ಯಾಂಕ್ ಮಾಡಿರುವ ಈ ಜಾಹಿರಾತಿನಲ್ಲಿ ನಾಲ್ಕು ಜನ ಮಾಡೆಲ್ ಇದ್ದಾರೆ. ಆದರೆ ಆ ಮಾಡೆಲ್ ಗಳು ಬಿಂದಿಯನ್ನೇ ಹಾಕಿಲ್ಲ. ಬಿಂದಿ ಹಾಕುವುದು ನಮ್ಮ ದೇಶದ ಸಂಕೇತ ಆದರೆ ಜಾಹಿರಾತಿನಲ್ಲಿ ಬಿಂದಿಯನ್ನ ಹಾಕಿಸಿಲ್ಲ, ಇದು ಮುಸ್ಲಿಮರನ್ನು ಓಲೈಸೋದಕ್ಕೆ ಹಾಗೂ ಹಿಂದುಗಳನ್ನ ಅವಹೇಳನ ಮಾಡುವುದಕ್ಕೆ ಅಂತ ಜನರು ಕಿಡಿಕಾರುತ್ತಾ ಇದ್ದಾರೆ.
ಕರ್ನಾಟಕ ಬ್ಯಾಂಕ್ ಮಾಡಿದ ಈ ಜಾಹಿರಾತಿಗೆ ಕರಾವಳಿ ಭಾಗದಲ್ಲಿ ವಿರೋಧ ವ್ಯಕ್ತವಾಗ್ತಿದೆ. ಹಾಗೆ ಈ ವಿಷಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಪೋಸ್ಟ್ ಗಳನ್ನೂ ಸಹ ಮಾಡ್ತಾ ಇದ್ದಾರೆ. ಹಲವಾರು ಜನರು ಪೋಸ್ಟ್ ಮಾಡಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಹಾಗೆಯೆ ಇನ್ನು ಕೆಲವರು ಬಾಯ್ಕಾಟ್ ಕರ್ನಾಟಕ ಬ್ಯಾಂಕ್ {boycott karnataka bank} ಅಂತಾನೂ ಪೋಸ್ಟ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ Karnataka Bank ನ ಅಧಿಕಾರಿಗಳನ್ನು ಟ್ಯಾಗ್ ಮಾಡುತ್ತಿದ್ದಾರೆ ನೆಟ್ಟಿಗರು. ಕರಾವಳಿ ಮೂಲದ ಬ್ಯಾಂಕ್ ಆಗಿರುವ ಕರ್ನಾಟಕ ಬ್ಯಾಂಕ್ ಶತಮಾನೋತ್ಸವದ ಜಾಹಿರಾತಿಗೆ ಕರಾವಳಿ ವಲಯದಲ್ಲೇ ವಿರೋಧ ವ್ಯಕ್ತವಾಗ್ತಾ ಇದೆ.

ಇಲ್ಲಿ ನೀವು ಸಹ ಕರ್ನಾಟಕ ಬ್ಯಾಂಕ್ ಫೇಸ್ಬುಕ್ ನಲ್ಲಿ ಮಾಡಿರುವ ಪೋಸ್ಟ್ ಗಳಿಗೆ ಜನರು ಯಾವ ರೀತಿಯಾಗಿ ಕಾಮೆಂಟ್ ಗಳನ್ನೂ ಮಾಡಿದ್ದಾರೆ ಅಂತ ನೋಡಬಹುದು. ಈ ಒಂದು ಜಾಹಿರಾತು ಇಷ್ಟೆಲ್ಲ ವಿವಾದಕ್ಕೆ ಕಾರಣವಾಗಿದೆ.
ಕರ್ನಾಟಕ ಬ್ಯಾಂಕ್ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಸಹ ಭಾಗಿಯಾಗಿದ್ದರು. ಆದರೆ ಈಗ ಆ ಪೋಸ್ಟ್ ನಲ್ಲಿ ಅನೇಕರು, ಬುರ್ಖಾ ಹಾಕಿದವರು ಈ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವವರೇ? ಯಾಕೆ ಈ ಓಲೈಕೆ ಎಂದು ಕಾಮೆಂಟ್ ಮಾಡಿದ್ದಾರೆ.
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.