
ಒಬ್ಬ ವ್ಯಕ್ತಿಯು ಅನುಸರಿಸುವ ಜೀವನ ಅಭ್ಯಾಸಗಳು ಅವನ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ. ಅಂತಹ ಕೆಲವೊಂದು ಅಭ್ಯಾಸಗಳು ಬ್ರೈನ್ ಸ್ಟ್ರೋಕ್ ಗೆ ಕೂಡ ಕಾರಣವಾಗಬಹುದು. ಬ್ರೈನ್ ಸ್ಟ್ರೋಕ್ ಅತ್ಯಂತ ಅಪಾಯಕಾರಿ ಯಾಕೆಂದರೆ ವ್ಯಕ್ತಿಯ ಮೆದುಳಿನ ಹಲವು ಭಾಗಗಳಿಗೆ ಸರಿಯಾದ ಪ್ರಮಾಣದ ಆಮ್ಲಜನಕ ಹಾಗೂ ಪೋಷಕಾಂಶ ತಲುಪದೇ ಇದ್ದಾಗ ಬ್ರೈನ್ ಸ್ಟ್ರೋಕ್ ಆಗುತ್ತೆ.
- ಈ ಅಭ್ಯಾಸಗಳು ಬ್ರೈನ್ ಸ್ಟ್ರೋಕ್ ಗೆ ಕಾರಣವಾಗಬಹುದು
- ಬ್ರೈನ್ ಸ್ಟ್ರೋಕ್ ಅತ್ಯಂತ ಅಪಾಯಕಾರಿ
- ಮೆದುಳಿಗೆ ಸರಿಯಾದ ಪೋಷಕಾಂಶ ಹಾಗೂ ಓಕ್ಸಿಜೆನ್ ತಲುಪದಿದ್ದಾಗ ಆಗುತ್ತೆ ಬ್ರೈನ್ ಸ್ಟ್ರೋಕ್
ಬ್ರೈನ್ ಸ್ಟ್ರೋಕ್ ಗೆ ಕಾರಣವಾಗುವ ಅಭ್ಯಾಸಗಳು
ಧೂಮಪಾನ: ಧೂಮಪಾನವನ್ನು ಮಾಡುವುದರಿಂದ ರಕ್ತಕೊರತೆಯ ಪಾರ್ಶ್ವವಾಯು ಅಪಾಯವನ್ನು ದ್ವಿಗುಣಗೊಳಿಸುತ್ತೆ. ಹೀಗೆ ಅತಿಯಾಗಿ ಧೂಮಪಾನ ಕೂಡ ಬ್ರೈನ್ ಸ್ಟ್ರೋಕ್ ಗೆ ಕಾರಣವಾಗಬಹುದು.
ಮಧ್ಯಪಾನ: ಸಾಂದರ್ಭಿಕವಾಗಿ ಮಧ್ಯ ಸೇವನೆ ಮಾಡಿದರೆ ಏನು ಆಗುವುದಿಲ್ಲ ಎಂದು ಹಲವು ಜನರು ನಂಬಿದ್ದಾರೆ. ಆದ್ರೆ ನೀವು ಇದನ್ನು ನಂಬುವುದು ತಪ್ಪು. ತಜ್ಞರು ಹೇಳಿದ ಪ್ರಕಾರ ಒಬ್ಬ ವ್ಯಕ್ತಿಯು ಪ್ರತಿದಿನ ಎರಡು ಪೆಗ್ ಹಾಕುವುದರಿಂದ ಅವನ ರಕ್ತದೊತ್ತಡ ಹಾಗೂ ಪಾರ್ಶ್ವವಾಯು ಅಂತಹ ಸಮಸ್ಯೆಗೆ ಒಳಗಾಗಬಹುದು.
ದೈಹಿಕ ಚಟುವಟಿಕೆಗಳನ್ನು ಮಾಡದೇ ಇರುವುದು: ಈ ಆಧುನಿಕ ಯುಗದಲ್ಲಿ ಒಂದೇ ಕಡೆ ಕುಳಿತು ಹಲವು ಕೆಲಸಗಳನ್ನು ಮಾಡುವುದು ಹೆಚ್ಚಾಗಿದೆ. ಇದರಿಂದ ಬೊಜ್ಜು ಹಾಗೂ ಅಧಿಕ ತೂಕ ಕೂಡ ಆಗಬಹುದು. ಸ್ಥೂಲಕಾಯದಂತಹ ಸಮಸ್ಯೆಗಳು ಕೂಡ ಬರಬಹುದು. ಅನೇಕ ರೋಗಗಳು ನಿಮ್ಮನ್ನು ಕಾಡಬಹುದು. ಹೀಗೆ ಆಗುವುದರಿಂದ ಬ್ರೈನ್ ಸ್ಟ್ರೋಕ್ ಆಗುವ ಸಂಭವ ಜಾಸ್ತಿ ಆಗಿರುತ್ತೆ. ಹಾಗಾಗಿ ಇದನ್ನು ತಪ್ಪಿಸಲು ಪ್ರತಿದಿನ ಸ್ವಲ್ಪ ಸಮಯದವರೆಗೆ ವ್ಯಾಯಾಮ ಮಾಡುವುದು ಉತ್ತಮ.
ಇವುಗಳನ್ನೂ ಓದಿ:
ಆಹಾರ ಸೇವನೆ ಮಾಡುವಾಗ ನೆಲದ ಮೇಲೆ ಯಾಕೆ ಕುಳಿತುಕೊಳ್ಳಬೇಕು
ರಸ್ಕ್ ತಿಂದರೆ ಎದುರಾಗುತ್ತೆ ಈ ಸಮಸ್ಯೆ
ಕೊರೊನ ತೀವ್ರತೆ ಹಾಗೂ ಲಕ್ಷಣಗಳು ಬದಲಾಗಿದೆ
ಒಂದು ಸಲ ಬಳಸಿದ ಎಣ್ಣೆಯನ್ನು ಮತ್ತೆ ಬಳಸಿದರೆ ಈ ಎಲ್ಲಾ ಕಾಯಿಲೆ ಬರಬಹುದು
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.