
Maha Shivaratri 2024: ಈ ವರ್ಷ ಶಿವರಾತ್ರಿಯುಮಾರ್ಚ್ 8 ಶುಕ್ರವಾರದಂದು ಬಂದಿದೆ. ಶಿವರಾತ್ರಿಯು ಪ್ರತಿವರ್ಷ ಹುಣ್ಣಿಮೆಯ 14ನೇ ದಿನದಂದು ಸಂಭವಿಸುತ್ತದೆ. ಹಿಂದೂ ಪುರಾಣಗಳು ಹೇಳುವ ಪ್ರಕಾರ ಈ ದಿನವೇ ಶಿವ ತಾಂಡವ ನೃತ್ಯವಾಡಿದ್ದು. ಈ ದಿನದಂದೇ ಶಿವನು ಪಾರ್ವತೀ ದೇವಿಯನ್ನು ವರಿಸಿದ್ದನು ಎಂದು ಹೇಳುತ್ತಾರೆ.
ಶಿವರಾತ್ರಿಯು ಮಹಾದೇವನಿಗೆ ಅತ್ಯಂತ ಪ್ರಿಯವಾದ ದಿನ. ಮಹಾಶಿವರಾತ್ರಿಯ ದಿನ ಶಿವನಿಗೆ ಪೂಜೆ ಮಾಡುವ ಭಕ್ತರಿಗೆ ವಿಶೇಷವಾಗಿ ಅನುಗ್ರಹ ನೀಡುತ್ತಾನೆ ಶಿವ. ಶಿವರಾತ್ರಿ ಹಬ್ಬದ ಆಚರಣೆ ಹಾಗೂ ಮಹತ್ವವನ್ನು ತಪ್ಪದೆ ತಿಳಿಯಿರಿ.
ಮಹಾ ಶಿವರಾತ್ರಿ ಹಬ್ಬದ ಮಹತ್ವ | Maha Shivaratri 2024
ಮಹಾ ಶಿವರಾತ್ರಿಯು ಪ್ರತಿವರ್ಷ ಫೆಬ್ರವರಿ ಅಥವಾ ಮಾರ್ಚ್ ತಿಂಗಳಿನಲ್ಲಿ ಬರುತ್ತೆ. ಭಕ್ತರು ಈ ದಿನವಿಡೀ ಉಪವಾಸವನ್ನು ಮಾಡಿ ಶಿವನ ಪೂಜೆ ಮಾಡುತ್ತಾರೆ.
ಮಹಾ ಶಿವರಾತ್ರಿಯ ದಿನ ಭಕ್ತರು ರಾತ್ರಿ ಇಡೀ ಜಾಗರಣೆ ಮಾಡುತ್ತಾರೆ. ಶಿವ ನಾಮ ಸ್ಮರಣೆ ಮಾಡುತ್ತಾರೆ. ಹಾಗೆಯೆ ಶಿವನ ದೇವಾಲಯಕ್ಕೆ ಹೋಗಿ ಶಿವನಿಗೆ ಇಷ್ಟವಾದ ವಸ್ತುಗಳನ್ನು ಸಮರ್ಪಿಸಬೇಕು.
ಇದನ್ನೂ ಓದಿ: ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು
ಶಿವರಾತ್ರಿ ಎಂದರೆ ಕತ್ತಲೆಗಳ ರಾತ್ರಿ. ಕತ್ತಲೆಯ ಹಬ್ಬವನ್ನು ಆಚರಣೆ ಮಾಡುವುದೇ ಮಹಾ ಶಿವರಾತ್ರಿ. ಶಿವ ಹಾಗೂ ಪಾರ್ವತಿಯು ಶಕ್ತಿಯ ಎರಡು ರೂಪಗಳಾಗಿವೆ. ಅವರಿಬ್ಬರೂ ಒಟ್ಟಿಗೆ ನಿಂತಾಗ ಮಾತ್ರ ಶಕ್ತಿ ಪರಿಪೂರ್ಣವಾಗುವುದು. ಶಿವರಾತ್ರಿಯು ದಾಂಪತ್ಯ ಜೀವನದಲ್ಲಿ ಪ್ರೀತಿ, ಹೊಂದಾಣಿಕೆ ಹಾಗೂ ಒಗ್ಗಟ್ಟನ್ನು ಸೂಚಿಸುತ್ತೆ.