ಚಂದ್ರ ಗ್ರಹಣ 2023
Lunar Eclipse 2023: ಚಂದ್ರ ಗ್ರಹಣ ಮೇ 5, 2023 ರಂದು ಸಂಭವಿಸಲಿದೆ. ಇದು ಈ ವರ್ಷದ ಎರಡನೇ ಗ್ರಹಣ. ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಹಾದುಹೋಗುವಾಗ ಚಂದ್ರ ಗ್ರಹಣ ಸಂಭವಿಸುತ್ತದೆ. ಪ್ರಪಂಚದಾದ್ಯಂತ ಅನೇಕ ಜನರು ಈ ಚಂದ್ರ ಗ್ರಹಣವನ್ನು ನೋಡಲು ಉತ್ಸುಕರಾಗಿದ್ದಾರೆ.
ಚಂದ್ರ ಗ್ರಹಣ 2023 ಯಾವಾಗ? ಗ್ರಹಣದ ಸಮಯ ಯಾವುದು?
ಚಂದ್ರ ಗ್ರಹಣವು ಸೂರ್ಯ ಗ್ರಹಣ ಆದ ಬಳಿಕ ನಿಖರವಾಗಿ 15 ದಿನಗಳ ನಂತರ ಸಂಭವಿಸಲಿದೆ. ಚಂದ್ರ ಗ್ರಹಣವು ರಾತ್ರಿ 8.45 ಕ್ಕೆ ಆರಂಭವಾಗುತ್ತದೆ ಮತ್ತು ತಡರಾತ್ರಿ 1 ಗಂಟೆಗೆ ಕೊನೆಗೊಳ್ಳುತ್ತದೆ. ಚಂದ್ರ ಗ್ರಹಣ ಆರಂಭವಾಗುವ 9 ಗಂಟೆಗಳ ಮುಂಚೆ ಅಶುದ್ಧ ಅವಧಿಯು ಆರಂಭವಾಗುತ್ತೆ.
ಆದರೆ ಈ ಬಾರಿಯ ಈ ಚಂದ್ರ ಗ್ರಹಣ ಭಾರತದಲ್ಲಿ ಗೋಚರವಾಗುತ್ತಿಲ್ಲ. ಹಾಗಾಗಿ ಇದನ್ನು ಪರಿಗಣಿಸಲಾಗುವುದಿಲ್ಲ. ಈ ಗ್ರಹಣವು ಭಾಗಶಃ ಚಂದ್ರ ಗ್ರಹಣವಾಗಿದೆ. ಈ ಚಂದ್ರ ಗ್ರಹಣವು ಆಸ್ಟ್ರೇಲಿಯಾ, ಯುರೋಪ್, ಆಫ್ರಿಕಾ, ಏಷ್ಯಾ, ಫೆಸಿಫಿಕ್, ಹಿಂದೂ ಮಹಾಸಾಗರ, ಅಟ್ಲಾಂಟಿಕ್ ಹಾಗೂ ಅಂಟಾರ್ಟಿಕಾದಲ್ಲಿ ಗೋಚರವಾಗಲಿದೆ.
ಜೀವನದಲ್ಲಿ ನೀವು ಯಾವತ್ತೂ ಸೋಲಬಾರದು ಎಂದರೆ ಚಾಣಕ್ಯನ ಈ ನೀತಿಯನ್ನು ಅನುಸರಿಸಿ
ಚಂದ್ರ ಗ್ರಹಣ 2023 ಯಾವಾಗ ಸಂಭವಿಸುತ್ತದೆ?
ಚಂದ್ರ ಗ್ರಹಣ ಮೇ 5, 2023 ರಂದು ರಾತ್ರಿ 8.45 ಕ್ಕೆ ಆರಂಭವಾಗುತ್ತದೆ ಮತ್ತು ತಡರಾತ್ರಿ 1 ಗಂಟೆಗೆ ಕೊನೆಗೊಳ್ಳುತ್ತದೆ
ಚಂದ್ರ ಗ್ರಹಣ ಯಾವಾಗ ಇದೆ?
ಚಂದ್ರ ಗ್ರಹಣ ಮೇ 5, 2023 ಶುಕ್ರವಾರದಂದು ಗೋಚರವಾಗಲಿದೆ
ಚಂದ್ರ ಗ್ರಹಣ 2023
ಮೇ 5, 2023 ಶುಕ್ರವಾರ
ಅಭಿಷೇಕ್ ಅವರು ಮಾಧ್ಯಮ ಕ್ಷೇತ್ರದಲ್ಲಿ ನಾಲ್ಕು ವರ್ಷದ ಅನುಭವ ಹೊಂದಿರುವ ಅನುಭವಸಂಪನ್ನ ಪತ್ರಕರ್ತ. ತಾಜಾ ಸುದ್ದಿ ಸಂಗ್ರಹಣೆ, ವರದಿಗಾರಿಕೆ, ಸಂದರ್ಶನ ಮತ್ತು ವಿವಿಧ ಪ್ರಸ್ತುತ ವಿಷಯಗಳ ವಿಶ್ಲೇಷಣೆಯಲ್ಲಿ ಅವರು ಪರಿಣತಿ ಹೊಂದಿದ್ದಾರೆ. ಓದುಗರಿಗೆ ಆಕರ್ಷಕ ಮತ್ತು ಮಾಹಿತಿಪೂರ್ಣ ವಿಷಯವನ್ನು ತಲುಪಿಸುವುದು ಅವರ ಬರವಣಿಗೆಯ ಮುಖ್ಯ ಲಕ್ಷಣ.
