
- ಶನಿ ಉತ್ತರ ಭಾದ್ರಪದ ನಕ್ಷತ್ರದ 2ನೇ ಪಾದಕ್ಕೆ ಜೂನ್ 7 ರಂದು ಪ್ರವೇಶ
- ಇಷ್ಟಾರ್ಥ ಸಿದ್ಧಿ, ಸಂಪತ್ತಿನ ವೃದ್ಧಿ, ಉದ್ಯೋಗ-ವ್ಯವಹಾರದಲ್ಲಿ ಭಾರಿ ಲಾಭ
- ಕನಸುಗಳು ನನಸಾಗುವ ಸಮಯ
ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿ ಮಹಾತ್ಮನನ್ನು ‘ಕರ್ಮಫಲದಾತ’ ಮತ್ತು ‘ನ್ಯಾಯದ ದೇವರು’ ಎಂದು ಕರೆಯಲಾಗುತ್ತದೆ. ನಮ್ಮ ಕೆಲಸ ಕಾರ್ಯಗಳಿಗೆ ತಕ್ಕಂತೆ ಫಲಿತಾಂಶ ನೀಡುವ ಶನಿದೇವ ಕೇವಲ ಕಷ್ಟಗಳನ್ನು ಮಾತ್ರ ನೀಡದೆ, ಶುಭ ಸ್ಥಾನದಲ್ಲಿದ್ದಾಗ ಅಪಾರ ಅದೃಷ್ಟ ಮತ್ತು ಸಮೃದ್ಧಿಯನ್ನೂ ಕರುಣಿಸುತ್ತಾನೆ. ನಿಮ್ಮ ಜಾತಕದಲ್ಲಿ ಶನಿಯು ಶುಭ ಸ್ಥಾನದಲ್ಲಿದ್ದಾಗ, ಶನಿ ಭುಕ್ತಿ, ಶನಿ ದಯೆ ಅಥವಾ ಶನಿ ಮಹಾದಶೆಯಂತಹ ಅನುಕೂಲಕರ ಯೋಗಗಳು ನಡೆಯುತ್ತಿದ್ದಾಗ, ಕಷ್ಟಕೊಡುವಾತನೆಂದೇ ಪರಿಗಣಿಸಲಾಗುವ ಶನಿಯಿಂದಲೇ ವ್ಯಕ್ತಿಯ ಜೀವನ ಉಜ್ವಲಿಸುತ್ತದೆ.
ಶನಿಯ ನಕ್ಷತ್ರ ಬದಲಾವಣೆ: ಜೂನ್ 7 ರಿಂದಲೇ ಗೋಲ್ಡನ್ ಟೈಮ್ ಆರಂಭ!
ವೈದಿಕ ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಗಳ ಪ್ರಕಾರ, ಮಾರ್ಚ್ 2025ರಲ್ಲಿ ಕುಂಭ ರಾಶಿ ತೊರೆದು ಮೀನ ರಾಶಿಯಲ್ಲಿ ಸಂಚರಿಸುತ್ತಿರುವ ಶನಿ ಮಹಾತ್ಮ, ಜೂನ್ 07, 2025ರಂದು ಉತ್ತರ ಭಾದ್ರಪದ ನಕ್ಷತ್ರದ ಎರಡನೇ ಪಾದಕ್ಕೆ ಪದಾರ್ಪಣೆ ಮಾಡಿದ್ದಾನೆ. ನವಗ್ರಹಗಳಲ್ಲಿ ಅತ್ಯಂತ ಶಕ್ತಿಶಾಲಿ ಗ್ರಹನಾದ ಶನಿ, ಪ್ರತಿಯೊಬ್ಬರಿಗೂ ಅವರವರ ಪಾಪ-ಪುಣ್ಯಗಳನ್ನು ಲೆಕ್ಕಹಾಕಿ ದಂಡಿಸುತ್ತಾನೆ. ಈ ಮಹತ್ವದ ನಕ್ಷತ್ರ ಸಂಚಾರದಿಂದ ಕೆಲವರ ಬದುಕಿನಲ್ಲಿ ‘ಶನಿ ಭುಕ್ತಿ’ ಆರಂಭವಾಗಿದ್ದು, ಇದು ಸಂಪೂರ್ಣ ‘ಗೋಲ್ಡನ್ ಟೈಮ್’ ಎಂದು ಜ್ಯೋತಿಷ್ಯ ತಜ್ಞರು ಹೇಳುತ್ತಾರೆ.
ಶನಿ ಉತ್ತರ ಭಾದ್ರಪದ ನಕ್ಷತ್ರದ ಎರಡನೇ ಪಾದಕ್ಕೆ ಪ್ರವೇಶಿಸಿದ ಬಳಿಕ, ಕೆಲವು ಅದೃಷ್ಟವಂತ ರಾಶಿಗಳ ಬದುಕಿನಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಆ ಅದೃಷ್ಟದ ರಾಶಿಗಳು ಮತ್ತು ಅವು ಪಡೆಯಲಿರುವ ಅದ್ಭುತ ಪ್ರಯೋಜನಗಳು ಇಲ್ಲಿವೆ ನೋಡಿ:
ವೃಶ್ಚಿಕ ರಾಶಿ (Scorpio): ಶನಿ ಉತ್ತರ ಭಾದ್ರಪದ ನಕ್ಷತ್ರದ ಎರಡನೇ ಪಾದಕ್ಕೆ ಪ್ರವೇಶಿಸುತ್ತಿದ್ದಂತೆ ವೃಶ್ಚಿಕ ರಾಶಿಯವರ ಅದೃಷ್ಟದ ಬಾಗಿಲುಗಳು ತೆರೆಯಲಿವೆ. ವೃತ್ತಿ ಕ್ಷೇತ್ರದಲ್ಲಿ ಬಡ್ತಿ, ಉನ್ನತ ಅಧಿಕಾರದ ಭಾಗ್ಯ ದೊರೆಯಲಿದ್ದು, ನಿಮ್ಮ ಸ್ಥಾನಮಾನ ಹೆಚ್ಚಾಗಲಿದೆ. ನಿಮ್ಮ ಆದಾಯದಲ್ಲಿ ಭಾರಿ ಏರಿಕೆಯನ್ನು ಕಾಣುವಿರಿ, ಇದರಿಂದ ಸಂಪತ್ತಿನ ಒಡೆಯರಾಗುವಿರಿ. ಸ್ವಂತ ಮನೆ ಅಥವಾ ಆಸ್ತಿಯ ಕನಸು ಕಂಡವರಿಗೆ, ಅದಕ್ಕೆ ಸಂಬಂಧಿಸಿದ ಅಡೆತಡೆಗಳು ನಿವಾರಣೆಯಾಗಲಿದ್ದು, ನಿಮ್ಮ ಕನಸು ಕೈಗೂಡಲಿದೆ.
ಇದನ್ನೂ ಓದಿ: ಈ 3 ರಾಶಿಗಳಲ್ಲಿ ಜನಿಸಿದ ಹೆಣ್ಣು ಮಕ್ಕಳು ಹೆಜ್ಜೆ ಇಟ್ಟಲ್ಲೆಲ್ಲಾ ಸಂಪತ್ತು: ನೀವೂ ಶ್ರೀಮಂತರಾಗೋದು ಗ್ಯಾರಂಟಿ!
ಕನ್ಯಾ ರಾಶಿ (Virgo): ಶನಿ ನಕ್ಷತ್ರ ಸಂಚಾರದ ಈ ಪ್ರಭಾವದಿಂದ ಕನ್ಯಾ ರಾಶಿಯವರಿಗೆ ಬಹುದಿನಗಳ ನಿಮ್ಮ ಕನಸುಗಳು ಈಡೇರಲಿವೆ. ಸಂಬಂಧಗಳಲ್ಲಿ ಉಂಟಾಗಿದ್ದ ಬಿರುಕುಗಳು ಸರಿಹೋಗಲಿದ್ದು, ಪ್ರೀತಿ ಮತ್ತು ಸಾಮರಸ್ಯ ಹೆಚ್ಚಾಗಲಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ಈ ಅವಧಿಯಲ್ಲಿ ಸಂಪೂರ್ಣ ಫಲ ದೊರೆಯಲಿದ್ದು, ಸ್ಥಗಿತಗೊಂಡಿರುವ ಕೆಲಸಗಳು ಅನಿರೀಕ್ಷಿತ ವೇಗದಲ್ಲಿ ಮುಂದುವರಿಯಲಿವೆ. ಇದರಿಂದಾಗಿ ನೀವು ಭಾರೀ ಆದಾಯವನ್ನು ಗಳಿಸುವಿರಿ ಮತ್ತು ಆರ್ಥಿಕವಾಗಿ ಸದೃಢರಾಗುವಿರಿ.
ಮಕರ ರಾಶಿ (Capricorn): ಶನಿ ನಕ್ಷತ್ರ ಪರಿವರ್ತನೆಯು ಮಕರ ರಾಶಿಯವರಿಗೆ ಉದ್ಯೋಗ ರಂಗದಲ್ಲಿ ಭಾರೀ ಸಕಾರಾತ್ಮಕ ಬದಲಾವಣೆಗಳನ್ನು ತರಲಿದೆ. ಬಹುಕಾಲದಿಂದ ಸ್ಥಗಿತಗೊಂಡಿರುವ ಯೋಜನೆಗಳಲ್ಲಿ ಪ್ರಗತಿ ಕಾಣಲಿದ್ದು, ಯಶಸ್ಸಿನ ಮೆಟ್ಟಿಲು ಏರುವಿರಿ. ಇದರ ಜೊತೆಗೆ, ಬಂಪರ್ ಆದಾಯ ಗಳಿಸುವ ಸಾಧ್ಯತೆಗಳಿವೆ. ವ್ಯವಹಾರದಲ್ಲಿ ತೊಡಗಿರುವವರಿಗೆ ಇದು ಜಾಕ್ಪಾಟ್ ಎಂತಲೇ ಹೇಳಬಹುದು. ಹೊಸ ಅವಕಾಶಗಳು ಬಾಗಿಲು ತಟ್ಟಲಿದ್ದು, ಆರ್ಥಿಕವಾಗಿ ಅಭೂತಪೂರ್ವ ಯಶಸ್ಸು ನಿಮ್ಮದಾಗಲಿದೆ.
ಅದೃಷ್ಟದ ಮಹಾ ತಿರುವು! 50 ವರ್ಷಗಳ ಬಳಿಕ ‘ಮಹಾಲಕ್ಷ್ಮಿ ರಾಜಯೋಗ’: ಈ 3 ರಾಶಿಗೆ ಕುಬೇರನ ಕೃಪೆ, ಕೋಟ್ಯಾಧಿಪತಿ ಯೋಗ!
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು, ವೈದಿಕ ಜ್ಯೋತಿಷ್ಯದ ಲೆಕ್ಕಾಚಾರಗಳು ಮತ್ತು ಮಾಹಿತಿಯನ್ನು ಆಧರಿಸಿದೆ.)