- ಸೂರ್ಯ, ಚಂದ್ರ ಮತ್ತು ಗುರು ಗ್ರಹಗಳು ಮಿಥುನ ರಾಶಿಯಲ್ಲಿ ಸಂಯೋಗ
- ಹಣದ ಹರಿವು, ಉದ್ಯೋಗದಲ್ಲಿ ಬಡ್ತಿ, ವ್ಯವಹಾರದಲ್ಲಿ ಯಶಸ್ಸು
- ಹಠಾತ್ ಧನ ಲಾಭ, ಹೊಸ ಆದಾಯ ಮೂಲಗಳ ಸೃಷ್ಟಿ
ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಸಂಚಾರ ಮತ್ತು ಅವುಗಳ ಸಂಯೋಗಗಳು ನಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಗಳನ್ನು ತರುತ್ತವೆ. ಗ್ರಹಗಳ ರಾಜ ಸೂರ್ಯ, ಜ್ಞಾನ ಮತ್ತು ಸಮೃದ್ಧಿಯ ಕಾರಕ ಗುರು, ಹಾಗೂ ಮನಸ್ಸಿನ ಕಾರಕ ಚಂದ್ರ – ಈ ಮೂರು ಪ್ರಬಲ ಗ್ರಹಗಳು ಒಂದೇ ರಾಶಿಯಲ್ಲಿ ಮೈತ್ರಿಯಾಗಲಿವೆ! ಈ ಅದ್ಭುತ ಸಂಯೋಗದಿಂದಾಗಿ, ಇನ್ನು ಕೇವಲ 24 ಗಂಟೆಗಳಲ್ಲಿ ಕೆಲವು ಅದೃಷ್ಟದ ರಾಶಿಗಳ ಬದುಕಿನಲ್ಲಿ ಭಾಗ್ಯೋದಯವಾಗಲಿದ್ದು, ಎಲ್ಲೆಲ್ಲೂ ಹಣದ ಹೊಳೆಯೇ ಹರಿಯಲಿದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಕೈ ಹಾಕಿದ ಕೆಲಸದಲ್ಲೆಲ್ಲಾ ಜಯ ಸಿಗಲಿದ್ದು, ಅದೃಷ್ಟ ಅಂದ್ರೆ ಇದಪ್ಪಾ ಎನ್ನುವಂತೆ ಇವರ ಅದೃಷ್ಟ ಖುಲಾಯಿಸಲಿದೆ!
ಈ ಮೂರು ಪ್ರಮುಖ ಗ್ರಹಗಳಾದ ಸೂರ್ಯ, ಚಂದ್ರ ಮತ್ತು ಗುರು ಮಿಥುನ ರಾಶಿಯಲ್ಲಿ ಸೇರಿಕೊಳ್ಳಲಿದ್ದು, ಇದರಿಂದ ಐದು ಜನ್ಮ ರಾಶಿಗಳ ಅದೃಷ್ಟವು ಬೆಳಗಲಿದೆ. ಈ ರಾಶಿಗಳ ಆದಾಯದಲ್ಲಿ ಭಾರಿ ಹೆಚ್ಚಳವಾಗುವ ಸಾಧ್ಯತೆಗಳಿದ್ದು, ಉದ್ಯೋಗದಲ್ಲಿ ಬಡ್ತಿ, ವ್ಯವಹಾರದಲ್ಲಿ ಲಾಭ, ಮತ್ತು ನಿರೀಕ್ಷಿಸದ ಕಡೆಗಳಿಂದ ಹಣದ ಹರಿವು ಉಂಟಾಗಲಿದೆ.
ಹಾಗಾದರೆ, ಈ ಅದ್ಭುತ ಗ್ರಹ ಸಂಯೋಗದಿಂದ ಯಾರ ಅದೃಷ್ಟ ಬದಲಾಗಲಿದೆ, ಯಾರಿಗೆ ಹಣದ ಮಹಾಪೂರ ಹರಿದುಬರಲಿದೆ ಎಂದು ತಿಳಿಯೋಣ:
3 ಗ್ರಹಗಳ ಸಂಯೋಗದಿಂದ ಅದೃಷ್ಟ ಬದಲಾಗಲಿರುವ 5 ರಾಶಿಗಳು
1. ಕನ್ಯಾ ರಾಶಿ (Virgo): ಕನ್ಯಾ ರಾಶಿಯವರಿಗೆ ಈ ಗ್ರಹ ಸಂಯೋಗದಿಂದ ವೃತ್ತಿ ಮತ್ತು ವ್ಯವಹಾರದಲ್ಲಿ ಅಪಾರ ಲಾಭ ಸಿಗಲಿದೆ. ನೀವು ಕೈ ಹಾಕುವ ಪ್ರತಿ ಕೆಲಸದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು. ಹೊಸ ಅವಕಾಶಗಳು ನಿಮ್ಮನ್ನು ಅರಸಿ ಬರಲಿದ್ದು, ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲವನ್ನು ಪಡೆಯುತ್ತೀರಿ. ಕುಟುಂಬದಲ್ಲಿ, ವಿಶೇಷವಾಗಿ ತಂದೆಯೊಂದಿಗಿನ ನಿಮ್ಮ ಸಂಬಂಧವು ಇನ್ನಷ್ಟು ಬಲಗೊಳ್ಳಲಿದೆ.
2. ವೃಷಭ ರಾಶಿ (Taurus): ವೃಷಭ ರಾಶಿಯವರಿಗೆ ಈ ಗ್ರಹ ಸಂಯೋಗವು ಹಠಾತ್ ಹಣದ ಲಾಭದ ಸಾಧ್ಯತೆಗಳನ್ನು ತರುತ್ತದೆ. ನಿಮಗೆ ಹೊಸ ಆದಾಯದ ಮೂಲಗಳು ಸೃಷ್ಟಿಯಾಗುತ್ತವೆ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಮೊದಲಿಗಿಂತಲೂ ಬಲಗೊಳ್ಳಲಿದೆ. ನಿಮ್ಮ ಮಾನಸಿಕ ಶಕ್ತಿ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೆಚ್ಚಾಗುತ್ತದೆ. ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ನಿಮ್ಮ ಚಟುವಟಿಕೆ ಹೆಚ್ಚಲಿದ್ದು, ಇದರಿಂದ ಗೌರವವೂ ಹೆಚ್ಚುತ್ತದೆ.
3. ವೃಶ್ಚಿಕ ರಾಶಿ (Scorpio): ವೃಶ್ಚಿಕ ರಾಶಿಯವರಿಗೆ ವ್ಯವಹಾರ ಮತ್ತು ಆರ್ಥಿಕ ವಿಷಯಗಳಲ್ಲಿ ಭಾರಿ ಲಾಭವಾಗಲಿದೆ. ಹೊಸ ಮೂಲಗಳಿಂದ ಹಣಕಾಸಿನ ಲಾಭಗಳು ದೊರೆಯುತ್ತವೆ. ನಿಮಗೆ ಒಳ್ಳೆಯ ಸುದ್ದಿ ಬರುವ ಸಾಧ್ಯತೆಗಳಿವೆ. ವ್ಯವಹಾರದಲ್ಲಿ ಆರ್ಥಿಕ ಬಲ ಹೆಚ್ಚಾಗಲಿದ್ದು, ನಿಮ್ಮ ಯೋಜನೆಗಳು ಯಶಸ್ವಿಯಾಗುತ್ತವೆ. ಆರೋಗ್ಯವು ಉತ್ತಮವಾಗಿರುತ್ತದೆ, ಮತ್ತು ಹಣದ ಪರಿಸ್ಥಿತಿ ಮೊದಲಿಗಿಂತ ಗಮನಾರ್ಹವಾಗಿ ಸುಧಾರಿಸುತ್ತದೆ.
ಇದನ್ನೂ ಓದಿ: ಕಡು ಬಡತನದಲ್ಲೇ ಹುಟ್ಟಿದರೂ 40ಕ್ಕೆ ಕೋಟ್ಯಾಧಿಪತಿ: ಈ ದಿನಾಂಕದಲ್ಲಿ ಜನಿಸಿದವರಿಗೆ ಶನಿದೇವನ ಕೃಪೆಯೇ ಶ್ರೀರಕ್ಷೆ!
4. ಸಿಂಹ ರಾಶಿ (Leo): ಸಿಂಹ ರಾಶಿಯವರಿಗೆ ಈ ಗ್ರಹಗಳ ಮೈತ್ರಿಯು ಆದಾಯದಲ್ಲಿ ಅಗಾಧವಾದ ಹೆಚ್ಚಳವನ್ನು ತರಬಹುದು. ನಿಮಗೆ ಹೊಸ ಆದಾಯದ ಮೂಲಗಳು ಸೃಷ್ಟಿಯಾಗುವ ಸಾಧ್ಯತೆಗಳಿವೆ. ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದ್ದು, ಕೆಲವು ಹೊಸ ಮತ್ತು ಲಾಭದಾಯಕ ಅವಕಾಶಗಳನ್ನು ಪಡೆಯಬಹುದು. ನಿಮ್ಮ ದೀರ್ಘಕಾಲದಿಂದ ಬಾಕಿ ಇರುವ ಕೆಲಸಗಳು ಮತ್ತೆ ಪ್ರಾರಂಭವಾಗಬಹುದು ಮತ್ತು ಯಶಸ್ವಿಯಾಗಬಹುದು. ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ, ಅದರಿಂದ ಉತ್ತಮ ಲಾಭ ಗಳಿಸಲು ಇದು ಅತ್ಯುತ್ತಮ ಸಮಯ.
5. ಕರ್ಕಾಟಕ ರಾಶಿ (Cancer): ಕರ್ಕಾಟಕ ರಾಶಿಯವರಿಗೆ ಈ ಸಂಯೋಗವು ಕುಟುಂಬದಲ್ಲಿ ಸಂತೋಷ ಮತ್ತು ಸಾಮರಸ್ಯವನ್ನು ತರುತ್ತದೆ. ಆಸ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ಲಾಭವಿರುತ್ತದೆ, ಆಸ್ತಿ ಖರೀದಿ ಅಥವಾ ಮಾರಾಟದಿಂದ ಧನ ಲಾಭವಾಗಬಹುದು. ಇದು ನಿಮ್ಮ ಆರ್ಥಿಕ ಸ್ಥಿತಿಯನ್ನು ಇನ್ನಷ್ಟು ಬಲಪಡಿಸುತ್ತದೆ. ಉದ್ಯೋಗದಲ್ಲಿ ಪ್ರಗತಿಯ ಸಾಧ್ಯತೆಗಳಿವೆ ಮತ್ತು ಹೊಸ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಉತ್ತಮ ಅವಕಾಶಗಳು ಸಿಗುತ್ತವೆ. ನಿಮ್ಮ ವೃತ್ತಿಜೀವನದಲ್ಲಿ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸಬಹುದು.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷ್ಯ ಲೆಕ್ಕಾಚಾರಗಳು, ಸಾಮಾನ್ಯ ನಂಬಿಕೆಗಳು ಮತ್ತು ಜ್ಯೋತಿಷ್ಯ ತಜ್ಞರ ಅಭಿಪ್ರಾಯಗಳನ್ನು ಆಧರಿಸಿದೆ. ವೈಯಕ್ತಿಕ ಜಾತಕದ ಆಧಾರದ ಮೇಲೆ ಫಲಿತಾಂಶಗಳು ಬದಲಾಗಬಹುದು)
ಅಭಿಷೇಕ್ ಅವರು ಮಾಧ್ಯಮ ಕ್ಷೇತ್ರದಲ್ಲಿ ನಾಲ್ಕು ವರ್ಷದ ಅನುಭವ ಹೊಂದಿರುವ ಅನುಭವಸಂಪನ್ನ ಪತ್ರಕರ್ತ. ತಾಜಾ ಸುದ್ದಿ ಸಂಗ್ರಹಣೆ, ವರದಿಗಾರಿಕೆ, ಸಂದರ್ಶನ ಮತ್ತು ವಿವಿಧ ಪ್ರಸ್ತುತ ವಿಷಯಗಳ ವಿಶ್ಲೇಷಣೆಯಲ್ಲಿ ಅವರು ಪರಿಣತಿ ಹೊಂದಿದ್ದಾರೆ. ಓದುಗರಿಗೆ ಆಕರ್ಷಕ ಮತ್ತು ಮಾಹಿತಿಪೂರ್ಣ ವಿಷಯವನ್ನು ತಲುಪಿಸುವುದು ಅವರ ಬರವಣಿಗೆಯ ಮುಖ್ಯ ಲಕ್ಷಣ.
