- ಆಗಸ್ಟ್ 17ರಂದು ಸೂರ್ಯ ಗ್ರಹವು ಸಿಂಹ ರಾಶಿಗೆ ಪ್ರವೇಶಿಸಿ, ಕೇತುವಿನೊಂದಿಗೆ ಸಂಯೋಗಗೊಳ್ಳಲಿದ್ದಾನೆ, ಇದು 18 ವರ್ಷಗಳ ನಂತರ ಸಂಭವಿಸುತ್ತಿರುವ ಅಪರೂಪದ ಘಟನೆ
- ಈ ರಾಶಿಗಳವರಿಗೆ ವೃತ್ತಿಜೀವನದಲ್ಲಿ ಪ್ರಗತಿ, ಹಣದ ಹರಿವು, ಉದ್ಯೋಗ ಪ್ರಾಪ್ತಿ, ಮತ್ತು ವ್ಯಾಪಾರದಲ್ಲಿ ಭಾರಿ ಲಾಭ ಸಿಗುವ ಯೋಗವಿದೆ
ಜ್ಯೋತಿಷ್ಯ ಶಾಸ್ತ್ರದಲ್ಲಿ, ಗ್ರಹಗಳ ಚಲನೆಯು ನಮ್ಮ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ, ಸೂರ್ಯ ಮತ್ತು ಕೇತು ಗ್ರಹಗಳನ್ನು ಶತ್ರುಗಳು ಎಂದು ಪರಿಗಣಿಸಲಾಗುತ್ತದೆ. ಆದರೆ, ಕೆಲವೊಮ್ಮೆ ಇವುಗಳ ಸಂಯೋಗವು ಅನಿರೀಕ್ಷಿತ ಮತ್ತು ಅದ್ಭುತ ಫಲಿತಾಂಶಗಳನ್ನು ತರುತ್ತದೆ. ಇದೀಗ, ಬರೋಬ್ಬರಿ 18 ವರ್ಷಗಳ ನಂತರ ಸೂರ್ಯ ಮತ್ತು ಕೇತು ಗ್ರಹಗಳು ಸಂಯೋಗಗೊಳ್ಳುತ್ತಿವೆ. ಈ ಅಪರೂಪದ ವಿದ್ಯಮಾನ ಕೆಲವು ರಾಶಿಗಳ ಪಾಲಿಗೆ ಅದೃಷ್ಟದ ಬಾಗಿಲನ್ನು ತೆರೆಯಲಿದೆ.
ಜ್ಯೋತಿಷ್ಯದ ಪ್ರಕಾರ, ಆಗಸ್ಟ್ 17ರಂದು ಗ್ರಹಗಳ ರಾಜನಾದ ಸೂರ್ಯ ಗ್ರಹವು ಕಟಕ ರಾಶಿಯಿಂದ ಸಿಂಹ ರಾಶಿಗೆ ಪ್ರವೇಶಿಸಲಿದ್ದಾನೆ. ಸಿಂಹ ರಾಶಿಯಲ್ಲಿ ಈಗಾಗಲೇ ಕೇತು ಗ್ರಹವು ಸಂಚಾರ ಮಾಡುತ್ತಿದೆ. ಇದರಿಂದಾಗಿ ಈ ಎರಡು ಗ್ರಹಗಳ ಅಪರೂಪದ ಸಂಯೋಗವು ರೂಪುಗೊಳ್ಳಲಿದೆ. ಈ ಸಂಯೋಗವು ಕೆಲವು ರಾಶಿಗಳ ಜೀವನದಲ್ಲಿ ಸಂಪತ್ತು, ಯಶಸ್ಸು ಮತ್ತು ಸಂತೋಷವನ್ನು ತರಲಿದೆ. ಆ ನಾಲ್ಕು ಅದೃಷ್ಟವಂತ ರಾಶಿಗಳು ಯಾವುವು ಎಂದು ನೋಡೋಣ ಬನ್ನಿ.
ಸೂರ್ಯ-ಕೇತುವಿನ ಸಂಯೋಗವು ಸಿಂಹ ರಾಶಿಯವರ ಜ್ಞಾನವನ್ನು ಹೆಚ್ಚಿಸಲಿದೆ. ನೀವು ಆಧ್ಯಾತ್ಮಿಕ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಾಗಿ ಭಾಗವಹಿಸುತ್ತೀರಿ, ಇದರಿಂದ ಸಾಮಾಜಿಕವಾಗಿ ಗೌರವ ಮತ್ತು ಪ್ರತಿಷ್ಠೆ ಪಡೆಯುತ್ತೀರಿ. ವೃತ್ತಿ ಜೀವನಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆಗಳು ಈ ಅವಧಿಯಲ್ಲಿ ಕೊನೆಗೊಳ್ಳಲಿವೆ. ಸಂಗಾತಿಯೊಂದಿಗೆ ಹೊರಗೆ ಸುತ್ತಾಡಲು ಹೋಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ನೀವು ಸರಿಯಾದ ಬಜೆಟ್ ರೂಪಿಸಿದರೆ, ಭವಿಷ್ಯದಲ್ಲಿ ಬಹಳಷ್ಟು ಆರ್ಥಿಕ ಲಾಭ ಗಳಿಸುವಿರಿ. ಕೆಲವು ಸಿಂಹ ರಾಶಿಯವರ ಸಂಗಾತಿಯ ಆದಾಯದಲ್ಲಿ ಕೂಡ ಹೆಚ್ಚಳವಾಗಬಹುದು.
ಮೇಷ ರಾಶಿಯವರ ಜಾತಕದ 5ನೇ ಮನೆಯಲ್ಲಿ ಸೂರ್ಯ-ಕೇತು ಸಂಯೋಗ ರೂಪುಗೊಳ್ಳಲಿದೆ. ಇದರಿಂದಾಗಿ ನಿಮ್ಮ ಬೌದ್ಧಿಕ ಕೌಶಲ್ಯಗಳು ಹೆಚ್ಚಾಗುತ್ತವೆ. ಇದು ನಿಮ್ಮ ವೃತ್ತಿ ಜೀವನ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಲಾಭ ತರಲಿದೆ. ಪ್ರೇಮ ಸಂಬಂಧಗಳಲ್ಲಿ ಸಕಾರಾತ್ಮಕ ಬದಲಾವಣೆಗಳು ಕಾಣಲಿವೆ. ಮಕ್ಕಳಿಗೆ ಸಂಬಂಧಿಸಿದಂತೆ ಶುಭ ಸುದ್ದಿ ಪಡೆಯಲಿದ್ದೀರಿ. ನಿಮ್ಮ ಆರ್ಥಿಕ ಸ್ಥಿತಿ ಮೊದಲಿಗಿಂತಲೂ ಸುಧಾರಿಸಲಿದೆ ಮತ್ತು ಆದಾಯ ಹೆಚ್ಚಿಸಲು ಹೊಸ ಮಾರ್ಗಗಳು ದೊರೆಯಲಿವೆ. ಅದೃಷ್ಟದ ಬೆಂಬಲದಿಂದ ಅಪಾರ ಸುಖ-ಸಂಪತ್ತು ಗಳಿಸುವಿರಿ.
ಇದನ್ನೂ ಓದಿ: ಸಾಕ್ಷಾತ್ ಲಕ್ಷ್ಮಿ ದೇವಿಯ ನೆಚ್ಚಿನ ರಾಶಿಗಳಿವು! ಇವರ ಬದುಕಿನಲ್ಲಿ ಎಂದಿಗೂ ಹಣದ ಕೊರತೆ ಬಾರದು!
ಸೂರ್ಯ-ಕೇತುವಿನ ಈ ಸಂಯೋಗದಿಂದ ಮಕರ ರಾಶಿಯವರ ಜೀವನದಲ್ಲಿ ಹಲವು ಸಮಸ್ಯೆಗಳಿಂದ ಮುಕ್ತಿ ದೊರೆಯಲಿದೆ. ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದರೆ, ಈ ಸಮಯದಲ್ಲಿ ನಿಮ್ಮ ಕನಸುಗಳು ಈಡೇರುವುದು. ಜೊತೆಗೆ, ನೀವು ಇಷ್ಟಪಡುವಂತಹ ಜಾಗದಲ್ಲಿ ಕೆಲಸ ದೊರಕುವ ಅವಕಾಶವಿದೆ. ಮನೆಯ ಸದಸ್ಯರೊಂದಿಗೆ ಉತ್ತಮ ಸಮಯ ಕಳೆಯುವಿರಿ. ಈ ಸಂದರ್ಭದಲ್ಲಿ ನೀವು ಮಾಡುವ ಪ್ರಯಾಣಗಳು ನಿಮಗೆ ಲಾಭ ತರಬಹುದು. ಅಪರಿಚಿತರ ಭೇಟಿಯಿಂದಲೂ ನಿಮಗೆ ಹೆಚ್ಚಿನ ಪ್ರಯೋಜನಗಳಾಗುವ ಸಾಧ್ಯತೆ ಇದೆ.
ಕೇತು ಮತ್ತು ಸೂರ್ಯ ಗ್ರಹಗಳ ಈ ಸಂಯೋಗದಿಂದ ತುಲಾ ರಾಶಿಯವರಿಗೆ ವ್ಯಾಪಾರದಲ್ಲಿ ಭಾರಿ ಲಾಭ ಗಳಿಸುವ ಯೋಗವಿದೆ. ಹೊಸ ವ್ಯವಹಾರ ಶುರು ಮಾಡಲು ಇದು ಉತ್ತಮ ಸಮಯ. ಈ ಅವಧಿಯಲ್ಲಿ ನಿಮಗೆ ಧನ ಸಂಪತ್ತಿಗೆ ಯಾವುದೇ ಕೊರತೆ ಉಂಟಾಗುವುದಿಲ್ಲ. ನೀವು ಹಣ ಉಳಿತಾಯ ಮಾಡಲು ಹೊಸ ಯೋಜನೆಗಳನ್ನು ರೂಪಿಸುವಿರಿ. ನಿಮ್ಮ ಆರೋಗ್ಯವು ಉತ್ತಮವಾಗಿರುವುದು. ಅದೃಷ್ಟದ ಬೆಂಬಲದಿಂದ ನೀವು ಮತ್ತಷ್ಟು ಆರ್ಥಿಕ ಪ್ರಗತಿ ಸಾಧಿಸುತ್ತೀರಿ.
ಇದನ್ನೂ ಓದಿ: ಶ್ರಾವಣದಲ್ಲಿ ಅದೃಷ್ಟದ ಸುರಿಮಳೆ: ಲಕ್ಷ್ಮಿ ನಾರಾಯಣ ಯೋಗ ಯೋಗದಿಂದ ಈ ರಾಶಿಗಳಿಗೆ ಮುಟ್ಟಿದ್ದೆಲ್ಲಾ ಚಿನ್ನ!
ಆರಾಧ್ಯ ಅವರು ಐದು ವರ್ಷಗಳಿಂದ ಜ್ಯೋತಿಷ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಅನುಭವ ಹೊಂದಿರುವ ಕಂಟೆಂಟ್ ರೈಟರ್. ಜ್ಯೋತಿಷ್ಯ ವಿಷಯಗಳನ್ನು ಆಧಾರಿತ ಮಾಹಿತಿಯೊಂದಿಗೆ ಸಂಶೋಧಿಸಿ, ಸರಳ ಮತ್ತು ನಿಖರ ರೀತಿಯಲ್ಲಿ ಓದುಗರಿಗೆ ತಲುಪಿಸುವಲ್ಲಿ ಅವರಿಗೆ ವಿಶೇಷ ನೈಪುಣ್ಯ ಇದೆ. ವಿಶ್ವಾಸಾರ್ಹ ಮತ್ತು ಉಪಯುಕ್ತ ಮಾಹಿತಿಯನ್ನು ನೀಡುವುದು ಅವರ ಬರವಣಿಗೆಯ ಮೂಲ ಸಿದ್ಧಾಂತ.
