
Lord Rama: ರಾಮಾಯಣದಲ್ಲಿ ಪ್ರಭು ಶ್ರೀ ರಾಮನ ಸೌಂದರ್ಯದ ಬಗ್ಗೆ ಉಲ್ಲೇಖವಿದೆ. ಶ್ರೀ ರಾಮನ ರೂಪದ ಬಗ್ಗೆ ನಾವು ರಾಮಾಯಣದ ಕತೆಗಳಲ್ಲಿ ಕೇಳಿದ್ದೇವೆ. ಆದರೆ ಸರಿಯಾದ ಫೋಟೋವನ್ನು ಯಾರು ಕೂಡ ನೋಡಿರಲೂ ಸಾಧ್ಯವಿಲ್ಲ. ಆದರೆ ಈಗ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮುಖಾಂತರ ಶ್ರೀ ರಾಮ ತನ್ನ 21 ನೇ ವಯಸ್ಸಿನಲ್ಲಿ ಯಾವ ರೀತಿ ಇದ್ದ ಎಂಬುದನ್ನ ತೋರಿಸಿದ್ದಾರೆ.
ಈಗ ಸಾಮಾಜಿಕ ಜಾಲತಾಣದಲ್ಲಿ ಶ್ರೀ ರಾಮನ ಈ ಫೋಟೋ ಎಲ್ಲಾ ಕಡೆ ವೈರಲ್ ಆಗುತ್ತಿದೆ. ಶ್ರೀ ರಾಮ ತನ್ನ 21 ನೇ ವಯಸ್ಸಿನಲ್ಲಿ ಎಷ್ಟು ಸುಂದರವಾಗಿದ್ದ ಎಂಬುದನ್ನ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನೀಡಿರುವ ಫೋಟೋ ಮುಖಾಂತರ ನೋಡಬಹುದಾಗಿದೆ. ವಾಲ್ಮೀಕಿ ರಾಮಾಯಣ ಹಾಗೂ ರಾಮಚರಿತ ಮಾನಸ ಹಾಗೂ ಇತರೆ ಪುಸ್ತಗಳಲ್ಲಿ ನೀಡಿರುವ ಮಾಹಿತಿಯನ್ನು ಆಧಾರವಾಗಿಸಿಕೊಂಡು ಈ ಚಿತ್ರವನ್ನು ರಚನೆ ಮಾಡಲಾಗಿದೆ.
ಬ್ರಾಹ್ಮೀ ಮೂಹೂರ್ತದಲ್ಲಿ ಎದ್ದರೆ ಏನೆಲ್ಲಾ ಲಾಭವಿದೆ ನೋಡಿ
ಈ ಫೋಟೋ ಬಗ್ಗೆ ಹಲವಾರು ಜನರು ಉತ್ತಮ ಅಭಿಪ್ರಾಯವನ್ನು ನೀಡಿದ್ದಾರೆ. ಇದು ಶ್ರೀ ರಾಮ ಹೇಗಿದ್ದ ಎಂಬುದನ್ನ ನಾವು ಊಹಿಸಿಕೊಳ್ಳಬಹುದು. ವಾಲ್ಮೀಕಿ ರಾಮಾಯಣದಲ್ಲಿ ಶ್ರೀ ರಾಮನ ರೂಪ ಯಾವ ರೀತಿಯಾಗಿತ್ತು ಎನ್ನುವುದನ್ನು ತಿಳಿಯೋಣ ಬನ್ನಿ.
ಪ್ರಭು ಶ್ರೀ ರಾಮನ ಮುಖವು ಚಂದ್ರನಂತೆ ಪ್ರಕಾಶಮಾನವಾಗಿ, ಮೃದುವಾಗಿ ಸುಂದರವಾಗಿತ್ತು. ಅವನ ಕಣ್ಣುಗಳು ಕಮಲದ ಹೂವುಗಳಂತೆ ಸುಂದರವಾಗಿತ್ತು. ಶ್ರೀ ರಾಮನ ಮೂಗು ಉದ್ದ ಹಾಗೂ ಅವನ ಮುಖವು ಸ್ವಲ್ಪ ಮಟ್ಟಿಗೆ ನೀಳವಾಗಿತ್ತು. ಶ್ರೀ ರಾಮನ ತುಟಿಗಳ ಬಣ್ಣವು ಸೂರ್ಯನ ಬಣ್ಣದಂತೆ ಕೆಂಪಾಗಿತ್ತು. ಹಾಗೆಯೆ ಶ್ರೀ ರಾಮನ ಎರಡು ತುಟಿಗಳು ಸಮಾನವಾಗಿದ್ದವು. ಅವನ ಕಿವಿಗಳು ದೊಡ್ಡದಾಗಿದ್ದವು ಹಾಗೆಯೆ ಕೈ ಕಾಲುಗಳು ಕೂಡ ದೊಡ್ಡದಾಗಿದ್ದವು. ಇದೆ ಕಾರಣದಿಂದಾಗಿ ಶ್ರೀ ರಾಮನನ್ನು ಆಜಾನುಬಾಹು ಎಂದು ಕರೆಯುತ್ತಾರೆ. ಅವನ ದೇಹವು ನಿಖರವಾಗಿ ಒಂದೇ ಸಮನಾಗಿತ್ತು ಎಂದು ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖವಿದೆ.