
- ಈ ಸಂಖ್ಯೆಯವರಿಗೆ ಹನುಮನ ವಿಶೇಷ ಕೃಪೆಯಿಂದ ಸಂಪತ್ತು ಮತ್ತು ಯಶಸ್ಸು
- ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸುವ ಸಾಮರ್ಥ್ಯ
- ಆರ್ಥಿಕ ಸ್ಥಿತಿ ಬಲವರ್ಧನೆಗೆ ಹನುಮನ ಅನುಗ್ರಹ
ಜ್ಯೋತಿಷ್ಯ ಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರಕ್ಕೆ ವಿಶೇಷ ಮಹತ್ವವಿದೆ. ನಮ್ಮ ಜನ್ಮ ದಿನಾಂಕವು ನಮ್ಮ ಸ್ವಭಾವ, ವೃತ್ತಿ ಜೀವನ, ಯೋಚನೆಗಳು ಮತ್ತು ಭವಿಷ್ಯದಲ್ಲಿ ಎದುರಾಗಬಹುದಾದ ಕಷ್ಟಗಳ ಬಗ್ಗೆ ಅನೇಕ ರಹಸ್ಯಗಳನ್ನು ತೆರೆದಿಡುತ್ತದೆ. ಆದರೆ, ಈ ಕೆಲವು ನಿರ್ದಿಷ್ಟ ದಿನಾಂಕಗಳಲ್ಲಿ ಜನಿಸಿದವರ ಮೇಲೆ ಭಗವಾನ್ ಹನುಮಂತನ ವಿಶೇಷ ಕೃಪೆ ಇರುತ್ತದೆ ಎಂದು ಸಂಖ್ಯಾಶಾಸ್ತ್ರ ಹೇಳುತ್ತದೆ. ಹನುಮನ (Lord Hanuman) ಆಶೀರ್ವಾದದಿಂದ ಇವರು ಜೀವನದಲ್ಲಿ ಯಾವುದೇ ಸವಾಲು ಬಂದರೂ ಧೈರ್ಯದಿಂದ ಎದುರಿಸಿ, ಕೊನೆಯಲ್ಲಿ ಯಶಸ್ಸು ಮತ್ತು ಸಿರಿ ಸಂಪತ್ತನ್ನು ಗಳಿಸುವುದು ಖಂಡಿತ.
ಸಂಖ್ಯೆ 9ರ ಮಾಹಾತ್ಮ್ಯ: ಹನುಮಂತನ ಅನುಗ್ರಹ!
ಸಂಖ್ಯಾಶಾಸ್ತ್ರದ ಪ್ರಕಾರ, ಯಾವುದೇ ವ್ಯಕ್ತಿ ತಿಂಗಳ 9, 18 ಅಥವಾ 27ನೇ ದಿನಾಂಕದಂದು ಜನಿಸಿದ್ದರೆ, ಅವರ ಜನ್ಮ ಸಂಖ್ಯೆ 9 ಆಗಿರುತ್ತದೆ. ಈ ಸಂಖ್ಯೆ 9 ಮಂಗಳ ಗ್ರಹಕ್ಕೆ ಸೇರಿದ್ದು, ಮಂಗಳ ಗ್ರಹದ ಅಧಿದೇವತೆ ಹನುಮಂತ ಎಂದು ಹೇಳಲಾಗುತ್ತದೆ. ಆದ್ದರಿಂದ, ಈ ದಿನಾಂಕಗಳಲ್ಲಿ ಜನಿಸಿದವರ ಮೇಲೆ ಹನುಮಂತನ ವಿಶೇಷ ಆಶೀರ್ವಾದ ಸದಾ ಇರುತ್ತದೆ.
ಹನುಮಂತನ ಕೃಪೆಗೆ ಪಾತ್ರರಾಗುವವರು ಹೇಗಿರುತ್ತಾರೆ?
ಸಂಖ್ಯೆ 9 ಅನ್ನು ಹೊಂದಿರುವ ಜನರು ಬಹಳ ಸಾಹಸಿ, ಆತ್ಮವಿಶ್ವಾಸಿ ಮತ್ತು ಕಠಿಣ ಪರಿಶ್ರಮಿಗಳಾಗಿರುತ್ತಾರೆ. ಇವರು ಜೀವನದಲ್ಲಿ ಎಷ್ಟೇ ಕಷ್ಟಗಳು ಎದುರಾದರೂ ಹೆದರುವುದಿಲ್ಲ ಮತ್ತು ಎಲ್ಲಾ ಸವಾಲುಗಳನ್ನು ಧೈರ್ಯದಿಂದ ಎದುರಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇವರ ಒಳಗೆ ನಾಯಕತ್ವದ ಗುಣ ಹೆಚ್ಚಾಗಿರುತ್ತದೆ ಮತ್ತು ಧೈರ್ಯ ಹಾಗೂ ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿ ಹೊಂದಿರುವಂತಹ ಕ್ಷೇತ್ರದಲ್ಲಿ ಯಶಸ್ಸನ್ನು ಗಳಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಈ ಸಂಖ್ಯೆಯ ಜನರು ಜೀವನದ ಯಾವುದೇ ಕಷ್ಟದ ಪರಿಸ್ಥಿತಿಯಲ್ಲಿ ಒತ್ತಡಕ್ಕೆ ಒಳಗಾಗುವುದಿಲ್ಲ.
ಇದನ್ನೂ ಓದಿ: ಶ್ರೀಮಂತರಾಗ್ತೀರಾ? ಜೂನ್ನಲ್ಲಿ 300 ವರ್ಷಕ್ಕೊಮ್ಮೆ ಬರೋ 3 ರಾಜಯೋಗ: ಈ 5 ರಾಶಿಗೆ ‘ಕೋಟ್ಯಾಧಿಪತಿ ಯೋಗ’!
ಮಂಗಳ ಗ್ರಹ ಮತ್ತು ಹನುಮಂತನ ಸಂಬಂಧ:
ಮಂಗಳ ಗ್ರಹವು ಹನುಮಂತನ ಸಂಕೇತವಾಗಿದೆ. ನಿಮ್ಮ ಉದ್ಯೋಗ ಅಥವಾ ವ್ಯಾಪಾರದಲ್ಲಿ ಸಮಸ್ಯೆಗಳಿದ್ದರೆ, ಅದಕ್ಕೆ ಮಂಗಳನ ದುರ್ಬಲ ಸ್ಥಿತಿ ಕಾರಣವಾಗುವ ಸಾಧ್ಯತೆ ಇದೆ. ಮಂಗಳ ಉತ್ತಮ ಸ್ಥಿತಿಯಲ್ಲಿ ಇಲ್ಲದಿದ್ದರೆ, ಕಾಯಿಲೆಗಳು ಹೆಚ್ಚಾಗಬಹುದು. ಆದರೆ, ಮಂಗಳ ಶುಭವಾಗಿದ್ದರೆ, ಮನೆಯ ಎಲ್ಲಾ ಸದಸ್ಯರು ಆರೋಗ್ಯವಾಗಿರುತ್ತಾರೆ ಮತ್ತು ಸಕಾರಾತ್ಮಕ ಬದಲಾವಣೆಗಳು ನಡೆಯುತ್ತವೆ.
ತಮ್ಮ ಕಾರ್ಯಗಳನ್ನು ಸ್ವಾರ್ಥವಿಲ್ಲದೆ ಮಾಡುವವರು ಮಂಗಳ ಮತ್ತು ಹನುಮನ ಆಶೀರ್ವಾದವನ್ನು ಪಡೆಯುತ್ತಾರೆ. ಶುದ್ಧ ಮನಸ್ಸು ಮತ್ತು ಹೆದರಿಕೆ ಇಲ್ಲದೆ ಜನರ ನೆರವಿಗೆ ಬರುವವರು ಹಾಗೂ ನಿಸ್ವಾರ್ಥವಾಗಿ ಸೇವೆ ಸಲ್ಲಿಸುವವರು ಹನುಮಂತನ ವಿಶೇಷ ಕೃಪೆಗೆ ಪಾತ್ರರಾಗುತ್ತಾರೆ. ಇಂತಹ ವ್ಯಕ್ತಿಗಳು ಧೈರ್ಯವಂತರಾಗಿರುತ್ತಾರೆ ಮತ್ತು ಅವರ ನಿಷ್ಠಾವಂತ ಸ್ವಭಾವದಿಂದಾಗಿ ಆರ್ಥಿಕ ಸಮಸ್ಯೆಗಳು ಬಹಳ ಸಮಯದವರೆಗೆ ಇರುವುದಿಲ್ಲ. ಹನುಮಂತನ ಕೃಪೆಯಿಂದ ನೀವು ಜೀವನದ ಪ್ರತಿಯೊಂದು ಕಷ್ಟಗಳನ್ನು ಉತ್ತಮವಾಗಿ ನಿಭಾಯಿಸುವಿರಿ ಹಾಗೂ ಪರಿಹಾರವನ್ನು ಕಂಡುಕೊಳ್ಳುವಿರಿ.
ಹನುಮಂತನ ಕೃಪೆ ಪಡೆಯಲು ಏನು ಮಾಡಬೇಕು?
ನೀವು ಸಂಖ್ಯೆ 9 ಅನ್ನು ಹೊಂದಿರುವವರಾಗಿದ್ದರೆ ಮತ್ತು ಜೀವನದಲ್ಲಿ ಹನುಮಂತನ ಕೃಪೆಯನ್ನು ಪಡೆಯಬೇಕೆಂದಿದ್ದರೆ:
- ಮಂಗಳವಾರದ ದಿನ: ಹನುಮಾನ್ ಚಾಲೀಸಾವನ್ನು ನಿಯಮಿತವಾಗಿ ಪಠಿಸಿ.
- ಹನುಮಂತನ ದೇವಸ್ಥಾನಕ್ಕೆ ಭೇಟಿ: ಹನುಮಂತನಿಗೆ ಕಡಲೆ ಮತ್ತು ಕುಂಕುಮವನ್ನು ಅರ್ಪಿಸಿ.
- ಸೇವೆ: ಮಂಗಳವಾರದ ದಿನ ಅಗತ್ಯವಿರುವವರಿಗೆ ಸೇವೆಯನ್ನು ಮಾಡಿ.
- ಸಂಯಮ: ನಿಮ್ಮ ಕೋಪವನ್ನು ನಿಯಂತ್ರಣದಲ್ಲಿ ಇಡುವುದು ಮತ್ತು ಯಾವುದೇ ರೀತಿಯ ವಾದ ವಿವಾದಗಳಿಂದ ದೂರವಿರುವುದು ಉತ್ತಮ.
- ಮಂಗಳ ಗ್ರಹ ಬಲಪಡಿಸಲು: ನಿಮ್ಮ ಜಾತಕದಲ್ಲಿ ಮಂಗಳ ಗ್ರಹ ದುರ್ಬಲವಾಗಿದ್ದರೆ, ಮಂಗಳವಾರದಂದು ಬೆಳಿಗ್ಗೆ ಸ್ನಾನ ಮಾಡಿ ಕೆಂಪು ಬಣ್ಣದ ಬಟ್ಟೆ ಧರಿಸಿ. ಒಂದು ಪಾತ್ರೆಯಲ್ಲಿ ನೀರು ತೆಗೆದುಕೊಂಡು ಅದರಲ್ಲಿ ಕುಂಕುಮ ಸೇರಿಸಿ ಸೂರ್ಯ ದೇವನಿಗೆ ಅರ್ಪಿಸಿ. ಈ ಕ್ರಮವನ್ನು ಶ್ರದ್ಧಾ ಭಕ್ತಿಯಿಂದ ಮಾಡಿದರೆ, ಜಾತಕದಲ್ಲಿ ಮಂಗಳ ಗ್ರಹವು ಶಕ್ತಿಯುತವಾಗಿರುತ್ತದೆ ಮತ್ತು ಜೀವನದಲ್ಲಿ ಧನಾತ್ಮಕ ಬದಲಾವಣೆಗಳು ಸಂಭವಿಸುತ್ತದೆ.
ಯಾವುದೇ ತಿಂಗಳು 9, 18 ಮತ್ತು 27ನೇ ದಿನಾಂಕಗಳಂದು ಜನಿಸಿದವರು ಹನುಮಂತನ ವಿಶೇಷ ಕೃಪೆಗೆ ಪಾತ್ರರಾಗಿ, ಜೀವನದಲ್ಲಿ ಎಷ್ಟೇ ಸವಾಲುಗಳು ಎದುರಾದರೂ ಅವುಗಳನ್ನು ಧೈರ್ಯದಿಂದ ಎದುರಿಸಿ, ಕೊನೆಯಲ್ಲಿ ಯಶಸ್ಸು, ಗೌರವ, ಖ್ಯಾತಿ ಮತ್ತು ಧನ ಸಂಪತ್ತನ್ನು ಗಳಿಸುವುದು ಖಂಡಿತ.
ಇದನ್ನೂ ಓದಿ: ಇಂದಿನಿಂದಲೇ ‘ಗೋಲ್ಡನ್ ಟೈಮ್’ ಶುರು! ಗಜಕೇಸರಿ ಯೋಗದಿಂದ ಮನೆ-ವಾಹನ ಖರೀದಿ ಯೋಗ, ಅದೃಷ್ಟ ನಿಮ್ಮದೇ!
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.