ಪಾನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು ಎಂದು ಆದೇಶ ಬಂದಿದ್ದು ಎಲ್ಲರಿಗು ಗೊತ್ತು. ಹಲವು ಜನರು ಈಗಾಗಲೇ ಲಿಂಕ್ ಮಾಡಿದ್ದಾರೆ ಆದರೆ ಹಲವು ಜನರಿಗೆ ಇನ್ನು ಸಹ ಲಿಂಕ್ ಮಾಡಲು ಆಗಿಲ್ಲ. ನೀವು ಕೂಡ ಪಾನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್ ಮಾಡದಿದ್ದರೆ ನಿಮಗೆ ಇಲ್ಲಿದೆ ಒಂದು ಗುಡ್ ನ್ಯೂಸ್.
ಈಗ ಪಾನ್ ಕಾರ್ಡ್ ಲಿಂಕ್ ಮಾಡಲು ಗಡುವನ್ನು ವಿಸ್ತರಿಸಿದೆ. ಈಗ ಜೂನ್ 30 ರ ವರೆಗೆ ದಿನಾಂಕವನ್ನು ವಿಸ್ತರಿಸಲಾಗಿದೆ. ಮೊದಲ ಆದೇಶ ಬಂದ ನಂತರ ಸುಮಾರು ಹದಿಮೂರು ಕೋಟಿ ಜನರು ಪಾನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿದ್ದಾರೆ. ಆದರೆ ಈಗ ಕೊನೆಯ ದಿನಾಂಕ ಮುಂದುವರಿದಿದೆ.
ನಿಮ್ಮ ಪಾನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆಯೇ ಎಂದು ನೋಡುವುದು ಹೇಗೆ?
- ನೀವು ಮೊದಲು ಇನ್ಕಮ್ ಟ್ಯಾಕ್ಸ್ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ. ಇಲ್ಲಿ ಕ್ಲಿಕ್ ಮಾಡಿ
- ನಂತರ ಎಡ ಭಾಗದಲ್ಲಿ ಕಾಣುವ ಕ್ವಿಕ್ ಲಿಂಕ್ ಕಾಣಿಸುತ್ತೆ ಅಲ್ಲಿ ನೀವು ಆಧಾರ್ ಲಿಂಕ್ ಸ್ಟೇಟಸ್ ಕ್ಲಿಕ್ ಮಾಡಬೇಕು.
- ನಿಮ್ಮ ಪಾನ್ ಕಾರ್ಡ್ ನಂಬರ್ ಎಂಟರ್ ಮಾಡಿ.
- ನಂತರ ನಿಮ್ಮ ಆಧಾರ್ ನಂಬರ್ ಎಂಟರ್ ಮಾಡಿ
- ನಂತರ ವ್ಯೂ ಆಧಾರ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿದ್ರೆ ನಿಮ್ಮ ಪಾನ್ ಕಾರ್ಡ್ ಲಿಂಕ್ ಆಗಿದೆಯಾ ಎಂದು ನಿಮಗೆ ತಿಳಿಯುತ್ತೆ.
- ನಂತರ ಲಿಂಕ್ ಆಧಾರ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ.
- ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಆಡ್ ಮಾಡಿ.
- ಅಲ್ಲಿ ನಿಮಗೆ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಲಿಂಕ್ ಆಗಿದೆಯೇ ಅಥವಾ ಇಲ್ಲವೇ ಎಂದು ಸೂಚನೆ ಕಾಣಿಸುತ್ತೆ.