ಸೌತೆಕಾಯಿಯನ್ನು ಕೆಲವರು ಹಸಿಯಾಗಿಯೂ ಸೇವನೆ ಮಾಡುತ್ತಾರೆ ಹಾಗೆಯೆ ಅಡುಗೆಯಲ್ಲಿಯೂ ಕೂಡ ಸೌತೆಕಾಯಿಯ ಬಳಕೆ ಮಾಡುತ್ತಾರೆ. ಸೌತೆಕಾಯಿಯು ನಮ್ಮ ದೇಹಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಅನೇಕ ಲಾಭಗಳಿವೆ ಹಾಗಾಗಿ ಸೌತೆಕಾಯಿಯನ್ನು ಯಾವ ರೀತಿ ಬಳಸಬೇಕು ಎಂದು ನೋಡಿ.
- ಸೌತೆಕಾಯಿಯಲ್ಲಿ ಇದೆ ಅಧಿಕ ಪೋಷಕಾಂಶ
- ಕಲೆ ನಿವಾರಣೆ ಮಾಡುವಲ್ಲಿ ಸಹಾಯಕಾರಿ
- ಜೀರ್ಣಶಕ್ತಿ ವೃದ್ಧಿಗೊಳ್ಳುತ್ತೆ
ಸೌತೆಕಾಯಿಯಲ್ಲಿ ಕಡಿಮೆ ಕ್ಯಾಲರಿ ಇರುವುದರಿಂದ ಬೊಜ್ಜನ್ನು ಕರಗಿಸಲು ಇದರ ಸೇವನೆ ಮುಖ್ಯವಾಗಿದೆ ಇದರಲ್ಲಿ ಅನೇಕ ಪೋಷಕಾಂಶಗಳಿರುವುದರಿಂದ ದೇಹ ಬೆಳವಣಿಗೆಗೆ ಅನುಕೂಲಕರವಾಗಿದೆ
ಕಲೆಗಳ ನಿವಾರಣೆಗೆ ಸೌತೆಕಾಯಿಯ ಸಿಪ್ಪೆಯೊಂದಿಗೆ ನಿಂಬೆಹಣ್ಣಿನ ಸಿಪ್ಪೆಯನ್ನು ಬೆರೆಸಿ ನುಣಗೆ ಅರೆದು ಕಲೆಗಳಿರುವ ಜಾಗಕ್ಕೆ ಲೇಪಿಸಿದರೆ ಕಲೆಗಳು ಕ್ರಮೇಣ ಕಡಿಮೆಯಾಗುತ್ತವೆ. ಇದರ ಸೇವನೆಯಿಂದ ಮೂತ್ರ ವಿಸರ್ಜನೆಯ ಸಮಯದಲ್ಲಿ ಅಡ್ಡಿ ಆತಂಕಗಳು ಇದ್ದರೆ ನಿವಾರಣೆ ಆಗುವುದು.
ಸೌತೆಕಾಯಿಯನ್ನು ಹೆಚ್ಚು ಸೇವಿಸುವುದರಿಂದ ಮಲಬದ್ಧತೆ ದೂರವಾಗುತ್ತದೆ ಮತ್ತು ಉಪ್ಪಿನೊಂದಿಗೆ ಸೇರಿಸಿ ತಿಂದರೆ ಜೀರ್ಣಶಕ್ತಿ ವೃದ್ಧಿಗೊಳ್ಳುತ್ತವೆ. ಸೌತೆಕಾಯಿಯನ್ನು ಹೆಚ್ಚಿ ಮುಖದ ಮೇಲೆ ಇಟ್ಟರೆ ಮುಖದ ಕಾಂತಿ ಹೆಚ್ಚಿಸುತ್ತದೆ.
ಎಳೆ ಸೌತೆಕಾಯಿಯನ್ನು ಸೇವಿಸುವುದರಿಂದ ದೇಹದ ಶಕ್ತಿ ವೃದ್ಧಿಗೊಳ್ಳುತ್ತದೆ ಕಣ್ಣುಗಳ ಶಾಂತವಾಗಿ ರಾತ್ರಿ ವೇಳೆ ಚೆನ್ನಾಗಿ ನಿದ್ರೆ ಬರುತ್ತದೆ.
ಇದನ್ನು ಹೆಚ್ಚು ಪ್ರಮಾಣದಲ್ಲಿ ಸೇವಿಸುವುದರಿಂದ ರಕ್ತದ ಒತ್ತಡವನ್ನು ನಿಯಂತ್ರಿಸಬಹುದು.
ಕ್ಯಾನ್ಸರ್ ಹಾಗೂ ಬಂಜೆತನಕ್ಕೆ ಕಾರಣವಾಗುತ್ತೆ ಭಾರತದಲ್ಲಿ ಮಾರಾಟವಾಗುವ ಸ್ಯಾನಿಟರಿ ಪ್ಯಾಡ್
ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿದರೆ ಏನೆಲ್ಲಾ ಸಮಸ್ಯೆ ಎದುರಾಗುತ್ತೆ ನೋಡಿ
ನೀವು ಪ್ಯಾಕೆಟ್ ಹಾಲನ್ನು ಕುದಿಸಿ ಸೇವಿಸುತ್ತೀರಾ? ಹಾಗಾದ್ರೆ ತಪ್ಪದೆ ನೋಡಿ
ಈ ಸಮಸ್ಯೆ ಇರುವ ಜನರು ಬಾಳೆಹಣ್ಣನ್ನು ತಿನ್ನಬೇಡಿ
ಅಭಿಷೇಕ್ ಅವರು ಮಾಧ್ಯಮ ಕ್ಷೇತ್ರದಲ್ಲಿ ನಾಲ್ಕು ವರ್ಷದ ಅನುಭವ ಹೊಂದಿರುವ ಅನುಭವಸಂಪನ್ನ ಪತ್ರಕರ್ತ. ತಾಜಾ ಸುದ್ದಿ ಸಂಗ್ರಹಣೆ, ವರದಿಗಾರಿಕೆ, ಸಂದರ್ಶನ ಮತ್ತು ವಿವಿಧ ಪ್ರಸ್ತುತ ವಿಷಯಗಳ ವಿಶ್ಲೇಷಣೆಯಲ್ಲಿ ಅವರು ಪರಿಣತಿ ಹೊಂದಿದ್ದಾರೆ. ಓದುಗರಿಗೆ ಆಕರ್ಷಕ ಮತ್ತು ಮಾಹಿತಿಪೂರ್ಣ ವಿಷಯವನ್ನು ತಲುಪಿಸುವುದು ಅವರ ಬರವಣಿಗೆಯ ಮುಖ್ಯ ಲಕ್ಷಣ.
