
ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ‘ಲಕ್ಷ್ಮೀ ನಿವಾಸ’ದಲ್ಲಿ (Lakshmi Nivasa Serial) ಅಭಿನಯಿಸಿದ್ದ ನಟ ಮಿಥುನ್ ಕುಮಾರ್ (Mithun Kumar) ಅವರ ವೈಯಕ್ತಿಕ ಜೀವನ ಇದೀಗ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮಿಥುನ್ ಪತ್ನಿಯಿಂದ ಗಂಡನ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದ್ದು, ಈ ಸಂಬಂಧ ವಿಜಯನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಎಫ್ಐಆರ್ನಲ್ಲಿ ಮಿಥುನ್ ಪತ್ನಿ ತಮ್ಮ ಗಂಡನ ಅಕ್ರಮ ಸಂಬಂಧ ಮತ್ತು ಕಿರುಕುಳದ ಬಗ್ಗೆ ಸ್ಪೋಟಕ ಮಾಹಿತಿ ನೀಡಿದ್ದಾರೆ.
ಪತ್ನಿಯಿಂದ ಗಂಭೀರ ಆರೋಪಗಳ ಸುರಿಮಳೆ:
ಮಿಥುನ್ ಕುಮಾರ್ ಪತ್ನಿ ಪೊಲೀಸರಿಗೆ ನೀಡಿದ ದೂರಿನಲ್ಲಿ, “ನನ್ನ ಗಂಡ ಬೇರೆ ಯುವತಿಯೊಂದಿಗೆ ಹಾಸಿಗೆ ಹಂಚಿಕೊಂಡಿರುವುದನ್ನು ನಾನು ಸ್ವತಃ ಕಣ್ಣಾರೆ ನೋಡಿದ್ದೇನೆ” ಎಂದು ನೇರವಾಗಿ ಆರೋಪಿಸಿದ್ದಾರೆ. ತಮ್ಮ ದಾಂಪತ್ಯ ಜೀವನದ ಕುರಿತು ವಿವರಿಸಿರುವ ಅವರು, “ನನಗೆ ಈ ಹಿಂದೆ ಲವ್ ಬ್ರೇಕಪ್ ಆಗಿತ್ತು. ನಾನು ಮೇಕಪ್ ಕಲಾವಿದೆಯಾಗಿ ಕೆಲಸ ಮಾಡುತ್ತಿದ್ದಾಗ ಮಿಥುನ್ ಪರಿಚಯವಾದರು. ನಮ್ಮದು ಐದು ವರ್ಷಗಳ ಪ್ರೀತಿ ಮತ್ತು ಆರು ವರ್ಷಗಳ ಒಡನಾಟ. ಮೊದಲ ವರ್ಷ ನಾವು ಸ್ನೇಹಿತರಾಗಿದ್ದೆವು, ನಂತರ ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದೆವು” ಎಂದು ಹೇಳಿದ್ದಾರೆ.
ತಮ್ಮ ಮದುವೆಯ ಸಂದರ್ಭದ ಕಷ್ಟಗಳನ್ನು ಹಂಚಿಕೊಂಡಿರುವ ಮಿಥುನ್ ಪತ್ನಿ, “ನಮ್ಮ ಮದುವೆಯ ಸಮಯದಲ್ಲಿ ಮಿಥುನ್ ಬಳಿ ಹಣವಿರಲಿಲ್ಲ. ನನ್ನ ಹಣದಲ್ಲೇ ನಾವು ಮದುವೆಯಾದೆವು. ತಾಳಿಗೂ ಹಣವಿಲ್ಲ, ಅರಿಶಿನ ದಾರ ಕಟ್ಟುತ್ತೇನೆ ಎಂದು ಅವರು ಹೇಳಿದ್ದರು. ಆಗ ನಾನೇ ಬೇಡ ಎಂದು ತಾಳಿ ತರಿಸಿಕೊಂಡೆ. ದೇವಸ್ಥಾನದಲ್ಲಿ ನನ್ನ ಖರ್ಚಿನಲ್ಲೇ ಮದುವೆಯಾದೆವು” ಎಂದು ನೋವಿನಿಂದ ನುಡಿದಿದ್ದಾರೆ.
ಇದನ್ನೂ ಓದಿ: ನಾನು ಭಾರತವನ್ನು ದ್ವೇಷಿಸುತ್ತೇನೆ, ಕೊಳಕು ಹಿಂದೂಗಳು ನನ್ನ ಹಿಂದೆ ಬಿದ್ದಿದ್ದಾರೆ!
ಮಿಥುನ್ ಅವರ ಹಿಂದಿನ ವಿವಾದಗಳ ಬಗ್ಗೆ ತಿಳಿದಿದ್ದರೂ ಮದುವೆಯಾದ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸಿರುವ ಪತ್ನಿ, “ಮಿಥುನ್ ಕುಮಾರ್ ಅವರು ಮದುವೆಗೆ ಮುಂಚೆ ಯುವತಿಗೆ ವಂಚಿಸಿ ಜೈಲಿಗೆ ಹೋಗಿದ್ದ ವಿಷಯ ನನಗೆ ತಿಳಿದಿತ್ತು. ಆದರೂ ನಾನು ಅವರನ್ನು ಮದುವೆಯಾದೆ. ಮದುವೆಯಾದ ಎರಡು ತಿಂಗಳು ನಮ್ಮ ಸಂಸಾರ ಚೆನ್ನಾಗಿತ್ತು. ಆಮೇಲೆ ಬೇರೆ ಬೇರೆ ವಿಚಾರಗಳು ನನಗೆ ಗೊತ್ತಾದವು. ಆ ಯುವತಿಯೊಂದಿಗೆ ಮಿಥುನ್ ಕುಮಾರ್ ಮಲಗಿದ್ದನ್ನು ನಾನೇ ಕಣ್ಣಾರೆ ನೋಡಿದ್ದೇನೆ. ನಾನು ಪೊಲೀಸರೊಂದಿಗೆ ಹೋಗಿದ್ದೆ. ಇದನ್ನು ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಮನೆಯಲ್ಲಿ ಹಲ್ಲೆ ಮಾಡಿದರು. ನನ್ನನ್ನು ಸಾಯಿಸಲು ಪ್ರಯತ್ನಿಸಿದರು” ಎಂದು ಗಂಭೀರ ಆರೋಪ ಮಾಡಿದ್ದಾರೆ.
ಮಿಥುನ್ ಕುಮಾರ್ ಅವರ ಸ್ಪಷ್ಟನೆ:
ತಮ್ಮ ಮೇಲಿನ ಎಲ್ಲಾ ಆರೋಪಗಳು ಮತ್ತು ದೂರಿನ ನಂತರ ನಟ ಮಿಥುನ್ ಕುಮಾರ್ ಕೂಡ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಮೇಲಿನ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, “ನನ್ನ ಮೇಲಿನ ಎಲ್ಲಾ ಆರೋಪಗಳು ಸುಳ್ಳು. ನನ್ನನ್ನು ಅವರು ತುಂಬಾ ಅನುಮಾನಪಡುತ್ತಿದ್ದರು. ಆ ದಿನ ನಾನು ಕೆಲಸ ಮುಗಿಸಿ ತಡವಾಗಿ ಬಂದಿದ್ದೆ. ಯಾಕೆ ತಡ? ಯಾರ ಜೊತೆ ಹೋಗಿದ್ದೆ? ಎಲ್ಲಿಗೆ ಹೋಗಿದ್ದೆ ಎಂದು ಜಗಳವಾಡಿದರು. ನಂತರ ನನ್ನ ಖಾಸಗಿ ಭಾಗಕ್ಕೆ ನೋವು ಮಾಡಿದರು. ನಾನು ನೋವು ತಡೆಯಲಾಗದೆ ನನ್ನ ಹೆಂಡತಿಯನ್ನು ತಳ್ಳಿದೆ. ಈ ಸಮಯದಲ್ಲಿ ಅವರ ಬೆನ್ನಿಗೆ ನೋವಾಯಿತು. ನಾನು ಯಾವುದೇ ಹಲ್ಲೆ ಮಾಡಿಲ್ಲ. ಈ ಹಿಂದಿನ ಜೈಲು ಮತ್ತು ವಂಚನೆ ವಿಚಾರಗಳೆಲ್ಲಾ ಸುಳ್ಳು” ಎಂದು ಸ್ಪಷ್ಟಪಡಿಸಿದ್ದಾರೆ.
ಪತ್ನಿಯ ಗಂಭೀರ ಆರೋಪಗಳು ಮತ್ತು ಮಿಥುನ್ ಕುಮಾರ್ ಅವರ ಸ್ಪಷ್ಟನೆಯಿಂದ ಈ ಕೌಟುಂಬಿಕ ಕಲಹವು ತೀವ್ರ ಸ್ವರೂಪ ಪಡೆದುಕೊಂಡಿದೆ. ಸದ್ಯಕ್ಕೆ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಸತ್ಯಾಂಶ ಏನೆಂಬುದು ತನಿಖೆಯ ನಂತರ ತಿಳಿದುಬರಬೇಕಿದೆ. ಕಿರುತೆರೆಯ ಜನಪ್ರಿಯ ನಟನ ಕೌಟುಂಬಿಕ ಕಲಹವು ಇದೀಗ ಸಾರ್ವಜನಿಕ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಇದನ್ನೂ ಓದಿ: ಮಂಗಳೂರಿನಲ್ಲಿ ಕ್ರಿಕೆಟ್ ಪಂದ್ಯದ ವೇಳೆ ಪಾಕಿಸ್ತಾನ್ ಜಿಂದಾಬಾದ್ ಎಂದಿದ್ದಕ್ಕೆ ನಡೆಯಿತಾ ಕೊಲೆ?
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.