
- 5 ವರ್ಷಗಳ ನಂತರ, ನವೆಂಬರ್ನಲ್ಲಿ ತುಲಾ ರಾಶಿಯಲ್ಲಿ ಬುಧ ಮತ್ತು ಶುಕ್ರ ಗ್ರಹಗಳ ಅಪರೂಪದ “ಲಕ್ಷ್ಮಿ ನಾರಾಯಣ ರಾಜಯೋಗ” ರೂಪುಗೊಳ್ಳಲಿದೆ
- ಈ ಯೋಗದಿಂದ ಆರ್ಥಿಕ ಸಂಕಷ್ಟ ನಿವಾರಣೆ, ಆಸೆಗಳ ಈಡೇರಿಕೆ, ಹೊಸ ಮನೆ/ವಾಹನ ಖರೀದಿ ಯೋಗವಿದೆ
- ದೇಶದಲ್ಲಿ ವ್ಯಾಪಾರ-ಉದ್ಯೋಗದಲ್ಲಿ ಲಾಭ, ಮತ್ತು ಸಂಬಳ ಹೆಚ್ಚಳವಾಗಲಿದೆ
ಬರೋಬ್ಬರಿ 5 ವರ್ಷಗಳ ನಂತರ, ಜ್ಞಾನ ಮತ್ತು ಬುದ್ಧಿವಂತಿಕೆಯ ಅಧಿಪತಿ ಬುಧ ಗ್ರಹ ಹಾಗೂ ಸಂಪತ್ತು ಮತ್ತು ಐಷಾರಾಮದ ಅಧಿಪತಿ ಶುಕ್ರ ಗ್ರಹಗಳ ಅಪರೂಪದ ಸಂಯೋಗ ರೂಪುಗೊಳ್ಳಲಿದೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಈ ಪ್ರಬಲ ಸಂಯೋಗವು ನವೆಂಬರ್ನಲ್ಲಿ ತುಲಾ ರಾಶಿಯಲ್ಲಿ ರೂಪುಗೊಳ್ಳಲಿದ್ದು, ಇದು ಕೆಲವು ಅದೃಷ್ಟಶಾಲಿ ರಾಶಿಗಳ ಪಾಲಿಗೆ ಅದೃಷ್ಟದ ಬಾಗಿಲನ್ನು ತೆರೆಯಲಿದೆ. ಈ ಯೋಗವನ್ನು “ಲಕ್ಷ್ಮಿ ನಾರಾಯಣ ರಾಜಯೋಗ” ಎಂದೂ ಕರೆಯಲಾಗುತ್ತದೆ, ಏಕೆಂದರೆ ಇದು ಬುಧ (ವಿಷ್ಣು ಸ್ವರೂಪ) ಮತ್ತು ಶುಕ್ರ (ಲಕ್ಷ್ಮಿ ಸ್ವರೂಪ) ರ ಸಂಯೋಗದಿಂದ ರೂಪುಗೊಳ್ಳುತ್ತದೆ. ಇದರಿಂದಾಗಿ ಈ ರಾಶಿಗಳ ಜೀವನವೇ ಸಂಪೂರ್ಣವಾಗಿ ಬದಲಾಗಲಿದೆ. ಅವರಿಗೆ ಹಣಕಾಸಿನ ಲಾಭಗಳು, ಆಸ್ತಿಯ ಹೆಚ್ಚಳ, ವೃತ್ತಿಜೀವನದಲ್ಲಿ ಪ್ರಗತಿ ಮತ್ತು ಸಕಲ ಸುಖ ಸಂಪತ್ತು ಒಲಿಯಲಿದೆ
ಬುಧ ಮತ್ತು ಶುಕ್ರರ ಸಂಯೋಗವು ಕನ್ಯಾ ರಾಶಿಯ ಜನರಿಗೆ ಶುಭಕರವಾಗಲಿದೆ ಮತ್ತು ಸಾಕಷ್ಟು ಲಾಭ ತರಲಿದೆ. ನಿಮ್ಮ ಅರ್ಧಕ್ಕೆ ನಿಂತಿರುವಂತಹ ಪ್ರತಿಯೊಂದು ಕೆಲಸಗಳು ಕೂಡ ಮತ್ತೊಮ್ಮೆ ಪ್ರಾರಂಭವಾಗಲಿವೆ. ಇದರ ಜೊತೆಗೆ ನಿಮ್ಮ ಹಣಕಾಸಿನ ಪರಿಸ್ಥಿತಿ ಕೂಡ ಇನ್ನಷ್ಟು ಉನ್ನತಿಯನ್ನು ಕಾಣಲಿದೆ. ವಿಶೇಷವಾಗಿ ವಿದೇಶದಲ್ಲಿ ವ್ಯಾಪಾರ ವ್ಯವಹಾರಗಳನ್ನು ಮಾಡುತ್ತಿರುವಂತಹ ಕನ್ಯಾ ರಾಶಿಯವರಿಗೆ ಈ ಸಂದರ್ಭದಲ್ಲಿ ಕೈ ತುಂಬಾ ಹಣ ಸಂಪಾದನೆಗೆ ಸುವರ್ಣ ಅವಕಾಶ ಸಿಗಲಿದೆ. ಸಾಕಷ್ಟು ಸಮಯಗಳಿಂದ ವಿದೇಶದಲ್ಲಿ ಕೆಲಸ ಮಾಡಿ ತಮ್ಮ ಕುಟುಂಬದೊಂದಿಗೆ ಉತ್ತಮ ಜೀವನ ನಡೆಸಬೇಕು ಎಂದು ಆಸೆ ಹೊಂದಿರುವವರಿಗೆ ಒಳ್ಳೆಯ ಸುದ್ದಿ ಸಿಗಲಿದೆ. ಉದ್ಯೋಗದಲ್ಲಿರುವವರಿಗೆ ಸಾಕಷ್ಟು ಲಾಭಗಳನ್ನು ತರಲಿದೆ. ಸಾಕಷ್ಟು ಸಮಯಗಳಿಂದ ತಡೆಹಿಡಿದಿದ್ದ ನಿಮ್ಮ ಸಂಬಳದ ಏರಿಕೆಯನ್ನು ಈ ಸಂದರ್ಭದಲ್ಲಿ ಜಾರಿಗೊಳಿಸಲಾಗುತ್ತದೆ. ಉದ್ಯೋಗದಲ್ಲಿ ನಿಮ್ಮ ಕಾರ್ಯಕ್ಷಮತೆಯನ್ನು ಗಮನಿಸುವಂತಹ ಹಿರಿಯ ಅಧಿಕಾರಿಗಳು ನಿಮಗೆ ಇನ್ನಷ್ಟು ಹೆಚ್ಚಿನ ಜವಾಬ್ದಾರಿಗಳನ್ನು ನೀಡಬಹುದಾಗಿದೆ, ಇದು ನಿಮ್ಮ ವೃತ್ತಿ ಬದುಕಿಗೆ ಹೊಸ ತಿರುವು ನೀಡುತ್ತದೆ.
ಇದನ್ನೂ ಓದಿ: ಗ್ರಹಗಳ ಮಹಾ ಮಿಲನ: ತ್ರಿಗ್ರಾಹಿ ಯೋಗದಿಂದ ಈ 5 ರಾಶಿಗಳ ಪಾಲಿಗೆ ರಾಜಯೋಗ ಖಚಿತ!
ಶುಕ್ರ ಮತ್ತು ಬುಧರ ಸಂಯೋಗವು ಮಕರ ರಾಶಿಯವರಿಗೆ ಸಕಾರಾತ್ಮಕ ಬದಲಾವಣೆಯಾಗಲಿದೆ. ಏಕೆಂದರೆ ಈ ಸಂಯೋಗವು ನಿಮ್ಮ ರಾಶಿಚಕ್ರದಿಂದ ಕರ್ಮ ಮನೆಯಲ್ಲಿ ರೂಪುಗೊಳ್ಳಲಿದೆ. ಆದ್ದರಿಂದ, ಈ ಸಮಯದಲ್ಲಿ ನೀವು ಕೆಲಸ-ವ್ಯವಹಾರದಲ್ಲಿ ವಿಶೇಷ ಪ್ರಗತಿಯನ್ನು ಪಡೆಯಬಹುದು. ಉದ್ಯೋಗ ಕ್ಷೇತ್ರದಲ್ಲಿ ಕೂಡ ಸಾಕಷ್ಟು ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುವುದರಿಂದಾಗಿ ನೀವು ನಿಮ್ಮ ಜೀವನದಲ್ಲಿ ಇನ್ನಷ್ಟು ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದೆ. ಈ ಸಂದರ್ಭದಲ್ಲಿ ನಿಮ್ಮ ಜೀವನದಲ್ಲಿ ಇರುವಂತಹ ಪ್ರತಿಯೊಂದು ಸಮಸ್ಯೆಗಳು ಕೂಡ ಮುಕ್ತಗೊಳ್ಳಲಿವೆ. ನಿಮ್ಮ ಆಧ್ಯಾತ್ಮಿಕದ ಕಡೆಗೆ ಗಮನ ಹಾಗೂ ಆಸಕ್ತಿ ಹೆಚ್ಚಾಗಲಿದೆ, ಇದರಿಂದ ಮಾನಸಿಕ ಶಾಂತಿ ಸಿಗುತ್ತದೆ. ಈ ಸಂದರ್ಭದಲ್ಲಿ ನೀವು ಯಾವುದೇ ರೀತಿಯ ಉದ್ಯಮವನ್ನು ಪ್ರಾರಂಭ ಮಾಡಬೇಕು ಎಂದು ಯೋಜನೆ ಹಾಕಿಕೊಂಡಿದ್ದರೆ, ನಿಮಗೆ ಬ್ಯಾಂಕಿನಿಂದ ಸುಲಭ ರೂಪದಲ್ಲಿ ಲೋನ್ ದೊರಕಲಿದೆ. ಆತ್ಮವಿಶ್ವಾಸದ ಹೆಚ್ಚಳದಿಂದಾಗಿ ಮಕರ ರಾಶಿಯವರು ಯಾವುದೇ ರೀತಿಯ ಕಷ್ಟದ ಕೆಲಸಗಳನ್ನು ಮಾಡುವಂತಹ ಮನೋಭಾವನೆಯನ್ನು ಹೊಂದಿರುತ್ತೀರಿ.
ತುಲಾ ರಾಶಿಯವರಿಗೆ ಬುಧ ಮತ್ತು ಶುಕ್ರರ ಈ ಸಂಯೋಗವು ನಿಜಕ್ಕೂ ಲಾಭಕಾರಿಯಾಗಲಿದೆ. ಏಕೆಂದರೆ ಈ ಸಂಯೋಗವು ನಿಮ್ಮ ರಾಶಿಚಕ್ರದ ಲಗ್ನ ಮನೆಯಲ್ಲಿಯೇ ರೂಪುಗೊಳ್ಳಲಿದೆ. ಆದ್ದರಿಂದ, ಈ ಸಮಯದಲ್ಲಿ ಹಣ ಸಂಪಾದನೆ ಮಾಡಲು ಸಾಕಷ್ಟು ಸಂಪನ್ಮೂಲಗಳು ಮತ್ತು ಹೊಸ ದಾರಿಗಳು ತೆರೆದುಕೊಳ್ಳಲಿವೆ. ಹಣಕಾಸಿನ ಸಂಕಷ್ಟದಿಂದಾಗಿ ಬಹಳ ಸಮಯಗಳಿಂದ ತಡೆಹಿಡಿದುಕೊಂಡಿದ್ದ ನಿಮ್ಮ ಆಸೆಗಳನ್ನು ಪೂರೈಸಿಕೊಳ್ಳಲು ಇದು ಸೂಕ್ತ ಸಮಯ. ನಿಮ್ಮ ಕುಟುಂಬದ ಸಂಪೂರ್ಣ ಸಹಕಾರ ನಿಮಗೆ ಸಿಗಲಿದೆ. ಸಾಕಷ್ಟು ಸಮಯಗಳಿಂದ ನೀವು ಸಾಲವಾಗಿ ನೀಡಿದ ಹಣವನ್ನು ಈ ಸಂದರ್ಭದಲ್ಲಿ ವಾಪಸ್ ಪಡೆದುಕೊಳ್ಳಬಹುದಾಗಿದೆ. ಅಷ್ಟೇ ಅಲ್ಲ, ಅದೃಷ್ಟದ ಮೇಲೆ ಹಣವನ್ನು ಗಳಿಸುವಂತಹ ಆಟಗಳಲ್ಲಿಯೂ ನೀವು ಹಣ ಸಂಪಾದಿಸಬಹುದು. ಕೈತುಂಬ ಸಿಗುವಂತಹ ಹಣದ ಮೂಲಕ ತುಲಾ ರಾಶಿಯವರು ತಮ್ಮ ಬಹುಕಾಲದ ಕನಸಾಗಿರುವಂತಹ ಹೊಸ ಮನೆ ಅಥವಾ ನೆಚ್ಚಿನ ವಾಹನಗಳನ್ನು ಖರೀದಿಸಬಹುದಾಗಿದೆ. ಈ ಸಂದರ್ಭದಲ್ಲಿ ನೀವು ನಿಮ್ಮ ಕುಟುಂಬ ಹಾಗೂ ಸ್ನೇಹಿತರ ಜೊತೆಗೆ ಮನಸ್ಸಿಗೆ ಸಂತೋಷ ನೀಡುವಂತಹ ಪ್ರವಾಸಕ್ಕೆ ಹೋಗಬಹುದು, ನೆಮ್ಮದಿಯ ಜೀವನ ನಡೆಸಬಹುದು.
ಇದನ್ನೂ ಓದಿ: ನಾಗರ ಪಂಚಮಿ ನಂತರ ಅದೃಷ್ಟದ ಬಾಗಿಲು ತೆರೆಯಲಿದೆ: ಈ ರಾಶಿಗಳಿಗೆ ಲಕ್ಷ್ಮೀ ಕೃಪೆ, ಮುಟ್ಟಿದ್ದೆಲ್ಲಾ ಚಿನ್ನ!
Aaradhya is an accomplished content writer with five years of experience specializing in astrology. She possesses extensive expertise in researching, analyzing, and crafting insightful and engaging articles on various astrological topics.