
ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ನ ಸಿವಿಎಸ್ಕೆ ಪ್ರೌಢಶಾಲೆಯ [Konkan Education Trust Kumta CVSK High School Kumta] 2022-23ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶವು ಪ್ರತಿ ವರ್ಷದಂತೆ 100 ಪ್ರತಿಶತ ಆಗಿದ್ದು, ರಾಜ್ಯಕ್ಕೆ ಚತುರ್ಥ ಸ್ಥಾನ ಪಡೆದು, ರಾಜ್ಯ ಮಟ್ಟದಲ್ಲಿ ರಾಂಕ್ ಗಳಿಸುವ ಪರಂಪರೆಯನ್ನು ಮುಂದುವರೆಸಿದೆ.
ಪರೀಕ್ಷೆಗೆ ಕುಳಿತ 139 ವಿದ್ಯಾರ್ಥಿ. ಪ್ರಥಮ ದರ್ಜೆಯಲ್ಲಿ ಪಾಸ್ ಆಗಿದ್ದು , 8 ವಿದ್ಯಾರ್ಥಿಗಳು ರಾಜ್ಯಮಟ್ಟದ ಟಾಪ್ 10 ರಾಂಕ್ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದ್ದಾರೆ. ಕುಮಾರಿ ಅದಿತಿ ಪ್ರಕಾಶ ವೈದ್ಯ ಹಾಗೂ ಕುಮಾರ ಸುಮಂತ ಮಂಜುನಾಥ ಶಾಸ್ತ್ರಿ 625 ಕ್ಕೆ 622 (99.52%) ಅಂಕಗಳೊಂದಿಗೆ ರಾಜ್ಯಕ್ಕೆ ಚತುರ್ಥ ಸ್ಥಾನ, ಕುಮಾರ ಶ್ರೇಯಸ್ ಜನಾರ್ಧನ ನಾಯ್ಕ ಹಾಗೂ ಕುಮಾರ ಆದಿತ್ಯ ಮಂಜುನಾಥ ಹೆಗಡೆ 625 ಕ್ಕೆ 621 (99.36%) ಅಂಕಗಳೊಂದಿಗೆ ರಾಜ್ಯಕ್ಕೆ ಐದನೇ ಸ್ಥಾನ,
ಕುಮಾರ ಆಕಾಶ ಕಿರಣ ಶೇಟಿಯಾ 625 ಕ್ಕೆ 620 (99.2%) ಅಂಕಗಳೊಂದಿಗೆ ರಾಜ್ಯಕ್ಕೆ ಆರನೇ ಸ್ಥಾನ, ಕುಮಾರ ಯಶಸ್ ಬಾಬು ನಾಯ್ಕ 625 ಕ್ಕೆ 618 (98.88%) ಅಂಕಗಳೊಂದಿಗೆ ರಾಜ್ಯಕ್ಕೆ ಎಂಟನೇ ಸ್ಥಾನ, ಕುಮಾರ ಆದಿತ್ಯ ಅರುಣಕುಮಾರ ಹೆಗಡೆ 625ಕ್ಕೆ 617 (98.72%) ಅಂಕಗಳೊಂದಿಗೆ ರಾಜ್ಯಕ್ಕೆ ಒಂಭತ್ತನೇ ಸ್ಥಾನ, ಮತ್ತು ಕುಮಾರಿ ಅಪೂರ್ವ ಗಜಾನನ ಭಟ್ಟ 625 ಕ್ಕೆ 616 (98.56%) ಅಂಕಗಳೊಂದಿಗೆ ರಾಜ್ಯಕ್ಕೆ ಹತ್ತನೇ ಸ್ಥಾನವನ್ನು ಪಡೆದಿದ್ದಾರೆ.
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.