
Kendasampige Serial
ಕಲರ್ಸ್ ಕನ್ನಡದಲ್ಲಿ [Colors Kannada] ಪ್ರಸಾರವಾಗುವ ಕೆಂಡಸಂಪಿಗೆ [Kendasampige] ಧಾರಾವಾಹಿಯಲ್ಲಿ ಈಗ ಮಹಾ ತಿರುವು ಬಂದಿದೆ ಅಂತಾನೆ ಹೇಳಬಹುದು. ಈಗ ಮನೆಯಲ್ಲಿ ದೃತಿ ಮನೆಯಿಂದ ಕಿಡ್ನಾಪ್ ಆಗಿದ್ದು ಸುಮನಾ ಮೇಲೆ ಒಂದು ಆರೋಪವೇ ಬಂದಿತ್ತು. ಹಾಗೆಯೆ ಇದೆ ಸಮಯದಲ್ಲಿ ಸಾಧನ ಬೇಕಂತಲೇ ಸುಮನಾ ಮೇಲೆ ಆರೋಪವನ್ನು ಹೊರಿಸಿ ಅವಳ ವ್ರತವನ್ನು ಕೂಡ ಹಾಳು ಮಾಡಿದ್ದಾಳೆ.
ಮನೆಯಲ್ಲಿ ವ್ರತ ಮತ್ತೆ ಮಾಡುವುದಿಲ್ಲ ಅದು ನಿಂತು ಹೋಗಿದೆ ಎಂದು ತೀರ್ಥ ಹತ್ತಿರ ನಿತ್ಯ ಬಂದು ಹೇಳ್ತಾಳೆ. ಇದನ್ನು ಕೇಳಿದ ತೀರ್ಥ ಮಾತನ್ನು ನಂಬೋದಿಲ್ಲ ಅದಕ್ಕೆ ಗುರುಗಳೇ ಹೇಳಿದ್ರು ಮತ್ತೆ ವ್ರತ ಪೂಜೆಯನ್ನು ಮಾಡುವುದಿಲ್ಲ ಅಂತ ಹೇಳ್ತಾಳೆ. ಇದನ್ನ ಕೇಳಿ ತೀರ್ಥನಿಗೆ ತುಂಬಾ ಖುಷಿಯಾಗುತ್ತೆ. ಅದಕ್ಕೆ ನನಗು ಕೂಡ ಇದೆ ಬೇಕಿತ್ತು ಎಂದು ತೀರ್ಥ ಹೇಳ್ತಾನೆ. ಅದಕ್ಕೆ ನಿತ್ಯ ಈಗ ನನಗು ಸ್ವಲ್ಪ ಸಮಾಧಾನನ ಕೊಡಿ ಎಂದು ತೀರ್ಥ ಹತ್ತಿರ ಕೇಳ್ತಾಳೆ.
Join Whats App Group | Click here |
ಅದಕ್ಕೆ ತೀರ್ಥ ಏನ್ ಹೇಳತ ಇದ್ದೀಯ ಎಂದು ಕೇಳ್ತಾಳೆ. ಅದಕ್ಕೆ ನೀವು ಹೇಳಿದ್ದನ್ನ ನೆನಪು ಮಾಡಿಕೊಳ್ಳಿ. ಸುಮನಾ ನ ಮನೆಯಿಂದ ಹೊರಗೆ ಹಾಕ್ತಿರಾ ಅಂತ ಹೇಳಿದ್ರಲ್ಲ. ಈಗ ಎಲೆಕ್ಷನ್ ಆಯಿತು, ರಿಸಲ್ಟ್ ಬಂತು ಈಗ ವ್ರತ ಕೂಡ ನಿಂತಿದೆ ಅದಕ್ಕೆ ಈಗ ನೀವು ಅವಳನ್ನು ಈಗ ಮನೆಯಿಂದ ಹೊರಗೆ ಹಾಕಲೇ ಬೇಕು ಎಂದು ಹೇಳಿದಾಗ ತೀರ್ಥ ಸರಿ ನಿನ್ ಹೇಳಿದ ಹಾಗೆ ಆಗಲಿ ಎಂದು ಹೇಳುತ್ತಾನೆ.
ತಾಂಡವನಿಗೆ ಭಾಗ್ಯ ಮೇಲೆ ಪ್ರೀತಿ ಶುರು ಆಯ್ತಾ?
ನಂತರ ಸುಮನಾ ನಾನು ಈಗ ತಾಯಿ ಆಗ್ತಿರೋ ವಿಷಯ ಸಾಹೇಬ್ರಿಗೆ ಹೇಳಿದ್ರೆ ಎಷ್ಟೊಂದು ಕ್ಕುಶಿ ಆಗ್ತಾರೆ. ಇವತ್ತೇ ನಾನು ತಾಯಿ ಆಗ್ತಿರೋ ವಿಷಯವನ್ನು ತೀರ್ಥ ಹತ್ತಿರ ಹೇಳ್ತಿನಿ ಎಂದು ಸುಮನಾ ಮನಸ್ಸಿನಲ್ಲಿಯೇ ಯೋಚಿಸುತ್ತಾಳೆ. ವ್ರತ ನಿಂತಿರೋ ವಿಷಯದ ಬಗ್ಗೆ ಪದ್ಮಾಗೆ ಕೂಡ ತುಂಬಾ ಬೇಜಾರಾಗಿದೆ. ಹಾಗೆಯೆ ಸುಮನಾ ಹಾಗೂ ತೀರ್ಥ ಏನಾದ್ರು ಬೇರೆ ಬೇರೆ ಆಗ್ತಾರೆ ಅಂತ ನನಗೆ ಭಯ ಆಗ್ತಾ ಇದೆ ಎಂದು ಕೇಶವನ ಹತ್ತಿರ ಪದ್ಮ ಹೇಳುತ್ತಾಳೆ. ಈ ವಿಷಯವನ್ನು ಕೇಳಿ ಕೇಶವನಿಗೂ ಸಹ ನನಗು ಯಾಕೋ ಹೀಗೆ ಅನಿಸ್ತಾ ಇದೆ ಎಂದು ಹೇಳ್ತಾನೆ.
ನಂತರ ತೀರ್ಥ ಮನೆಯವರನ್ನೆಲ್ಲರನ್ನು ಬರಲು ಹೇಳುತ್ತಾನೆ. ಹಾಗೆ ಎಲ್ಲರ ಹತ್ತಿರ ಒಂದು ಮುಖ್ಯವಾದ ವಿಷಯವನ್ನು ಹೇಳಬೇಕು ಎಂದು ತೀರ್ಥ ಹೇಳುತ್ತಾನೆ. ಹಾಗೆ ನಿಮಗೆ ಎಲ್ಲರಿಗು ಒಂದು ಸತ್ಯವನ್ನು ಹೇಳಬೇಕಿತ್ತು ಅದೇನೆಂದರೆ ನಾನು ಈಗ ಸುಮನಾ ಅವರನ್ನು ಮಾಡುವೆ ಆಗಿರೋದಕ್ಕೆ ಕಾರಣ ಈ ಎಲೆಕ್ಷನ್ ನಲ್ಲಿ ಗೆಲ್ಲೋದಕ್ಕೆ ಅಷ್ಟೇ ಎಂದು ಹೇಳುತ್ತಾನೆ. ಇದನ್ನ ಕೇಳಿ ಮನೆಯವರಿಗೆಲ್ಲ ತುಂಬಾ ಅಚ್ಚರಿಯಾಗುತ್ತೆ. ಹಾಗಾದರೆ ಮುಂದೆ ಸುಮನಾ ಸತ್ಯ ಹೇಳುತ್ತಾಳಾ? ಮನೆಯವರೆಲ್ಲ ಏನು ಮಾಡ್ತಾರೆ ಅಂತ ಮುಂದಿನ ಸಂಚಿಕೆಯಲ್ಲಿ ನೋಡಬೇಕಾಗಿದೆ.
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.