
Kendasampige Kannada Serial Today episode 181 ಕಲರ್ಸ್ ಕನ್ನಡದ [Colors Kannada] ಟಾಪ್ ಧಾರವಾಹಿ ಕೆಂಡಸಂಪಿಗೆ ದಿನದಿಂದ ದಿನಕ್ಕೆ ರೋಚಕ ತಿರುವುಗಳನ್ನು ಪಡೆದುಕೊಂಡು ವೀಕ್ಷಕರನ್ನು ಮನೋರಂಜಿಸುತ್ತಿದೆ. ಈಗ ತೀರ್ಥ ಎಲೆಕ್ಷನ್ ನಲ್ಲಿ ಗೆದ್ದ ನಂತರ ನಾಯಕರು ಬಂದು ಕೊಲೊನಿಗೆ ಭೇಟಿ ನೀಡಿ ಒಮ್ಮೆ ಅಲ್ಲಿರುವ ಜನರ ಹತ್ತಿರ ಹೋಗಿ ಧನ್ಯವಾದ ಹೇಳಿ ಬಾ ಎಂದು ಹೇಳಿದಕ್ಕೆ ತೀರ್ಥನಿಗೆ ಕಾಲೋನಿಗೆ ಮತ್ತೆ ಹೋಗಲು ಸ್ವಲ್ಪನೂ ಇಷ್ಟ ಇರಲಿಲ್ಲ. ಹಾಗೆ ಈ ವಿಷಯವನ್ನು ಸುಮನಾ ಹತ್ತಿರ ಹೇಳಿದಕ್ಕೆ ಅವಳು ಕೂಡ ಕಾಲೋನಿಗೆ ಹೋಗಲೇ ಬೇಕು ಎಂದಳು.
ಕೆಂಡಸಂಪಿಗೆ ಇಂದಿನ ಸಂಚಿಕೆ Kendasampige today episode
ಕೆಂಡಸಂಪಿಗೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ತೀರ್ಥ ಹಾಗೂ ನಿತ್ಯ ಬಂದು ಕಾಲೋನಿಯಲ್ಲಿ ಸುಮನಾ ನಾನು ಇಲ್ಲಿಗೆಲ್ಲ ಬರೋದಿಲ್ಲ ನೀವು ಬೇಕಾದರೆ ಹೋಗಿ ಬನ್ನಿ ಅಂತ ಹೇಳಿದ್ದಾಳೆ ಎಂದು ಹೇಳಿದ್ದನ್ನ ಕೇಳಿ ಅಲ್ಲಿರುವ ಎಲ್ಲ ಜನರಿಗೆ ತುಂಬಾನೇ ಶಾಕ್ ಆಗಿರುತ್ತೆ. ಇದೇನಿದು ನಮ್ಮ ಸುಮನಾ ಯಾವತ್ತೂ ಸಹ ಈ ರೀತಿಯಾಗಿ ಹೇಳೋದಿಲ್ಲ ಅಲ್ವಾ ಅವಳಿಗೆ ಏನ್ ಆಗಿದೆ ಅಂತಲ್ಲ ಮಾತನಾಡ್ತಾ ಇದ್ದರು. ಅದೇ ಸಮಯದಲ್ಲಿ ತೀರ್ಥ ಹಾಗೂ ನಿತ್ಯಾ ಗೆ ಶಾಕ್ ಕಾದಿತ್ತು.
ನಂತರ ಸುಮನಾ ಕಾಲೋನಿಗೆ ಬಂದಿದನ್ನ ನೋಡಿ ತುಂಬಾನೇ ಕುಶಿಯಾಗಿರುತ್ತೆ ಜನರಿಗೆಲ್ಲ. ಈಗ ನಿತ್ಯಾ ಮಾಡಿದ ಪ್ಲಾನ್ ಎಲ್ಲಾ ಹಾಳಾಗಿ ಬಿಡ್ತು. ಎಲ್ಲ ಜನ ಇಷ್ಟೋತ್ತು ತೀರ್ಥ ಹತ್ತಿರ ನಿಂತು ಮಾತನಾಡುತ್ತ ಇದ್ದವರು ಸುಮನಾ ಬಂಡ ತಕ್ಷಣವೇ ಎಲ್ಲರು ಅವಳ ಹತ್ತಿರ ಹೋಗಿ ಮಾತನಾಡುತ್ತ ಇರ್ತಾರೆ. ಇದನ್ನ ನೋಡಿ ತೀರ್ಥನಿಗೆ ಅವಮಾನ ಕೂಡ ಆಗುತ್ತೆ. ಇದನೆಲ್ಲ ನಾಯಕರು ಕೂಡ ಅಲ್ಲೇ ನಿಂತುಕೊಂಡು ನೋಡ್ತಾ ಇರ್ತಾರೆ. ಹಾಗೆ ನಾಯಕರು ಬಂದು ತೀರ್ಥ ಹತ್ತಿರ ನೋಡಿದ್ಯಾ ನೀನು ಈ ಜನರಿಗೆ ಲೆಕ್ಕನೆ ಇಲ್ಲ ಸುಮನಾ ಇದ್ದಿದ್ದಕ್ಕೆ ನೀನು ಇವತ್ತು ಗೆದ್ದಿರೋದು ಸುಮನಾ ಇಲ್ಲದಿದ್ರೆ ನೀನೇನು ಇಲ್ಲ ಎಂದೆಲ್ಲ ಹೇಳ್ತಾರೆ.
ಇದನೆಲ್ಲ ಕೇಳಿ ನಿತ್ಯ ನೋಡಿದ್ರಾ ತೀರ್ಥ ನಿಮಗೆ ಯಾವ ರೀತಿ ಅವಮಾನ ಆಗ್ತಾ ಇದೆ. ನೀವು ಈಗ ಗೆದ್ದಿರೋದು ಸುಮನಾ ಇಂದ ಅಂತ ಎಲ್ಲರು ಹೇಳ್ತ ಇದ್ದರಲ್ಲ ಎಂದೆಲ್ಲ ಹೇಳಿದಕ್ಕೆ ತೀರ್ಥ್ ಹೇಳ್ತಾನೆ ನೋಡ್ತಾ ಇರು ನಾನೀಗ ಏನ್ ಮಾಡ್ತೀನಿ ಅಂತ. ಈ ಜನರ ತಲೆಯಲ್ಲಿ ಸುಮನಾ ನೇ ನನ್ನ ಗೆಲ್ಲಿಸಿದ್ದಾಳೆ ಅನ್ನೋ ವಿಷಯನ ಹೇಗೆ ತೆಗೆದು ಹಾಕ್ತಿನಿ ಅಂತ ನಿತ್ಯ ಹತ್ರ ಹೇಳಿರ್ತಾನೆ. ನಂತರ ನಾಯಕರು ಬಂದು ನಿತ್ಯಾಗೆ ನಿನ್ ಯಾಕೆ ಇಲ್ಲಿಗೆ ಬಂದೆ ಸುಮ್ಮನೆ ನೀನು ಇದೆ ರೀತಿ ತೊಂದರೆ ಮಾಡ್ತಾ ಇದ್ದಾರೆ ನಿನ್ನನ್ನ ಪಕ್ಷದಿಂದ ತೆಗೆದು ಹಾಕ್ತಿನಿ ಅಂತ ವಾರ್ನಿಂಗ್ ಕೊಡ್ತಾರೆ. ಇದನೆಲ್ಲ ಕೇಳಿಸ್ಕೊಂಡು ಅವಳು ಅಲ್ಲಿಂದ ಮನೆಗೆ ಹೋಗ್ತಾಳೆ.
ನಂತರ ತೀರ್ಥ ಬಂದು ರಾಜೇಶ್ ಫೋಟೋ ಹತ್ತಿರ ಎಲ್ಲರು ನಿಂತಿರ್ತಾರೆ. ಹಾಗೆ ನಿಮಗೆಲ್ಲ ಒಂದು ವಿಷಯನ ಹೇಳಬೇಕು ಅದೇನೆಂದರೆ ನಾನು ಗೆದಿದ್ದಕ್ಕೆ ಸುಮನಾ ಕರಣ ಅಲ್ಲ ಅಂತ ಹೇಳ್ತಾನೆ. ನಾನು ಗೆದ್ದಿರೋದಕ್ಕೆ ಕರಣ ಈ ರಾಜೇಶ ಅಂತ ಹೇಳಿದಕ್ಕೆ ಎಲ್ಲರಿಗು ಕೂಡ ತುಂಬಾನೇ ಖುಷಿ ಆಗುತ್ತೆ. ಹಾಗೆ ತೀರ್ಥ ಈ ರೀತಿ ಹೇಳಿದಕ್ಕೆ ಸುಮನಾ ತುಂಬಾನೇ ಖುಷಿ ಪಡ್ತಾಳೆ. ಅದಕ್ಕೆ ನನ್ನ ಪಾಲಿಟಿಕ್ಸ್ ಏನು ಅಂತ ಯಾರಿಗೂ ತಿಳಿದಿಲ್ಲ ಅಂತ ತೀರ್ಥ ಹೇಳುತ್ತಾನೆ.
ತೀರ್ಥನ ಹೊಸ ಆಟ ನೋಡಿ ಎಲ್ಲರು ಶಾಕ್
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.