ಕಿಸೆಯಲ್ಲಿ ಮೊಬೈಲ್ ಇಟ್ಟುಕೊಳ್ಳುವುದರಿಂದ ಈ ಸಮಸ್ಯೆ ಬರುತ್ತೆ ಎಚ್ಚರ..!

ಈಗಂತೂ ಎಲ್ಲಿ ಹೋದರು ಸಹ ಜನರಿಗೆ ಮೊಬೈಲ್ ಅವಶ್ಯಕತೆ ಇದ್ದೆ ಇರುತ್ತದೆ. ಹಾಗೆಯೆ ಎಲ್ಲಿ ಹೋದರು ಸಹ ಮೊಬೈಲ್ ಅನ್ನು ಮಾತ್ರ ಮರೆಯುವುದಿಲ್ಲ. ಇದು ಒಂತರ ಮನುಷ್ಯರ ದೇಹದ ಒಂದು ಅಂಗದ ರೀತಿಯಲ್ಲಿ ಆಗಿ ಬಿಟ್ಟಿದೆ. ಹಾಗೆಯೇ ಹೆಚ್ಚಾಗಿ ಪುರುಷರು ತಮ್ಮ ಪ್ಯಾಂಟ್ ನ ಕಿಸೆಯಲ್ಲಿ ಮೊಬೈಲ್ ಇಟ್ಟುಕೊಳ್ಳುವುದು ಸಹಜ. ಆದರೆ ಇದರಿಂದ ಯಾವೆಲ್ಲ ಸಮಸ್ಯೆ ಬರುತ್ತೆ ಅಂತ ತಿಳಿಯಿರಿ.

ಹೆಚ್ಚಾಗಿ ಜನರಿಗೆ ಬ್ಯಾಗ್ ನಲ್ಲಿ ಮೊಬೈಲ್ ಇಡುವುದಕ್ಕಿಂತ ಕಿಸೆಯಲ್ಲಿ ಇಟ್ಟುಕೊಂಡರೆ ಒಳ್ಳೆಯದು ಅಂತ ಅನಿಸುತ್ತೆ. ಆದರೆ ಇದರ ಪರಿಣಾಮ ಮಾತ್ರ ಭೀಕರವಾದದ್ದು. ಮೊಬೈಲ್ ಅನ್ನು ಬ್ಯಾಗ್ ನಲ್ಲಿ ಇಡುವುದಕ್ಕಿಂದ ನಿಮ್ಮ ಕಿಸೆಯಲ್ಲಿ ಇಡುವುದರಿಂದ 7 ಪಟ್ಟು ಹೆಚ್ಚಾಗಿ ರೇಡಿಯೇಷನ್ ಅನ್ನು ಬೀರುತ್ತೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ.

ಹಲ್ಲು ಉಜ್ಜಲು ಟೂತ್ ಪೇಸ್ಟ್ ಬಳಸ್ತೀರಾ? ಇದು ಎಷ್ಟು ಡೇಂಜರ್ ಗೊತ್ತಾ?

ಡಾಕ್ಟರ್ Lilly Friedman ಹೇಳಿದ ಪ್ರಕಾರ ಈ ರೀತಿಯಾದ ಅತಿಯಾದ ರೇಡಿಯೇಶನ್ ನಿಂದ ಡಿಎನ್ಎ (DNA) ಯಲ್ಲಿ ವ್ಯತ್ಯಾಸ ಉಂಟಾಗುತ್ತೆ. ಹಾಗೆಯೆ ಇದರಿಂದ ಟ್ಯೂಮರ್ ಆಗುವ ಸಂಭವ ಸಹ ಜಾಸ್ತಿಯಾಗಿರುತ್ತೆ. ವರ್ಲ್ಡ್ ಹೆಲ್ತ್ ಆರ್ಗನೈಜೇಷನ್ ನ ಇಂಟರ್ನ್ಯಾಷನಲ್ ಏಜನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ (International Agency For Research On Cancer) ಅತಿಯಾದ ವಿಕಿರಣವು ಕ್ಯಾನ್ಸರ್ ಗೆ ಕಾರಣವಾಗಬಹುದು ಎಂದು ಕಂಡುಹಿಡಿದಿದೆ.

ಮೊಬೈಲ್ ಅನ್ನು ಪ್ಯಾಂಟ್ ನ ಹಿಂದಿನ ಕಿಸೆಯಲ್ಲಿ ಇಡುವುದರಿಂದ ಅದರ ರೇಡಿಯೇಶನ್ ಕಾರಣದಿಂದಾಗಿ ಕ್ರಮೇಣ ಬೆನ್ನು ನೋವು ಕಾಣಿಸುವ ಸಂಭವ ಜಾಸ್ತಿ ಇರುತ್ತದೆ. ಹಾಗೆಯೆ ಇದು ಪುರುಷರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯವನ್ನು ಸಹ ಕಡಿಮೆ ಮಾಡುತ್ತದೆ.

ಇನ್ನು ಹಲವಾರು ನಿದ್ದೆ ಮಾಡುವಾಗ ಸಹ ಮೊಬೈಲ್ ಅನ್ನು ತಲೆಯ ಹತ್ತಿರ ಇಟ್ಟುಕೊಂಡು ಮಲಗುತ್ತಾರೆ ಇದರಿಂದ ಮೆದುಳಿನ ಮೇಲೆ ಸಹ ಪ್ರಭಾವ ಬೀರುತ್ತೆ. ಹಾಗೆಯೆ ಹೃದಯ ಬಡಿತದಲ್ಲಿ ಸಹ ಏರುಪೇರಾಗುತ್ತೆ.

Share