
ಭಾರತ ಮೂಲದ ಕಶ್ಯಪ್ ಪಟೇಲ್ ಅವರು ಅಮೆರಿಕದ ತನಿಖಾ ಸಂಸ್ಥೆ ಫೆಡರಲ್ ಬ್ಯುರೋ ಆಫ್ ಇನ್ವೆಸ್ಟಿಗೇಶನ್ (FBI) ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಅವರು ಭಗವದ್ಗೀತೆಯ ಮೇಲೆ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಸಮಾರಂಭ ವಾಷಿಂಗ್ಟನ್ನ ಶ್ವೇತಭವನದ ಆವರಣದಲ್ಲಿರುವ ಐಸೆನ್ಹೋವರ್ ಕಾರ್ಯನಿರ್ವಾಹಕ ಕಚೇರಿ ಕಟ್ಟಡದಲ್ಲಿ ನಡೆಯಿತು. ಯುಎಸ್ ಅಟಾರ್ನಿ ಜನರಲ್ ಪ್ಯಾಮ್ ಬೋಂಡಿ ಅವರು ಕಶ್ಯಪ್ ಪಟೇಲ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ನೇಮಕಾತಿಗೆ ಸಹಿ ಹಾಕಿದ್ದಾರೆ. ಸೆನೆಟ್ನಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಪಟೇಲ್ 51 ಪರ ಮತ್ತು 49 ವಿರೋಧ ಮತಗಳನ್ನು ಪಡೆದರು. ಈ ಮೂಲಕ ಅವರು ಎಫ್ಬಿಐನ 9ನೇ ನಿರ್ದೇಶಕರಾಗಿದ್ದಾರೆ.
ಈ ಹಿಂದೆ ಕ್ರಿಸ್ಟೋಫರ್ ವ್ರೇ ಅವರು ಎಫ್ಬಿಐನ ಮುಖ್ಯಸ್ಥರಾಗಿದ್ದರು. ಅವರ ಸ್ಥಾನಕ್ಕೆ ಈಗ ಕಾಶ್ ಪಟೇಲ್ ನೇಮಕವಾಗಿದ್ದಾರೆ. ಅಮೆರಿಕದ ಇತಿಹಾಸದಲ್ಲಿಯೇ ಎಫ್ಬಿಐನ ಮುಖ್ಯಸ್ಥರಾದ ಮೊದಲ ಭಾರತೀಯ ಮೂಲದ ವ್ಯಕ್ತಿ ಮಾತ್ರವಲ್ಲದೆ, ಮೊದಲ ಏಷ್ಯನ್ ಮೂಲದ ವ್ಯಕ್ತಿಯೂ ಆಗಿದ್ದಾರೆ. ಮುಂದಿನ 10 ವರ್ಷಗಳ ಕಾಲ ಇವರ ಅಧಿಕಾರ ಅವಧಿ ಇರಲಿದೆ.
ಈ ನೇಮಕಾತಿಯು ಅಮೆರಿಕದಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಇಂತಹ ಉನ್ನತ ಸ್ಥಾನವನ್ನು ಅಲಂಕರಿಸಿದ್ದಾರೆ ಎಂಬುದನ್ನು ತೋರಿಸುತ್ತದೆ. ಕಾಶ್ ಪಟೇಲ್ (kash Patel) ಅವರ ಸಾಧನೆ ಭಾರತೀಯ ಸಮುದಾಯಕ್ಕೆ ಹೆಮ್ಮೆಯ ವಿಷಯವಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಶ್ಯಪ್ ಪಟೇಲ್ (Kashyap Patel) ಅವರನ್ನು ಬೆಂಬಲಿಸಿ ಶ್ಲಾಘಿಸಿದರು. “ನಾನು ಕಶ್ಯಪ್ ಪಟೇಲ್ ಅವರನ್ನು ಪ್ರೀತಿಸಲು ಮತ್ತು ಅವರನ್ನು ಅನುಮೋದಿಸಲು ಕಾರಣವೆಂದರೆ, ಏಜೆಂಟರು ಅವರ ಬಗ್ಗೆ ಹೊಂದಿದ್ದ ಗೌರವ. ಕಶ್ಯಪ್ ಪಟೇಲ್ ಎಫ್ಬಿಐ ನಿರ್ದೇಶಕ ಸ್ಥಾನಕ್ಕೆ ಅತ್ಯುತ್ತಮ ವ್ಯಕ್ತಿ. ಅವರು ಕಠಿಣ ಮತ್ತು ಬಲಿಷ್ಠ ವ್ಯಕ್ತಿತ್ವ ಹೊಂದಿದ್ದಾರೆ. ಅವರಿಗೆ ತಮ್ಮದೇ ಆದ ಅಭಿಪ್ರಾಯಗಳಿವೆ.”
ನಿಮ್ಮ ಬಳಿ ಈ 2 ರೂಪಾಯಿ ಹಳೆಯ ನೋಟು ಇದ್ರೆ, 5 ಲಕ್ಷ ರೂ. ಗಳಿಸಬಹುದು!
ಈ ಹಿಂದೆ ಡೊನಾಲ್ಡ್ ಟ್ರಂಪ್(Donald trump), “ಅವರು ಒಬ್ಬ ಅದ್ಭುತ ವಕೀಲ, ತನಿಖಾಧಿಕಾರಿ ಮತ್ತು ಅಮೆರಿಕ ಫಸ್ಟ್ ಫೈಟರ್. ಭ್ರಷ್ಟಾಚಾರವನ್ನು ಬಹಿರಂಗಪಡಿಸಲು ಮತ್ತು ನ್ಯಾಯವನ್ನು ರಕ್ಷಿಸಲು ಅವರು ತಮ್ಮ ವೃತ್ತಿಬದುಕನ್ನೇ ಮೀಸಲಿಟ್ಟಿದ್ದಾರೆ.” ಎಂದು ಹೇಳಿದ್ದರು.
ಕಾಶ್ ಪಟೇಲ್ (Kash Patel) ಯಾರು?
ಕಾಶ್ ಪಟೇಲ್ ಅವರ ತಂದೆ – ತಾಯಿ ಗುಜರಾತ್ ಮೂಲದವರು. ಅವರು 1980ರಲ್ಲಿ ನ್ಯೂಯಾರ್ಕ್ ಗಾರ್ಡನ್ ಸಿಟಿಯಲ್ಲಿ ಜನಿಸಿದರು. ಕಾಶ್ ಪಟೇಲ್ ಅವರ ಮೂಲ ಹೆಸರು ಕಶ್ಯಪ್ ಪಟೇಲ್. ರಿಚ್ಮಂಡ್ ವಿಶ್ವವಿದ್ಯಾನಿಲಯದಲ್ಲಿ ಪದವಿ ಪೂರ್ವ ಅಧ್ಯಯನವನ್ನು ಪೂರ್ಣಗೊಳಿಸಿದ ಬಳಿಕ, ಯೂನಿವರ್ಸಿಟಿ ಕಾಲೇಜ್ ಲಂಡನ್ನಲ್ಲಿ ಕಾನೂನು ಪದವಿಯನ್ನು ಪಡೆದರು.
ಪಬ್ಲಿಕ್ ಪ್ರೊಸೆಕ್ಯೂಟರ್ ಆಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಅವರು, ಸುಮಾರು ಒಂಬತ್ತು ವರ್ಷಗಳ ಕಾಲ ಮಿಯಾಮಿ ನ್ಯಾಯಾಲಯಗಳಲ್ಲಿ ವಕೀಲರಾಗಿ ಕಾರ್ಯನಿರ್ವಹಿಸಿದರು. ಇವುಗಳಲ್ಲಿ ಕೊಲೆ, ಮಾದಕವಸ್ತು ಕಳ್ಳಸಾಗಣೆ, ಆರ್ಥಿಕ ಅಪರಾಧಗಳು ಸೇರಿದಂತೆ ಹಲವು ಸಂಕೀರ್ಣ ಪ್ರಕರಣಗಳನ್ನು ಅವರು ಮುಂದುಹರಿಸಿದರು.
ನ್ಯಾಯಾಂಗ ಇಲಾಖೆಯ ವಿವಿಧ ವಿಭಾಗಗಳಲ್ಲಿ ಅನುಭವ ಪಡೆದ ಕಾಶ್, ಟ್ರಂಪ್ ಮೀಡಿಯಾ ಮತ್ತು ಟೆಕ್ನಾಲಜಿ ಗ್ರೂಪ್ನ ನಿರ್ದೇಶಕರ ಮಂಡಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.