
Karnataka 2nd PUC Exam 2025 Result
ದ್ವಿತೀಯ ಪಿಯುಸಿ (2nd PUC Students) ವಿದ್ಯಾರ್ಥಿಗಳೇ ಗಮನಿಸಿ! ನಿಮ್ಮ ಫಲಿತಾಂಶದ ಕಾಯುವಿಕೆಗೆ ನಾಳೆ ತೆರೆ ಬೀಳಲಿದೆ! ಮಾರ್ಚ್ 1 ರಿಂದ 20 ರವರೆಗೆ ನಡೆದಿದ್ದ ಪರೀಕ್ಷೆಯ ಫಲಿತಾಂಶವು ನಾಳೆ, ಏಪ್ರಿಲ್ 8 ರಂದು ಪ್ರಕಟವಾಗಲಿದೆ. ((Karnataka 2nd PUC Exam 2025 Result) ಫಲಿತಾಂಶದ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳಿಗೆ ಇದೊಂದು ಸಿಹಿ ಸುದ್ದಿಯಾಗಿದೆ.
ದ್ವಿತೀಯ ಪಿಯುಸಿ ಫಲಿತಾಂಶದ ಕುರಿತು ಮಹತ್ವದ ಮಾಹಿತಿ ಇಲ್ಲಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು ನಾಳೆ (ಏಪ್ರಿಲ್ 8 ರಂದು) ಮಧ್ಯಾಹ್ನ 12:30ಕ್ಕೆ ಪತ್ರಿಕಾಗೋಷ್ಠಿಯನ್ನು ನಡೆಸಿ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಿದ್ದಾರೆ. ನಂತರ, ಅದೇ ದಿನ ಮಧ್ಯಾಹ್ನ 1:30ಕ್ಕೆ ಅಧಿಕೃತ ವೆಬ್ಸೈಟ್ನಲ್ಲಿ ಫಲಿತಾಂಶಗಳು ಲಭ್ಯವಾಗಲಿದ್ದು, ವಿದ್ಯಾರ್ಥಿಗಳು ಮನೆಯಲ್ಲಿಯೇ ಕುಳಿತು ಆನ್ಲೈನ್ ಮೂಲಕ ತಮ್ಮ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ. ನಿಮ್ಮ ಫಲಿತಾಂಶವನ್ನು ಹೇಗೆ ವೀಕ್ಷಿಸುವುದು ಎಂಬ ವಿವರಗಳನ್ನು ಕೆಳಗೆ ನೀಡಲಾಗಿದೆ.
ಫಲಿತಾಂಶ ನೋಡುವುದು ಎಲ್ಲಿ?
ಅಧಿಕೃತ ವೆಬ್ಸೈಟ್: ನಾಳೆ ಮಧ್ಯಾಹ್ನ 1:30ರ ನಂತರ ಈ ಕೆಳಗಿನ ವೆಬ್ಸೈಟ್ಗಳಲ್ಲಿ ಫಲಿತಾಂಶ ಲಭ್ಯವಾಗಲಿದೆ:
ಫಲಿತಾಂಶ ವೀಕ್ಷಿಸುವ ವಿಧಾನ:
- ಮೇಲೆ ತಿಳಿಸಿದ ಯಾವುದೇ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
- “2nd PUC Result 2025” ಅಥವಾ “ದ್ವಿತೀಯ ಪಿಯುಸಿ ಫಲಿತಾಂಶ 2025” ಎಂಬ ಲಿಂಕ್ ಅನ್ನು ಕ್ಲಿಕ್ ಮಾಡಿ.
- ನಿಮ್ಮ ನೋಂದಣಿ ಸಂಖ್ಯೆ (Registration Number) ಮತ್ತು ಜನ್ಮ ದಿನಾಂಕವನ್ನು ನಮೂದಿಸಿ.
- ನಂತರ “Submit” ಅಥವಾ “ಸಲ್ಲಿಸು” ಬಟನ್ ಅನ್ನು ಕ್ಲಿಕ್ ಮಾಡಿ.
- ನಿಮ್ಮ ಫಲಿತಾಂಶವು ಪರದೆಯ ಮೇಲೆ ಕಾಣಿಸುತ್ತದೆ.
- ನೀವು ನಿಮ್ಮ ಅಂಕಪಟ್ಟಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಮತ್ತು ಮುದ್ರಿಸಿಕೊಳ್ಳಬಹುದು.
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.