
ಕನ್ನಡ ಜನಪ್ರಿಯ ಗಾದೆಗಳು
ಗಾದೆಗಳು ವೇದಗಳ ಸಾರ ಎಂದು ಹೇಳುತ್ತಾರೆ. ವೇದ ಸುಳ್ಳಾದರು ಗಾದೆ ಸುಳ್ಳಾಗದು ಎಂದು ಹೇಳುತ್ತಾರೆ. ಗಾದೆಗಳು ಹಲವು ಜನರ ಜೀವನವನ್ನು ಬದಲಾಯಿಸುತ್ತದೆ. ಹಲವಾರು ಜನರಿಗೆ ಗಾದೆಗಳು ಉತ್ತಮ ದಾರಿಯನ್ನು ತೋರಿಸಿ ಒಳ್ಳೆಯ ಮಾರ್ಗದಲ್ಲಿ ನಡೆಯುವ ರೀತಿಯಲ್ಲಿ ಮಾಡುತ್ತೆ. ಹಾಗಾಗಿ ಇಲ್ಲಿ ಕೆಲವೊಂದು ಕನ್ನಡ ಜನಪ್ರಿಯ ಗಾದೆಗಳ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ. ಈ ಗಾದೆಗಳು ನಿಮ್ಮ ಜೀವನದಲ್ಲೂ ಕೂಡ ಬದಲಾವಣೆಯನ್ನು ತರಬಹುದು.
ಕನ್ನಡ ಜನಪ್ರಿಯ ಗಾದೆಗಳು । ಕನ್ನಡ ಗಾದೆಗಳ ವಿವರಣೆ
ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ
ಈ ಗಾದೆ ಮಾತನ್ನು ನೀವು ಕೇಳಿರಬಹುದು. ಆದರೆ ಹಲವು ಜನರಿಗೆ ಈ ಗಾದೆ ಮಾತಿನ ಅರ್ತ ಗೊತ್ತಿಲ್ಲ. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಈ ಗಾದೆ ಮಾತಿನ ಅರ್ಥ ಏನೆಂದರೆ ಕುಂಬಾರ ಒಂದು ಮಡಿಕೆಯನ್ನು ತಯಾರು ಮಾಡಬೇಕೆಂದರೆ ಹಲವು ದಿನಗಳ ಪರಿಶ್ರಮ ಹಾಗೂ ತಾಳ್ಮೆ ಕೂಡ ಬೇಕಾಗುತ್ತದೆ. ಮಡಿಕೆಯನ್ನು ಮಾಡಿ ಅದನ್ನು ಒಣಗಿಸಿ ನಂತರ ಅವನು ಅದನ್ನು ಮಾರಿ ಅದರಿಂದ ಹಣವನ್ನು ಸಂಪಾದಿಸಬೇಕಾಗುತ್ತೆ. ಆದರೆ ಅದೇ ಮಡಿಕೆಯನ್ನು ಒಡೆಯಲು ದೊಣ್ಣೆಗೆ ಒಂದು ನಿಮಿಷ ಸಾಕು. ಹಾಗೆಯೆ ನಮ್ಮ ಜೀವನದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿಕೊಂಡು ಬಂದು ಒಳ್ಳೆಯ ಹೆಸರನ್ನು ಸಮಾಜದಲ್ಲಿ ಗಳಿಸಿದ ನಂತರ ಯಾವುದಾದರು ಕೆಟ್ಟ ಕೆಲಸ ಮಾಡಿದರೆ ನಿಮ್ಮ ಹೆಸರು ಕೂಡ ಹಾಳಾಗುತ್ತೆ. ಇಷ್ಟು ವರ್ಷಗಳಿಂದ ಸಂಪಾದನೆ ಮಡಿದ ಕೀರ್ತಿ ಎಲ್ಲವು ಕೆಲವೇ ಕೆಲವು ನಿಮಿಷಗಳಲ್ಲಿ ಹಾಳಾಗುತ್ತೆ ಎನ್ನುವುದೇ ಈ ಗಾದೆ ಮಾತಿನ ಅರ್ಥವಾಗಿದೆ.
ಮನಸಿದ್ದರೆ ಮಾರ್ಗ
ಮನಸಿದ್ದರೆ ಮಾರ್ಗ ಈ ಗಾದೆ ಮಾತಿನ ಅರ್ಥ ಏನೆಂದರೆ ಯಾವುದಾದರು ಒಂದು ಕೆಲಸವನ್ನು ಮಾಡಲು ನಮಗೆ ಒಳ್ಳೆಯ ಮನಸ್ಸು ಹಾಗೂ ಏಕಾಗ್ರತೆ ಬೇಕಾಗುತ್ತೆ. ಆದರೆ ಹಲವು ಜನರು ಒಂದು ಕೆಲಸವನ್ನು ಮಾಡುವಾಗ ಅದನ್ನು ಬಿಟ್ಟುಬಿಡುತ್ತಾರೆ. ಈ ಕೆಲಸ ಮಾಡಲು ನಮಿಂದ ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಆದರೆ ನಮಗೆ ಕೆಲಸದಲ್ಲಿ ಗೆಲುವು ಸಿಗಬೇಕು ಎಂದರೆ ಮನಸ್ಸು ಹಾಗೂ ಕಠಿಣ ಪರಿಶ್ರಮ ಕೂಡ ಬೇಕಾಗುತ್ತದೆ. ಹಾಗಾಗಿ ಮನಸಿದ್ದರೆ ಮಾರ್ಗ ಎಂದು ಹಿರಿಯರು ಹೇಳಿದ್ದಾರೆ. ಇದು ಕನ್ನಡ ಗಾದೆ ಮಾತುಗಳು ಮತ್ತು ಅದರ ಅರ್ಥ
ಮಾಡಿದುಣ್ಣೋ ಮಾರಾಯ
ಮಾಡಿದುಣ್ಣೋ ಮಾರಾಯ ಈ ಗಾದೆ ಕನ್ನಡ ಜನಪ್ರಿಯ ಗಾದೆಗಳಲ್ಲಿ ಒಂದು. ಹಲವಾರು ಮಾತನಾಡುವಾಗ ಈ ಗಾದೆ ಮಾತನ್ನು ಬಾಲಸುತ್ತಾರೆ. ಈ ಗಾದೆ ಮಾತಿನ ಅರ್ಥವೇನೆಂದರೆ ಹಲವು ಒಳ್ಳೆಯ ಕೆಲಸವನ್ನು ಮಾಡುತ್ತಾರೆ ಹಾಗಾಗಿ ಅಂತಹ ಜನರಿಗೆ ಯಾವಾಗಲು ಒಳ್ಳೆಯದು ಆಗುತ್ತೆ. ಹಾಗೆ ಇನ್ನು ಕೆಲವು ಜನರು ಕೆಟ್ಟ ಕೆಲಸವನ್ನು ಮಾಡುತ್ತಾರೆ ಅಂತವರಿಗೆ ಹಲವು ಬಾರಿ ಕೆಟ್ಟ ಘಟನೆಗಳು ಸಂಭವಿಸುತ್ತದೆ. ಹಾಗಾಗಿ ನಾವು ಯಾವಾಗಲು ಒಳ್ಳೆಯ ಕೆಲಸಗಳನ್ನು ಮಾಡಬೇಕು. ಇದರಿಂದ ನಮಗೆ ಯಾವಾಗಲು ಒಳ್ಳೆಯದು ಆಗುತ್ತೆ ಎಂದು ಹಿರಿಯರು ಹೇಳುತ್ತಾರೆ.