ಮಧ್ಯಾಹ್ನ ಊಟದ ನಂತರ ನಿದ್ರೆ ಮಾಡುವುದು ಒಳ್ಳೆಯದೇ ?

ಮಧ್ಯಾಹ್ನ ಊಟ ಮಾಡಿದ ತಕ್ಷಣ ಮಲಗುವುದನ್ನ ಹಲವು ಜನರು ರೂಢಿಸಿಕೊಂಡಿದ್ದಾರೆ. ಊಟ ಮಾಡಿದ ನಂತರ ಜೀರ್ಣಾಂಗ ವ್ಯವಸ್ಥೆಯಲ್ಲಿ ರಕ್ತ ಪರಿಚಲನೆ ಹೆಚ್ಚಾಗುತ್ತದೆ. ಇದು ಮೆದುಳಿಗೆ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಮಧ್ಯಾಹ್ನ ಮಲಗುವುದು ಒಳ್ಳೆಯದೇ? ಅಥವಾ ಕೆಟ್ಟದ್ದೇ ? ಪೂರ್ತಿ ವಿವರವನ್ನು ನೋಡಿ.

ಮಧ್ಯಾಹ್ನದ ನಿದ್ರೆ ದೇಹವನ್ನು ಮಾತ್ರವಲ್ಲದೆ ಮನಸ್ಸನ್ನು ವಿಶ್ರಾಂತಗೊಳಿಸುತ್ತೆ. ದಿನಕ್ಕೆ ಸುಮಾರು 1 ಗಂಟೆ ಮಲಗುವುದರಿಂದ ಇಡೀ ದೇಹದ ಸ್ನಾಯುಗಳನ್ನು ಸಡಿಲಗೊಳಿಸುತ್ತೆ. ಹಾಗಾಗಿ ಒಂದು ಗಂಟೆಗಿಂತ ಹೆಚ್ಚಿನ ನಿದ್ರೆ ಮಾಡುವುದು ಒಳ್ಳೆಯದಲ್ಲ.

ಇದನ್ನೂ ಓದಿ: ಕಿಸೆಯಲ್ಲಿ ಮೊಬೈಲ್ ಇಟ್ಟುಕೊಳ್ಳುವುದರಿಂದ ಈ ಸಮಸ್ಯೆ ಬರುತ್ತೆ ಎಚ್ಚರ..!

ದಿನದ ಸಮಯದಲ್ಲಿ ಒಂದು ಗಂಟೆಯಿಂದ ಜಾಸ್ತಿ ಮಲಗುವುದರಿಂದ ದೇಹದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಹಾಗೆಯೆ ರಾತ್ರಿ ಸಮಯದಲ್ಲಿ ಬರುವ ನೈಸರ್ಗಿಕ ನಿದ್ರೆಯ ಮೇಲೆಯೂ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ಮಧ್ಯಾಹ್ನದ ಸಮಯದಲ್ಲಿ ಒಂದು ಗಂಟೆಯಿಂದ ಜಾಸ್ತಿ ನಿದ್ರೆ ಮಾಡದಿದ್ದರೆ ಒಳ್ಳೆಯದು.

ಮಕ್ಕಳಿಗೆ ಮಧ್ಯಾಹ್ನದ ನಿದ್ರೆ ಒಳ್ಳೆಯದಲ್ಲ

ಮಕ್ಕಳು ಮಧ್ಯಾಹ್ನದ ಸಮಯದಲ್ಲಿ ಮಲಗುವುದು ಒಳ್ಳೆಯದಲ್ಲ ಎಂದು ಹೇಳುತ್ತಾರೆ.

Share