
ಇಸ್ರೇಲ್ನ ವೈದ್ಯರ ತಂಡವೊಂದು ಅಪಘಾತದಲ್ಲಿ ದೇಹದಿಂದ ಬೇರ್ಪಟ್ಟಿದ್ದ ಬಾಲಕನ ತಲೆಯನ್ನು ಮರುಜೋಡಿಸುವ ಮೂಲಕ ಇಡೀ ವೈದ್ಯಕೀಯ ಜಗತ್ತಿಗೆ ಮಾದರಿಯಾಗಿದೆ. ಈ ಅಪರೂಪದ ಶಸ್ತ್ರಚಿಕಿತ್ಸೆಯನ್ನು ವೈಜ್ಞಾನಿಕವಾಗಿ ‘ಬಿಲಾಟರಲ್ ಅಟ್ಲಾಂಟೊ ಆಕ್ಸಿಪಿಟಲ್ ಜಾಯಿಂಟ್ ಡಿಸ್ಲೊಕೇಷನ್’ ಎಂದು ಕರೆಯುತ್ತಾರೆ. ಇಂತಹ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸಿದ ವೈದ್ಯರ ಸಾಹಸಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಸುಲೈಮನ್ ಹಸನ್ ಎಂಬ 12 ವರ್ಷದ ಬಾಲಕ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದಾಗ ಭೀಕರ ಅಪಘಾತ ಸಂಭವಿಸಿದೆ. ಬೈಕ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬಾಲಕನ ಕುತ್ತಿಗೆ ಸಂಪೂರ್ಣವಾಗಿ ಮುರಿದುಹೋಗಿತ್ತು. ತಕ್ಷಣವೇ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ವೈದ್ಯರು ಪರೀಕ್ಷಿಸಿದಾಗ ಬಾಲಕನ ತಲೆಯು ಕತ್ತಿನ ಮೂಳೆಯಿಂದ ಸಂಪೂರ್ಣವಾಗಿ ಬೇರ್ಪಟ್ಟಿದೆ ಎಂದು ತಿಳಿದುಬಂದಿದೆ. ಇದು ಅತ್ಯಂತ ಅಪರೂಪದ ಮತ್ತು ಗಂಭೀರವಾದ ಗಾಯವಾಗಿದ್ದು, ಬದುಕುಳಿಯುವ ಸಾಧ್ಯತೆಗಳು ಕಡಿಮೆ.
ಸುಲೈಮನ್ ಹಾಸನ್ನ ಸ್ಥಿತಿ ಗಂಭೀರವಾಗಿದ್ದರೂ, ವೈದ್ಯರು ತಕ್ಷಣವೇ ಶಸ್ತ್ರಚಿಕಿತ್ಸೆಗೆ ಮುಂದಾದರು. ಆಧುನಿಕ ವೈದ್ಯಕೀಯ ತಂತ್ರಜ್ಞಾನಗಳನ್ನು ಬಳಸಿಕೊಂಡು ಹಲವಾರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು. ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಯಲ್ಲಿ ಪರಿಣತಿ ಹೊಂದಿರುವ ಇಸ್ರೇಲ್ನ ನುರಿತ ವೈದ್ಯರು ಈ ಸಂಕೀರ್ಣ ಶಸ್ತ್ರಚಿಕಿತ್ಸೆಯಲ್ಲಿ ಭಾಗವಹಿಸಿದರು. ಅಪಘಾತದಲ್ಲಿ ಬಾಲಕನ ತಲೆಯೇ ಬೇರ್ಪಟ್ಟಿದ್ದರೂ, ನುರಿತ ಮೂಳೆ ಶಸ್ತ್ರಚಿಕಿತ್ಸಕರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ತಲೆಯನ್ನು ಮರುಜೋಡಿಸುವಲ್ಲಿ ಯಶಸ್ವಿಯಾದರು.
ಇದನ್ನೂ ಓದಿ: Jio Electric Bicycle 2025: ಒಂದು ಚಾರ್ಜ್ ನಲ್ಲಿ 400 KM ರೇಂಜ್ ನೀಡುತ್ತೆ
ಸುಲೈಮನ್ ಹಾಸನ್ನ ಈ ಸಂಕೀರ್ಣ ಶಸ್ತ್ರಚಿಕಿತ್ಸೆಯು ಇಸ್ರೇಲ್ನಲ್ಲಿ ಕಳೆದ ತಿಂಗಳೇ ನಡೆದಿತ್ತು. ಬಾಲಕ ಸಂಪೂರ್ಣವಾಗಿ ಚೇತರಿಸಿಕೊಳ್ಳುವವರೆಗೂ ವೈದ್ಯರು ಈ ವಿಷಯವನ್ನು ಬಹಿರಂಗಪಡಿಸಲಿಲ್ಲ. ಪ್ರಸ್ತುತ, ಬಾಲಕನ ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆಯಾಗಿದ್ದು, ಅವನು ಸಾಮಾನ್ಯ ಜೀವನವನ್ನು ನಡೆಸುತ್ತಿದ್ದಾನೆ. ವೈದ್ಯರ ಈ ಸಾಧನೆಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಚೇತರಿಸಿಕೊಂಡಿರುವ ಬಾಲಕನ ಪೋಷಕರು ವೈದ್ಯರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಅಪರೂಪದ ಶಸ್ತ್ರಚಿಕಿತ್ಸೆಯ ಯಶಸ್ಸು ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ. ಇದು ವೈದ್ಯರ ಪರಿಣತಿ ಮತ್ತು ತಂತ್ರಜ್ಞಾನದ ಮಹತ್ವವನ್ನು ಎತ್ತಿ ತೋರಿಸುತ್ತದೆ. ಇಂತಹ ಸಾಧನೆಗಳು ಭವಿಷ್ಯದಲ್ಲಿ ಇನ್ನೂ ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಲು ಪ್ರೇರಣೆ ನೀಡುತ್ತವೆ.
Sri Rama is a seasoned journalist with four years of experience, specializing in capturing and analyzing the latest news and trending stories. He brings extensive expertise in news collection, reporting, and interviewing across a broad spectrum of topics, including politics.