
ಹೆಚ್ಚಿನ ಜನರು ಹಸುವಿನ ಹಾಲು ಕುಡಿಯುತ್ತಾರೆ. ಹಾಗೆಯೇ ಕೆಲವರು ಎಮ್ಮೆ ಹಾಲು ಕುಡಿಯುತ್ತಾರೆ. ಹಾಗಾದರೆ ಎಮ್ಮೆಯ ಹಾಲಿಗೂ ಹಸುವಿನ ಹಾಲಿಗೂ ಇರುವ ವ್ಯತ್ಯಾಸವೇನು? ಎರಡರಲ್ಲಿ ಯಾವ ಹಾಲು ಉತ್ತಮ ಅಂತ ನೋಡೋಣ.
- ಹಸುವಿನ ಹಾಲು ಕುಡಿಯಬೇಕೋ ಅಥವಾ ಎಮ್ಮೆ ಹಾಲು?
- ಯಾವ ಹಾಲು ಉತ್ತಮ?
- ಯಾವ ಹಾಲಿನಲ್ಲಿ ಯಾವ ಪೋಷಕಾಂಶ ಇರುತ್ತೆ?
ನೀವು ತೂಕವನ್ನು ಇಳಿಸಿಕೊಳ್ಳಲು ಬಯಸಿದರೆ ಹಸುವಿನ ಹಾಲನ್ನು ಕುಡಿಯಿರಿ. ಏಕೆಂದರೆ ಎಮ್ಮೆಯ ಹಾಲಿನಲ್ಲಿ ಅಧಿಕ ಕೊಬ್ಬು ಇರುತ್ತೆ. ಹಸುವಿನ ಹಾಲಿನಲ್ಲಿ ಕಡಿಮೆ ಕೊಬ್ಬು ಇರುತ್ತೆ. ಹಸುವಿನ ಹಾಲು ತೆಳ್ಳಗಾಗಿರುತ್ತೆ ಆದ್ರೆ ಎಮ್ಮೆ ಹಾಲುಗಟ್ಟಿಯಾಗಿರುತ್ತೆ. ಎಮ್ಮೆಯ ಹಾಲು ಜೀರ್ಣವಾಗಲು ತುಂಬಾ ಸಮಯ ಬೇಕು ಆದ್ರೆ ಹಸುವಿನ ಹಾಲು ಬೇಗ ಜೀರ್ಣವಾಗುತ್ತೆ.
ನೀವು ಕಡಿಮೆ ಹಾಲನ್ನು ಕುಡಿಯುತ್ತಿದ್ದರೆ ಹಸುವಿನ ಹಾಲನ್ನು ಕುಡಿಯಿರಿ. ಯಾಕೆಂದರೆ ಹಸುವಿನ ಹಾಲಿನಲ್ಲಿ ಶೇಕಡಾ 90 ರಷ್ಟು ನೀರು ಇರುತ್ತೆ. ಹಾಗಾಗಿ ಇದು ದೇಹವನ್ನು ಹೈಡ್ರೇಟ್ ಆಗಿ ಇಡುತ್ತೆ. ಎಮ್ಮೆ ಹಾಲಿನಲ್ಲಿ ಹಸುವಿನ ಹಾಲಿಗಿಂತ ಅಧಿಕ ಪ್ರಮಾಣದ ಪ್ರೋಟೀನ್ ಇರುತ್ತೆ. ಹಾಗೆಯೆ ಎಮ್ಮೆ ಹಾಲು ಶಾಖ ನಿರೋಧಕವಾಗಿದೆ. ಹಾಗಾಗಿ ಚಿಕ್ಕ ಮಕ್ಕಳು ಹಾಗೂ ವಯಸ್ಸಾದವರು ಇದನ್ನು ಕುಡಿಯದಂತೆ ಹೇಳಲಾಗಿದೆ.
ಎಮ್ಮೆ ಹಾಲಿನಲ್ಲಿ ಹೆಚ್ಚು ಕೊಲೆಸ್ಟ್ರಾಲ್ ಇದೆ. ಹಸುವಿನ ಹಾಲಿನಲ್ಲಿ ಕಡಿಮೆ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆ ಇದೆ. ಎಮ್ಮೆಯ ಹಾಲಿನಲ್ಲಿ ಹಸುವಿನ ಹಾಲಿಗಿಂತ ಅಧಿಕ ಪ್ರಮಾಣದ ಕ್ಯಾಲೊರಿ ಇದೆ. ನಿಮಗೆ ನಿದ್ರಾಹೀನತೆ ಸಮಸ್ಯೆ ಕಾಡುತ್ತಿದ್ದರೆ ಎಮ್ಮೆ ಹಾಲು ಕುಡಿಯಿರಿ. ಇದು ಈ ಸಮಸ್ಯೆಯಿಂದ ಹೊರಬರಲು ಸಹಾಯ ಮಾಡುತ್ತೆ.
ಊಟ ಮಾಡಿದ ತಕ್ಷಣ ಮಲಗಿದರೆ ಏನೆಲ್ಲಾ ತೊಂದರೆ ಆಗುತ್ತೆ ನೋಡಿ
ಚಳಿಗಾಲದಲ್ಲಿ ಈ ಸಮಸ್ಯೆ ಇದ್ದರೆ ಮೊಸರನ್ನು ಸೇವಿಸಬೇಡಿ
ರಾತ್ರಿ ಮಲಗುವ ಮುನ್ನ ಬಾಳೆಹಣ್ಣು ತಿಂದರೆ ಏನಾಗುತ್ತೆ ನೋಡಿ
ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ಪಡೆಯಲು ಇದನ್ನು ಸೇವನೆ ಮಾಡಿ
Disclaimer: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ROCK TV Kannada ಅದನ್ನು ಖಚಿತಪಡಿಸುವುದಿಲ್ಲ.