
- 48 ಗಂಟೆಗಳಲ್ಲಿ ಮೇಷದಲ್ಲಿ ಶುಕ್ರ-ಚಂದ್ರ ಸಂಯೋಗ
- ವೃತ್ತಿ-ವ್ಯವಹಾರದಲ್ಲಿ ಪ್ರಗತಿ, ಸಂಬಂಧಗಳಲ್ಲಿ ಮಾಧುರ್ಯ, ಐಷಾರಾಮಿ ಜೀವನ
- ವೃತ್ತಿ-ವ್ಯವಹಾರದಲ್ಲಿ ನಾಯಕತ್ವಕ್ಕೆ ಮನ್ನಣೆ
ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಸಂಯೋಗಗಳು ಜೀವನದಲ್ಲಿ ಅನಿರೀಕ್ಷಿತ ತಿರುವುಗಳನ್ನು ತರುತ್ತವೆ. ಪ್ರೀತಿ, ಐಷಾರಾಮಿ ಜೀವನದ ಕಾರಕನಾದ ಶುಕ್ರ ಮತ್ತು ಭಾವನೆ, ಮನಸ್ಸಿನ ಕಾರಕನಾದ ಚಂದ್ರ ಗ್ರಹಗಳು ಒಟ್ಟಾದಾಗ, ಅದು ಶುಭ ಫಲಿತಾಂಶಗಳನ್ನು ನೀಡುತ್ತದೆ. ಇದೀಗ, ಅಂಥದ್ದೇ ಒಂದು ಅಪರೂಪದ ಮತ್ತು ಶುಭಕರ ಸಂಯೋಗವು ಇನ್ನೇನು 48 ಗಂಟೆಗಳಲ್ಲಿ ಸೃಷ್ಟಿಯಾಗಲಿದೆ!
ವೈದಿಕ ಜ್ಯೋತಿಷ್ಯದ ಪ್ರಕಾರ, ಜೂನ್ 20, 2025 ರಂದು ಮಂಗಳನ ಅಧಿಪತ್ಯದ ಮೇಷ ರಾಶಿಯಲ್ಲಿ ಶುಕ್ರ-ಚಂದ್ರರ ಸಂಯೋಗ ನಿರ್ಮಾಣವಾಗಲಿದೆ. ಈ ಶುಭ ಯುತಿಯು ಕೆಲವು ರಾಶಿಗಳ ಪಾಲಿಗೆ ಅದೃಷ್ಟದ ಬಾಗಿಲನ್ನೇ ತೆರೆಯಲಿದೆ. ಈ ರಾಶಿಯವರು ಅಪಾರ ಧನಾಗಮನ, ಸುಖ-ಸೌಕರ್ಯ ಮತ್ತು ಐಷಾರಾಮಿ ಜೀವನ ನಡೆಸಲಿದ್ದಾರೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಇಷ್ಟು ದಿನ ಅನುಭವಿಸಿದ ಕಷ್ಟಗಳೆಲ್ಲ ದೂರವಾಗಿ, ಸಂಪತ್ತಿನ ಮಹಾಪೂರ ಹರಿದುಬರಲಿದೆ.
ಹಾಗಾದರೆ, ಶುಕ್ರ-ಚಂದ್ರ ಯುತಿಯಿಂದ ಅದೃಷ್ಟ ಖುಲಾಯಿಸಿ, ಸುಖದ ಸುಪ್ಪತ್ತಿಗೆಯಲ್ಲಿ ಜೀವನ ಸಾಗಿಸಲಿರುವ ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ:
ಶುಕ್ರ-ಚಂದ್ರ ಯುತಿಯಿಂದ ಅದೃಷ್ಟ ಬದಲಾಗಲಿರುವ 4 ರಾಶಿಗಳು
ಕರ್ಕಾಟಕ ರಾಶಿ (Cancer): ಕರ್ಕಾಟಕ ರಾಶಿಯವರಿಗೆ ಶುಕ್ರನೊಂದಿಗೆ ಚಂದ್ರನ ಈ ಸಂಯೋಗವು ವೃತ್ತಿ ಬದುಕಿನ ಜೊತೆಗೆ ವೈಯಕ್ತಿಕ ಬದುಕಿನಲ್ಲೂ ಅಪಾರ ಯಶಸ್ಸನ್ನು ನೀಡಲಿದೆ. ಕಳೆದುಹೋಗಿದ್ದ ಪ್ರೀತಿ ಅಥವಾ ಸಂಬಂಧಗಳು ಮತ್ತೆ ಮರಳಿ ಸಿಗುವ ಸಾಧ್ಯತೆಗಳಿವೆ. ಸಂಗಾತಿಯೊಂದಿಗೆ ಸುಮಧುರವಾದ ಕ್ಷಣಗಳನ್ನು ಅನುಭವಿಸುವಿರಿ, ನಿಮ್ಮ ವೈವಾಹಿಕ ಜೀವನದಲ್ಲಿ ಸಾಮರಸ್ಯ ಹೆಚ್ಚಲಿದೆ. ನಿಮ್ಮ ಭಾವನಾತ್ಮಕ ನೆಮ್ಮದಿ ಹೆಚ್ಚಲಿದ್ದು, ಜೀವನದ ಎಲ್ಲ ರಂಗಗಳಲ್ಲೂ ಸಕಾರಾತ್ಮಕ ಬದಲಾವಣೆಗಳನ್ನು ಕಾಣುವಿರಿ.
ಇದನ್ನೂ ಓದಿ: 500 ವರ್ಷಗಳ ಬಳಿಕ ಮಹಾ ಅದೃಷ್ಟ! ಈ 3 ರಾಶಿಗೆ ರಾಜಯೋಗ: ಕಷ್ಟಗಳೆಲ್ಲಾ ಮಾಯ, ಸುಖ-ಸಮೃದ್ಧಿ ಖಚಿತ!
ತುಲಾ ರಾಶಿ (Libra): ತುಲಾ ರಾಶಿಯವರಿಗೆ ಶುಕ್ರ-ಚಂದ್ರರ ಈ ಶುಭ ಸಂಯೋಗವು ಪಾಲುದಾರಿಕೆ ವ್ಯವಹಾರದಲ್ಲಿ ಭರ್ಜರಿ ಲಾಭವನ್ನು ನೀಡಲಿದೆ. ಹೊಸ ಒಪ್ಪಂದಗಳು, ಲಾಭದಾಯಕ ಯೋಜನೆಗಳು ನಿಮ್ಮನ್ನು ಅರಸಿ ಬರಲಿವೆ. ವಿವಾಹಿತರು ತಮ್ಮ ಸಂಗಾತಿಯೊಂದಿಗೆ ರೊಮ್ಯಾಂಟಿಕ್ ಕ್ಷಣಗಳನ್ನು ಅನುಭವಿಸುವರು, ಪರಸ್ಪರ ಪ್ರೀತಿ ಹೆಚ್ಚಲಿದೆ. ಸಮಾಜದಲ್ಲಿ ನಿಮ್ಮ ಕೀರ್ತಿ, ಪ್ರತಿಷ್ಠೆ ಗಣನೀಯವಾಗಿ ಹೆಚ್ಚಾಗಲಿದೆ. ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ಅಥವಾ ಹೊಸ ಉದ್ಯಮಗಳಿಗೆ ಕೈ ಹಾಕಲು ಇದು ಅತ್ಯಂತ ಸುಸಮಯವಾಗಿದೆ. ಆರ್ಥಿಕವಾಗಿ ಬಲಶಾಲಿಯಾಗುವಿರಿ.
ವೃಷಭ ರಾಶಿ (Taurus): ವೃಷಭ ರಾಶಿಯವರಿಗೆ ಈ ಶುಕ್ರ-ಚಂದ್ರ ಸಂಯೋಗದಿಂದ ಅದೃಷ್ಟದ ಬಾಗಿಲು ತೆರೆಯಲಿದೆ. ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಸಮಾಜದಲ್ಲಿ ನಿಮ್ಮ ವ್ಯಕ್ತಿತ್ವಕ್ಕೆ ಪ್ರೀತಿ, ಗೌರವಗಳು ದೊರೆಯಲಿವೆ. ವೃತ್ತಿ-ವ್ಯವಹಾರದಲ್ಲಿ ನಿಮ್ಮ ನಾಯಕತ್ವದ ಸಾಮರ್ಥ್ಯಕ್ಕೆ ವಿಶೇಷ ಮನ್ನಣೆ ದೊರೆಯಲಿದ್ದು, ಹೊಸ ವ್ಯವಹಾರವನ್ನು ಆರಂಭಿಸಲು ಇದು ಸುವರ್ಣ ಸಮಯ. ಹಠಾತ್ ಧನಲಾಭವಾಗಲಿದ್ದು, ಹಣಕಾಸಿನ ಸ್ಥಿತಿ ಹಿಂದೆಂದಿಗಿಂತಲೂ ಉತ್ತಮಗೊಳ್ಳಲಿದೆ. ಇಷ್ಟು ದಿನಗಳ ಕಾಲ ಅನುಭವಿಸಿದ ಕಷ್ಟಗಳು ದೂರಾಗಿ, ಸುಖದ ಸುಪ್ಪತ್ತಿಗೆಯಲ್ಲಿ ಜೀವನ ಸಾಗಿಸುವಿರಿ.
ಸಿಂಹ ರಾಶಿ (Leo): ಸಿಂಹ ರಾಶಿಯವರಿಗೆ ಶುಕ್ರ-ಚಂದ್ರರ ಸಂಯೋಗದಿಂದಾಗಿ ಉದ್ಯೋಗ ರಂಗದಲ್ಲಿ ಅಪಾರ ಯಶಸ್ಸು ಪ್ರಾಪ್ತಿಯಾಗಲಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದ್ದು, ಬಡ್ತಿ ಅಥವಾ ಉತ್ತಮ ಅವಕಾಶಗಳು ನಿಮ್ಮನ್ನು ಅರಸಿ ಬರಲಿವೆ. ಹಣಕಾಸಿನ ಸ್ಥಿತಿ ಗಣನೀಯವಾಗಿ ಉತ್ತಮಗೊಳ್ಳಲಿದೆ. ಜೀವನದಲ್ಲಿ ಸುಖ-ಸೌಕರ್ಯಗಳು ಹೆಚ್ಚಾಗಲಿದ್ದು, ಐಷಾರಾಮಿ ಬದುಕನ್ನು ಅನುಭವಿಸುವಿರಿ. ನಿಮ್ಮ ಸಾಮಾಜಿಕ ಸ್ಥಾನಮಾನ ಹೆಚ್ಚಾಗಲಿದ್ದು, ಜನರು ನಿಮ್ಮನ್ನು ಗೌರವಿಸುವರು.
ಇದನ್ನೂ ಓದಿ: ಗುರು-ಶನಿ ಸೇರಿ ಸೃಷ್ಟಿಸಿದ ಮಹಾಯೋಗ! ಬಯಸಿದ್ದೆಲ್ಲ ಸಿಗುವ ರಾಜಯೋಗ ಕೋಟಿ ಕೋಟಿ ಹಣ!
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷ್ಯ ಲೆಕ್ಕಾಚಾರಗಳು, ಸಾಮಾನ್ಯ ನಂಬಿಕೆಗಳು ಮತ್ತು ಜ್ಯೋತಿಷ್ಯ ತಜ್ಞರ ಅಭಿಪ್ರಾಯಗಳನ್ನು ಆಧರಿಸಿದೆ. ವೈಯಕ್ತಿಕ ಜಾತಕದ ಆಧಾರದ ಮೇಲೆ ಫಲಿತಾಂಶಗಳು ಬದಲಾಗಬಹುದು.)
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.