
ಮೊಬೈಲ್ ಅನ್ನು ಈಗಿನ ದಿನದಲ್ಲಿ ಯಾರು ಬಳಕೆ ಮಾಡುವುದಿಲ್ಲ ಹೇಳಿ. ಎಲ್ಲರೂ ಮೊಬೈಲ್ ಅನ್ನು ಬಳಸುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಹಿಂದಿನ ಜೀವನ ಶೈಲಿಗೆ ಹೋಲಿಕೆ ಮಾಡಿದರೆ ಇತ್ತೀಚಿನ ದಿನಗಳಲ್ಲಿ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಹಾಗೆಯೇ ಹಿಂದಿನ ದಿನಗಳಿಗಿಂತ ಈಗಿನ ದಿನಗಳಲ್ಲಿ ಜೀವನ ಪಧ್ಧತಿ ಕೂಡ ಬದಲಾಗುತ್ತಿದೆ.
ಹೆಚ್ಚಿನ ಜನರು ಈಗಿನ ದಿನಗಳಲ್ಲಿ ಅನಾರೋಗ್ಯ ಸಮಸ್ಯೆ ಇಂದ ಬಳಲುತ್ತಿದ್ದಾರೆ. ಹೆಚ್ಚಾಗಿ ಇದಕ್ಕೆ ಕಾರಣ ದೈಹಿಕ ವ್ಯಾಯಾಮದ ಕೊರತೆ ಎಂದು ಹೇಳುತ್ತಾರೆ. ಈ ಕಾಯಿಲೆಗಳಲ್ಲಿ ಮೊದಲು ಬರುವಂತ ಕಾಯಿಲೆ ಎಂದರೆ ಹೃದಯ ಸಂಬಂಧಿ ಕಾಯಿಲೆಗಳಾದ ಹೈ ಬ್ಲಡ್ ಪ್ರೆಷರ್. ಹೆಚ್ಚಾಗಿ ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ.
ಚೀನಾದ ಸದರ್ನ್ ಮೆಡಿಕಲ್ ವಿಶ್ವವಿದ್ಯಾಲಯದ ಸಂಶೋಧಕ ಶಿಯಾನ್ ಹುಯಿ ಕಿನ್ ನಡೆಸಿರುವ ಅಧ್ಯಯನದಲ್ಲಿ ಹೆಚ್ಚಿನ ಸಮಯದ ವರೆಗೆ ಮೊಬೈಲ್ ಅನ್ನು ಕಿವಿಗೆ ಇಟ್ಟುಕೊಂಡು ಮಾತನಾಡುವುದು ಕೂಡ ಒಂದು ಕಾರಣ ಎಂದಿದ್ದಾರೆ. ಮೊಬೈಲ್ ಇಂದ ಬರುವ ಫ್ರೀಕ್ವೆನ್ಸಿ ತರಂಗಾಂತರಗಳು ದೇಹದಲ್ಲಿ ಆಗುವ ಪರಿಚಲನೆಯ ಮೇಲೆ ಪರಿಣಾಮ ಬೀರುತ್ತೆ.
ಕನಸಿನಲ್ಲಿ ಗಿಳಿ ಕಂಡರೆ ಶುಭವೋ ಅಥವಾ ಅಶುಭವೋ ?
ವಾರಕ್ಕೆ ಅರ್ಧ ಗಂಟೆಗಳ ಕಾಲ ಒಂದೇ ಸಮನಾಗಿ ಮೊಬೈಲ್ ಅನ್ನು ಕಿವಿಗೆ ಇಟ್ಟುಕೊಂಡ ವ್ಯಕ್ತಿಗಳಲ್ಲಿ ಶೇಕಡಾ 12 ರಷ್ಟು ಜನರ ಮೇಲೆ ರೇಡಿಯೋ ಫ್ರೀಕ್ವೆನ್ಸಿ ಸೈಡ್ ಎಫೆಕ್ಟ್ಸ್ ಆಗಿರುವುದು ಕಂಡುಬಂದಿದೆ. ಈ ಜನರ ಮೇಲೆ ಅಧ್ಯಯನ ನಡೆಸಿದಾಗ ಇವರಲ್ಲಿ ರಕ್ತದೊತ್ತಡ ಏರು ಪೇರಾಗಿರುವುದು ಕಂಡುಬಂದಿದೆ. ಆದ ಕಾರಣ ಹೆಚ್ಚಿನ ಸಮಯದ ವರೆಗೆ ಮೊಬೈಲ್ ಅನ್ನು ಕಿವಿಯ ಹತ್ತಿರ ಇಟ್ಟುಕೊಂಡು ಮಾತನಾಡುವುದನ್ನು ತಪ್ಪಿಸಿ.
ಈ ರೀತಿಯಾಗಿ ಹೆಚ್ಚಿನ ಮೊಬೈಲ್ ಬಳಕೆಯಿಂದ ಜನರ ದೈಹಿಕ ಹಾಗೂ ಮನಸಿಕೆ ಸ್ಥಿತಿ ಏರುಪೇರಾಗುತ್ತೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ. ಆದ ಕಾರಣ ಅನಗತ್ಯ ಮೊಬೈಲ್ ನಲ್ಲಿ ಸಂಭಾಷಣೆಯನ್ನು ಮಾಡಬೇಡಿ. ಈ ವಿಷಯವನ್ನು ತಪ್ಪದೆ ಎಲ್ಲರಿಗೂ ಶೇರ್ ಮಾಡಿ.
What’s App ಬಳಕೆದಾರರೆ ಎಚ್ಚರ ಒಂದು ಕಾಲ್ ನಿಂದ ನಿಮ್ಮ ಬ್ಯಾಂಕ್ ನಲ್ಲಿರುವ ಹಣವೆಲ್ಲ ಖಾಲಿ ಆಗುತ್ತೆ
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.