ನಿಮಗೆ ಹೆಣ್ಣು ಮಕ್ಕಳಿದ್ದರೆ ತಪ್ಪದೆ ಈ ಸುದ್ದಿಯನ್ನು ವಿವರವಾಗಿ ಓದಿ. ಮೋದಿ ಸರ್ಕಾರವು ಹೆಣ್ಣು ಮಕ್ಕಳಿಗಾಗಿ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಯನ್ನು ಪ್ರಾರಂಭ ಮಾಡಲಾಗಿದೆ. ನಿಮ್ಮ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ಅವಳ ಮದುವೆಗೆ ಬ್ಯಾಂಕ್ ನಿಂದ 15 ಲಕ್ಷ ರೂಪಾಯಿ ಕೊಡಲಾಗುತ್ತೆ. ಸುಕನ್ಯಾ ಸಮೃದ್ಧಿ ಯೋಜನೆ ಬಗ್ಗೆ ಮಾಹಿತಿ ತಿಳಿಯಿರಿ.
ಈ ರೀತಿಯಾಗಿ ನೀವು ಹಣವನ್ನು ಹೂಡಿಕೆ ಮಾಡಿದರೆ ನಿಮಗೆ ಭವಿಷ್ಯದಲ್ಲಿ ಯಾವುದೇ ರೀತಿಯ ಹಣದ ಸಮಸ್ಯೆ ಬರುವುದಿಲ್ಲ. ಸ್ಟೇಟ್ ಬ್ಯಾಂಕ್ ಒಫ್ ಇಂಡಿಯಾ [State Bank Of India] ಸೇರಿದಂತೆ ಇನ್ನು ಹಲವು ಬೇರೆ ಬೇರೆ ಬ್ಯಾಂಕ್ ಗಳು ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡಲು ಸೌಲಭ್ಯವನ್ನು ನೀಡುತ್ತಿವೆ.
ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಯಲ್ಲಿ ನೀವು ವಾರ್ಷಿಕವಾಗಿ 250 ರೂಪಾಯಿಯನ್ನು ಮಾತ್ರ ಹೂಡಿಕೆ ಮಾಡಬೇಕು. ಈ ಖಾತೆಯಲ್ಲಿ ವಾರ್ಷಿಕ ಗರಿಷ್ಠ ಮೊತ್ತವೆಂದರೆ 1.5 ಲಕ್ಷ ರೂಪಾಯಿಯನ್ನು ಸಹ ಹೂಡಿಕೆ ಮಾಡಬಹುದು. ಒಂದು ವೇಳೆ ನಿಮ್ಮ ಬಳಿ 1.5 ಲಕ್ಷ ರೂಪಾಯಿ ಹಣ ಹೂಡಿಕೆ ಮಾಡಲು ಇಲ್ಲದಿದ್ದರೆ ನೀವು 250 ರೂಪಾಯಿಯ ಠೇವಣಿ ಮಾಡುವ ಮೂಲಕ ಖಾತೆಯನ್ನು ಮುಂದುವರಿಸಬಹುದು.
ಈ ವಿಷಯದ ಬಗ್ಗೆ S B I ಟ್ವೀಟ್ ಮಾಡುವ ಮೂಲಕ ಮಾಹಿತಿಯನ್ನು ಹಂಚಿಕೊಂಡಿದೆ. ಕೇಂದ್ರ ಸರ್ಕಾರ ನಡೆಸುತ್ತಿರುವ ಸುಕನ್ಯಾ ಸಮೃದ್ಧಿ ಯೋಜನೆಗೆ ಶೇಕಡ 7.6ರ ದರದಲ್ಲಿ ಬಡ್ಡಿಯನ್ನು ಪಡೆಯಲಾಗುತ್ತಿದೆ. ಹಾಗೆಯೆ ನೀವು ಈ ಯೋಜನೆಯಲ್ಲಿ ಇಬ್ಬರು ಹೆಣ್ಣು ಮಕ್ಕಳ ಖಾತೆಯನ್ನು ಸಹ ತೆರೆಯಬಹುದು. ಮೊದಲ ಹೆಣ್ಣು ಮಗು ಹುಟ್ಟಿದ ನಂತರ ಇಬ್ಬರು ಅವಳಿ ಹೆಣ್ಣು ಮಕ್ಕಳು ಹುಟ್ಟಿದರೆ ಸುಕನ್ಯಾ ಸಮೃದ್ಧಿ ಯೋಜನೆಯ ಲಾಭವನ್ನು ಮೂರು ಹೆಣ್ಣು ಮಕ್ಕಳು ಪಡೆಯಬಹುದಾಗಿದೆ.
ಇವುಗಳನ್ನೂ ಓದಿ;
ಆಧಾರ್ ಕಾರ್ಡ್ ಹೊಂದಿದ್ದರೆ 2 ಲಕ್ಷ ರೂಪಾಯಿ ಕೇಂದ್ರ ಸರ್ಕಾರದಿಂದ ಸಿಗುತ್ತೆ
Yashaswini Yojana: ಸರ್ಕಾರದಿಂದ ಗುಡ್ ನ್ಯೂಸ್
ಭಾರತದಲ್ಲಿ ಮೊಬೈಲ್ ಹಾಗೂ ಎಲೆಕ್ಟ್ರಿಕ್ ವಾಹನಗಳು ಅಗ್ಗವಾಗಬಹುದು
ವ್ಯಾಲಂಟೈನ್ಸ್ ಡೇ ದಿನ ಗೋವುಗಳನ್ನು ಅಪ್ಪಿಕೊಳ್ಳುವ ದಿನವನ್ನಾಗಿ ಆಚರಿಸಿ
ಅಭಿಷೇಕ್ ಅವರು ಮಾಧ್ಯಮ ಕ್ಷೇತ್ರದಲ್ಲಿ ನಾಲ್ಕು ವರ್ಷದ ಅನುಭವ ಹೊಂದಿರುವ ಅನುಭವಸಂಪನ್ನ ಪತ್ರಕರ್ತ. ತಾಜಾ ಸುದ್ದಿ ಸಂಗ್ರಹಣೆ, ವರದಿಗಾರಿಕೆ, ಸಂದರ್ಶನ ಮತ್ತು ವಿವಿಧ ಪ್ರಸ್ತುತ ವಿಷಯಗಳ ವಿಶ್ಲೇಷಣೆಯಲ್ಲಿ ಅವರು ಪರಿಣತಿ ಹೊಂದಿದ್ದಾರೆ. ಓದುಗರಿಗೆ ಆಕರ್ಷಕ ಮತ್ತು ಮಾಹಿತಿಪೂರ್ಣ ವಿಷಯವನ್ನು ತಲುಪಿಸುವುದು ಅವರ ಬರವಣಿಗೆಯ ಮುಖ್ಯ ಲಕ್ಷಣ.
