
ಇಂದಿನ ದಿನಗಳಲ್ಲಿ ಹೆಚ್ಚಿನ ಜನರ ಜೀವನಶೈಲಿ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಹಾಗೆ ಭಾರತದಲ್ಲಂತೂ ಮೊದಲಿನಿಂದಲೂ ಆಹಾರವನ್ನು ಸೇವಿಸುವಾಗ ಎಲ್ಲರೂ ಕೈಯಿಂದ ಆಹಾರವನ್ನು ಸೇವಿಸುತ್ತಿದ್ದರು. ಆದರೆ ಈಗಂತೂ ಹೆಚ್ಚಿನ ಜನರು ತಿಂಡಿ ತಿನ್ನುವಾಗ, ಊಟ ಮಾಡುವಾಗ ಚಮಚದಲ್ಲಿ ಆಹಾರವನ್ನು ಸೇವಿಸುತ್ತಾರೆ. ಹಾಗಾದರೆ ಚಮಚದಲ್ಲಿ ಆಹಾರ ಸೇವಿಸುವುದು ಒಳ್ಳೆಯದಾ? ಅಥವಾ ಕೈಯಿಂದ ಆಹಾರ ಸೇವಿಸಿದರೆ ಒಳ್ಳೆಯದಾ? ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ಓದಿ.
- ಬದಲಾಗುತ್ತಿರುವ ದಿನದಲ್ಲಿ ಜನರ ಜೀವನಶೈಲಿಯು ಬದಲಾಗುತ್ತಿದೆ
- ಹೆಚ್ಚಿನ ಜನರು ಚಮಚದಲ್ಲಿ ಆಹಾರವನ್ನು ಸೇವಿಸುತ್ತಾರೆ
- ಚಮಚದಲ್ಲಿ ಆಹಾರ ಸೇವನೆ ಮಾಡಿದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
ಭಾರತ ಮಾತ್ರವಲ್ಲದೆ ನೇಪಾಳ, ಮಲೇಷ್ಯಾ, ಶ್ರೀಲಂಕಾ, ಇಂಡೋನೇಷ್ಯಾ, ಪಾಕಿಸ್ತಾನ ದೇಶಗಳಲ್ಲಿ ಕೂಡ ಹೆಚ್ಚಿನ ಜನರು ಆಹಾರವನ್ನು ತಮ್ಮ ಕೈಗಳಿಂದ ಸೇವನೆ ಮಾಡುತ್ತಾರೆ. ಹಲವಾರು ಹೇಳುವ ಪ್ರಕಾರ ಕೈಯಿಂದ ಆಹಾರವನ್ನು ಸೇವಿಸದಿದ್ದರೆ ಆಹಾರದ ರುಚಿ ತಿಳಿಯುವುದಿಲ್ಲ ಎಂದು ಹೇಳುತ್ತಾರೆ.
ಚಮಚದಲ್ಲಿ ಆಹಾರವನ್ನು ಸೇವಿಸುವ ಜನರ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಹದಗೆಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗೆಯೆಅಂತವರಲ್ಲಿ ಟೈಪ್ 2 ಮಧುಮೇಹದ ಅಪಾಯವು ಹೆಚ್ಚಾಗುತ್ತೆ ಎಂದು ತಜ್ಞರು ಹೇಳುತ್ತಾರೆ.
ನೀವು ಕೈಯಿಂದ ಆಹಾರವನ್ನು ಸೇವಿಸುತ್ತೀರಾ? ಇದರಿಂದ ಯಾವೆಲ್ಲ ಲಾಭವಿದೆ ನೋಡಿ
ನಾವು ಕೈಯಿಂದ ಆಹಾರವನ್ನು ಸೇವಿಸುವುದರಿಂದ ನಮ್ಮ ಪರಂಪರೆ ಹಾಗೂ ಸಂಸ್ಕೃತಿಯೊಂದಿಗೆ ಸಂಪರ್ಕವನ್ನು ಹೊಂದುತ್ತೇವೆ ಎಂದು ತಜ್ಞರು ಹೇಳುತ್ತಾರೆ. ಹಾಗೆಯೆ ಕೈಯಿಂದ ಆಹಾರವನ್ನು ಸೇವಿಸುವುದರಿಂದ ಸ್ನಾಯುಗಳಿಗೆ ವ್ಯಾಯಾಮ ಆಗುತ್ತೆ ಎಂದು ಹೇಳಿದ್ದಾರೆ. ಹಾಗೆಯೆ ರಕ್ತ ಪರಿಚಲನೆ ಕೂಡ ಸರಿಯಾಗಿ ಆಗುತ್ತೆ ಎಂದು ತಿಳಿದು ಬಂದಿದೆ.
ಬೇಸಿಗೆಯಲ್ಲಿ ಖಾರವಾದ ಆಹಾರ ಸೇವಿಸುವುದರಿಂದ ಏನೆಲ್ಲಾ ಲಾಭವಿದೆ ನೋಡಿ
ಭಾರತೀಯ ಸಂಪ್ರದಾಯ ಹಾಗೂ ಆಯುರ್ವೇದದ ಪ್ರಕಾರ ನಮ್ಮ ಕೈಯಲ್ಲಿರುವ ಐದು ಬೆರಳುಗಳು ಐದು ಅಂಶಗಳನ್ನು ಸೂಚಿಸುತ್ತದೆ. ಅದರಲ್ಲಿ ಹೆಬ್ಬೆರಳು ಅಗ್ನಿ, ತೋರುಬೆರಳು ಗಾಳಿ, ಮಧ್ಯದ ಬೆರಳು ಆಕಾಶ, ಉಂಗುರದ ಬೆರಳು ಭೂಮಿ ಹಾಗೂ ಕಿರು ಬೆರಳು ನೀರನ್ನು ಪ್ರತಿನಿಧಿಸುತ್ತೆ. ನಾವು ಕೈಯಿಂದ ಆಹಾರವನ್ನು ಸೇವನೆ ಮಾಡುವುದರಿಂದ ನಾವು ನಿಯಂತ್ರಿತ ಪ್ರಮಾಣದಲ್ಲಿ ಆಹಾರವನ್ನು ಸೇವಿಸುತ್ತೇವೆ. ಹೀಗೆ ಮಾಡುವುದರಿಂದ ಅತಿಯಾದ ಆಹಾರವನ್ನು ಸೇವಿಸುವುದರಿಂದ ನಮ್ಮನ್ನು ತಪ್ಪಿಸುತ್ತೆ.