ಮಂಡಿನೋವು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ಕಾಡುತ್ತಿದೆ. ತಪ್ಪಾದ ಜೀವನಶೈಲಿಯಿಂದ ಹಾಗೂ ಆಹಾರ ಪದ್ದತಿಯಿಂದ ಮಂಡಿನೋವು ಕಾಣಿಸಿಕೊಳ್ಳುತ್ತಿದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಮಂಡಿನೋವು ಜಾಸ್ತಿ ಆಗಿ ಕಾಣಿಸಿಕೊಳ್ಳುತ್ತೆ. ಈ ಸಮಯದಲ್ಲಿ ಮಂಡಿನೋವಿನಿಂದ ಮುಕ್ತಿ ಪಡೆಯಲು ಈ ಆಹಾರವನ್ನು ಸೇವನೆ ಮಾಡಿ.
ಕೀಲು ನೋವಿಗೆ ಈ ಆಹಾರಗಳನ್ನು ಸೇವನೆ ಮಾಡಿ
- ಆಲಿವ್ ಆಯಿಲ್
- ಸೋಯಾಬೀನ್
- ಬೆಳ್ಳುಳ್ಳಿ
- ಶುಂಠಿ
ಆಲಿವ್ ಆಯಿಲ್: ಆಲಿವ್ ಆಯಿಲ್ ನಲ್ಲಿ ಅಧಿಕ ಪೋಷಕಾಂಶಗಳನ್ನು ಹೊಂದಿದೆ. ಇದು ನಿಮ್ಮ ಉರಿಯೂತವನ್ನು ಹಾಗು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತೆ. ಕೀಲು ನೋವಿನಿಂದ ಪರಿಹಾರ ಪಡೆಯಲು ಆಲಿವ್ ಆಯಿಲ್ ನಿಮಗೆ ಸಹಾಯ ಮಾಡುತ್ತೆ. ಹಾಗೆಯೆ ನೀವು ಇದರಿಂದ ಮಸಾಜ್ ಕೂಡ ಮಾಡಬಹುದು.
ಸೋಯಾಬೀನ್: ಇದರಲ್ಲಿ ಕೂಡ ಅತ್ಯಧಿಕ ಪೋಷಕಾಂಶಗಳು ಇದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಒಮೇಗಾ 3 ಅಂಶ ಇದೆ. ಇದು ನಿಮ್ಮ ಮಂದಿ ನೋವನ್ನು ನಿವಾರಣೆ ಮಾಡುವಲ್ಲಿ ಸಹಾಯ ಮಾಡುತ್ತೆ.
ಬೆಳ್ಳುಳ್ಳಿ: ಬೆಳ್ಳುಳ್ಳಿಯಲ್ಲಿ ಅಧಿಕ ಪ್ರಮಾಣದ ಕ್ಯಾಲ್ಸಿಯಂ ಅಂಶ ಇದೆ. ಪ್ರತಿದಿನ ನೀವು ಸೇವನೆ ಮಾಡುವ ಆಹಾರದಲ್ಲಿ ಬೆಳ್ಳುಳ್ಳಿಯನ್ನು ಸೇವಿಸುವುದು ಉತ್ತಮ. ಇದರಲ್ಲಿ ಉರಿಯೂತ ಹಾಗೂ ಊತದ ಸಮಸ್ಯೆಯನ್ನು ನಿವಾರಿಸುವ ಶಕ್ತಿ ಹೊಂದಿದೆ.
ಶುಂಠಿ: ದುರ್ಬಲ ಮೂಳೆ ಸಮಸ್ಯೆ ಇರುವವರು ಹಾಗೆಯೆ ಕೀಲು ನೋವು ಇರುವವರಿಗೆ ಶುಂಠಿ ದಿವ್ಯ ಔಷಧಿಯಾಗಿದೆ. ಹಾಗಾಗಿ ನೀವು ಇದನ್ನು ಸೇವನೆ ಮಾಡಬಹುದು.
ಕ್ಯಾನ್ಸರ್ ಹಾಗೂ ಬಂಜೆತನಕ್ಕೆ ಕಾರಣವಾಗುತ್ತೆ ಭಾರತದಲ್ಲಿ ಮಾರಾಟವಾಗುವ ಸ್ಯಾನಿಟರಿ ಪ್ಯಾಡ್
ಊಟ ಮಾಡಿದ ತಕ್ಷಣ ಮಲಗಿದರೆ ಏನೆಲ್ಲಾ ತೊಂದರೆ ಆಗುತ್ತೆ ನೋಡಿ
ಅಭಿಷೇಕ್ ಅವರು ಮಾಧ್ಯಮ ಕ್ಷೇತ್ರದಲ್ಲಿ ನಾಲ್ಕು ವರ್ಷದ ಅನುಭವ ಹೊಂದಿರುವ ಅನುಭವಸಂಪನ್ನ ಪತ್ರಕರ್ತ. ತಾಜಾ ಸುದ್ದಿ ಸಂಗ್ರಹಣೆ, ವರದಿಗಾರಿಕೆ, ಸಂದರ್ಶನ ಮತ್ತು ವಿವಿಧ ಪ್ರಸ್ತುತ ವಿಷಯಗಳ ವಿಶ್ಲೇಷಣೆಯಲ್ಲಿ ಅವರು ಪರಿಣತಿ ಹೊಂದಿದ್ದಾರೆ. ಓದುಗರಿಗೆ ಆಕರ್ಷಕ ಮತ್ತು ಮಾಹಿತಿಪೂರ್ಣ ವಿಷಯವನ್ನು ತಲುಪಿಸುವುದು ಅವರ ಬರವಣಿಗೆಯ ಮುಖ್ಯ ಲಕ್ಷಣ.
