
ಈಗ ಹೆಚ್ಚಿನ ಯುವಕರು ಹಾಗೆಯೆ ಮಕ್ಕಳು ಕೂಡ ವಿಡಿಯೋ ಗೇಮ್ಸ್ ಆಡುತ್ತಾರೆ. ಅತಿ ಹೆಚ್ಚು ಗೇಮ್ಸ್ ಅಫ್ಯೂವುದರಿಂದ ಏನಾಗುತ್ತೆ ಅಂತ ತಿಳಿಯಿರಿ. ಹೊಸ ಅಧ್ಯಯನದಲ್ಲಿ ತಿಳಿದು ಬಂಡ ಮಾಹಿತಿಯ ಪ್ರಕಾರ ಮಕ್ಕಳು ವಿಡಿಯೋ ಗೇಮ್ಸ್ ಆಡುವಾಗ ಮಕ್ಕಳ ಎದೆ ಬಡಿತದಲ್ಲಿ ಏರುಪೇರಾಗಬಹುದು ಹಾಗೆಯೆ ಮಕ್ಕಳು ಪ್ರಜ್ಞೆ ತಪ್ಪುವ ಸಂಭವ ಕೂಡ ಜಾಸ್ತಿ ಇರುತ್ತೆ.
ಮೂಗು ಕಟ್ಟಿದ್ದರೆ ಈ ಮನೆಮದ್ದನ್ನು ಬಳಸಿ
ಹಾರ್ಟ್ ರಿದಮ್ ಸೊಸೈಟಿ ಪ್ರಕಟಿಸಿರುವ ಅಧ್ಯಯನದ ಪ್ರಕಾರ ವಿಡಿಯೋ ಗೇಮ್ಸ್ ಆಡುವ ಮಕ್ಕಳಲ್ಲಿ ಕಾರ್ಡಿಯಾಕ್ ಆರ್ಹೆತ್ಮಿಯಾ ಹೆಚ್ಚಾಗುವ ಸಾಧ್ಯತೆ ಇರುತ್ತೆ. ಮಕ್ಕಳು ವಿಡಿಯೋ ಗೇಮ್ಸ್ ಆಡುವ ಸಮಯದಲ್ಲಿ ಪ್ರಜ್ಞೆ ತಪ್ಪುವುದು ಅಪ್ರೂಪದ ಸಂಗತಿ.
ವಿಡಿಯೋ ಗೇಮ್ಸ್ ಆಡುವ ಕೆಲವು ಮಕ್ಕಳಲ್ಲಿ ಏರುಪೇರಾದ ಎದೆಬಡಿತಕ್ಕೆ ಕಾರಣವಾಗುತ್ತೆ. ಇದು ದೊಡ್ಡ ಗಂಭೀರ ಸಮಸ್ಯೆ ಕೂಡ ಆಗಿದೆ. ಈ ವಿಷಯವನ್ನು ಸರಿಯಾದ ಸಮಯದಲ್ಲಿ ಗುರುತಿಸದೆ ಹೋದಲ್ಲಿ ಪ್ರಾಣಕ್ಕೆ ಕೂಡ ಅಪಾಯ ಆಗುವೆ ಸಾಧ್ಯತೆ ಹೆಚ್ಚಿರುತ್ತೆ. ಮಕ್ಕಳು ಒಂದು ವೇಳೆ ಗೇಮ್ಸ್ ಆಡುವಾಗ ಪ್ರಜ್ಞೆ ತಪ್ಪಿದರೆ ಅವರನ್ನ ಹೃದಯ ತಜ್ಞರಿಗೆ ತೋರಿಸಬೇಕು. ಇದು ಗಂಭೀರ ಹೃದಯ ಸಂಬಂದಿ ಕಾಯಿಲೆಯ ಚಿನ್ಹೆಯಾಗಿರಬಹುದು ಎಂದು ಹೇಳಲಾಗಿದೆ.
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.