ಮಕ್ಕಳ ಮೂಳೆಗಳು ಚಿಕ್ಕ ವಯಸ್ಸಿನಿಂದ ಬಲಿಷ್ಠವಾಗಿರಬೇಕು. ಜೀವನದುದ್ದಕ್ಕೂ ಉತ್ತಮ ಮೂಳೆಯ ಅರೋಗ್ಯ ಅತ್ಯಂತ ಮುಖ್ಯವಾಗಿರುತ್ತೆ. ಮಗುವಿನ ಮೂಳೆ ಗಟ್ಟಿಯಾಗಿರಬೇಕೆಂದರೆ ಸರಿಯಾದ ಪೋಷಕಾಂಶಗಳ ಅವಶ್ಯಕತೆ ಇರುತ್ತೆ. ಹಾಗಾಗಿ ಇವುಗಳನ್ನು ನಿಮ್ಮ ಮಕ್ಕಳಿಗೆ ನೀಡಿದರೆ ಉತ್ತಮ.
ವಿಟಮಿನ್ ಡಿ: ಇದು ಮೂಲೆಗೆ ಅತಿ ಅವಶ್ಯಕ. ಇದು ಕ್ಯಾಲ್ಸಿಯಂ ಅನ್ನು ಮೂಳೆಗಳಿಗೆ ಹಿರಿಕೊಳ್ಳಲು ಸಹಕಾರಿಯಾಗಿದೆ. ಪ್ರತಿದಿನ ಸೂರ್ಯನ ಬೆಳಕಿನಲ್ಲಿ ನಿಮ್ಮ ಮಕ್ಕಳನ್ನು ಕುಳಿಸುವುದರಿಂದ ಅಥವಾ ಆಡಲು ಬಿಡುವುದರಿಂದ ವಿಟಮಿನ್ ಡಿ ಅಧಿಕ ಪ್ರಮಾಣದಲ್ಲಿ ಸಿಗುತ್ತೆ.
ವಿಕಮಿನ್ ಕೆ: ಇದು ಮೂಳೆಗಳ ಸಾಂದ್ರತೆಯನ್ನು ಸುಧಾರಿಸಲು ಕ್ಯಾಲ್ಸಿಯಂ ಜೊತೆಗೆ ಕಾರ್ಯನಿರ್ವಹಿಸುತ್ತೆ. ತರಕಾರಿಗಳು, ಮೊಟ್ಟೆ, ಮೀನು, ಹಾಗೂ ಮಾಂಸದಲ್ಲಿ ವಿಟಮಿನ್ ಕೆ ಅಂಶ ಇರುತ್ತೆ.
Buy Resistance band for workouts
ದೈಹಿಕ ಚಟುವಟಿಕೆಗಳು: ವ್ಯಾಯಾಮ ಅಥವಾ ಆಟ ಮಕ್ಕಳ ಆರೋಗ್ಯಕ್ಕೆ ಬಹಳ ಅವಶ್ಯಕ.ಮೂಳೆಗಳನ್ನು ಬಲಪಡಿಸಲು ಹಾಗೂ ಸ್ನಾಯುಗಳನ್ನು ನಿರ್ಮಿಸಲು ಇದು ಸಹಾಯ ಮಾಡುತ್ತೆ. ಪ್ರತಿದಿನ ಫುಟ್ ಬಾಲ್, ಕ್ರಿಕೆಟ್ ಹಾಗೂ ಇತರೆ ಆಟ ಆಡುವುದು ಉತ್ತಮ.
ಮೆಗ್ನೇಸಿಯಂ: ಬಲವಾದ ಮೂಳೆಗಳನ್ನು ನಿರ್ಮಿಸಲು ಮೆಗ್ನೇಸಿಯಂ ಕ್ಯಾಲ್ಸಿಯಂ ಜೊತೆಗೆ ಕಾರ್ಯನಿರ್ವಹಿಸುತ್ತೆ. ಇದು ಮೂಳೆಗಳ ರಚನೆಯನ್ನು ಸಂರಕ್ಷಿಸಲು ಸಹಾಯ ಮಾಡುತ್ತೆ.
Disclaimer: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ROCK TV Kannada ಅದನ್ನು ಖಚಿತಪಡಿಸುವುದಿಲ್ಲ.
ಇವುಗಳನ್ನೂ ಓದಿ:
ಕಿತ್ತಳೆ ಹಣ್ಣನ್ನು ಸೇವನೆ ಮಾಡಿ ಈ ಆರೋಗ್ಯ ಲಾಭವನ್ನು ಪಡೆಯಿರಿ
ಹಸುವಿನ ಹಾಲು ಕುಡಿಯುವುದು ಉತ್ತಮವೊ ಅಥವಾ ಎಮ್ಮೆ ಹಾಲು?
ಈ ಕಾಯಿಲೆ ಬರುವ ಮುನ್ನ ಮೌತ್ ವಾಶ್ ಬಳಸುವುದನ್ನು ನಿಲ್ಲಿಸಿ
ಬಿಸಿನೀರು ಸೇವನೆಯಿಂದ ಈ ಸಮಸ್ಯೆ ಬರಬಹುದು ಎಚ್ಚರ
ಅಭಿಷೇಕ್ ಅವರು ಮಾಧ್ಯಮ ಕ್ಷೇತ್ರದಲ್ಲಿ ನಾಲ್ಕು ವರ್ಷದ ಅನುಭವ ಹೊಂದಿರುವ ಅನುಭವಸಂಪನ್ನ ಪತ್ರಕರ್ತ. ತಾಜಾ ಸುದ್ದಿ ಸಂಗ್ರಹಣೆ, ವರದಿಗಾರಿಕೆ, ಸಂದರ್ಶನ ಮತ್ತು ವಿವಿಧ ಪ್ರಸ್ತುತ ವಿಷಯಗಳ ವಿಶ್ಲೇಷಣೆಯಲ್ಲಿ ಅವರು ಪರಿಣತಿ ಹೊಂದಿದ್ದಾರೆ. ಓದುಗರಿಗೆ ಆಕರ್ಷಕ ಮತ್ತು ಮಾಹಿತಿಪೂರ್ಣ ವಿಷಯವನ್ನು ತಲುಪಿಸುವುದು ಅವರ ಬರವಣಿಗೆಯ ಮುಖ್ಯ ಲಕ್ಷಣ.
