
ಬೊಜ್ಜು ಇತ್ತೀಚಿನ ದಿನಗಳಲ್ಲಿ ಹಲವು ಜನರಲ್ಲಿ ಕಾಣಿಸಿಕೊಳ್ಳುತ್ತಿದೆ.ಇದು ನಾವು ಸೇವಿಸುವ ಆಹಾರದ ಪರಿಣಾಮವು ಆಗಿರಬಹುದು. ಬೊಜ್ಜು ಇದ್ದರೆ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ನಾವು ಎದುರಿಸಬೇಕಾಗುತ್ತೆ. ಹಾಗಾಗಿ ಬೊಜ್ಜನ್ನು ಕರಗಿಸುವುದು ಅತಿ ಅವಶ್ಯಕ.
- ಜೀರಿಗೆ ನೀರನ್ನು ಬೊಜ್ಜು ಇರುವವರು ಕುಡಿಯಬಹುದು
- ಬೊಜ್ಜು ಕರಗಿಸಲು ಆಹಾರ
- ದಿನಕ್ಕೆ ಎರಡು ಗ್ಲಾಸ್ ಗ್ರೀನ್ ಟೀ
ಬೊಜ್ಜನ್ನು ಕರಗಿಸಲು ವ್ಯಾಯಾಮ ಅಥವಾ ಯೋಗ ಮಾಡುವುದು ಕೂಡ ಉತ್ತಮ. ಆದರೆ ಹಲವರಿಗೆ ವ್ಯಾಯಾಮ ಮಾಡಲು ಆಗುವುದಿಲ್ಲ. ಹಾಗಾಗಿ ಅವರು ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿದರೆ ಬೊಜ್ಜು ಕರಗಿಸಬಹುದು.
ಪ್ರತಿದಿನ ಎರಡು ಗ್ಲಾಸ್ ಗ್ರೀನ್ ಟೀ ಕುಡಿಯಿರಿ: ನೀವು ಹಾಲು ಬೆರೆಸದೆ ಗ್ರೀನ್ ಟೀ ಕುಡಿಯುವವುದರಿಂದ ನಿಮ್ಮ ದೇಹದ ತೂಕ ಇಳಿಸಲು ಸಹಾಯಕಾರಿಯಾಗಿದೆ. ಹಾಗೆಯೆ ಇದು ನಿಮ್ಮ ಬೊಜ್ಜನ್ನು ಕೂಡ ಕರಗಿಸಲು ಸಹಾಯ ಮಾಡುತ್ತೆ.
ಖಾಲಿ ಹೊಟ್ಟೆಯಲ್ಲಿ ಲಿಂಬೆ ನೀರು: ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರಿಗೆ ನಿಂಬೆ ರಸವನ್ನು ಪ್ರತಿದಿನ ಖಾಲಿ ಹೊಯ್ಟ್ಟೆಯಲ್ಲಿ ಕುಡಿಯುವುದರಿಂದ ಬೊಜ್ಜು ಕರಗಿಸಲು ಸಹಾಯ ಮಾಡುತ್ತೆ.
ಸಿಹಿ ಕಡಿಮೆ ಸೇವನೆ ಮಾಡಬೇಕು: ನೀವೇನಾದರೂ ಜಾಸ್ತಿ ಸ್ವೀಟ್ ಪ್ರಿಯರಾಗಿದ್ದರೇ ಅದನ್ನು ನಿಲ್ಲಿಸಿ. ನೀವು ಸ್ವೀಟ್ ಸ್ವಲ್ಪ ಕಡಿಮೆ ತಿನ್ನಬೇಕು ಹಾಗೆಯೆ ಬೇಕರಿ ಪಧಾರ್ಥಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕು.
ಜೀರಿಗೆ ನೀರು ಕುಡಿಯಬೇಕು: ಪ್ರತಿದಿನ ಒಂದೆರಡು ಚಮಚ ಜೀರಿಗೆಯನ್ನು ನೀರಿನಲ್ಲಿ ಸ್ವಲ್ಪ ಕುದಿಸಿ ಕುಡಿಯುವುದರಿಂದ ನಿಮ್ಮ ಕಿಬ್ಬೊಟ್ಟೆಯ ಸುತ್ತ ಶೇಖರಣೆಯಾಗಿರುವ ಬೊಜ್ಜು ಕಡಿಮೆ ಆಗುತ್ತೆ.
Disclaimer: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ROCK TV Kannada ಅದನ್ನು ಖಚಿತಪಡಿಸುವುದಿಲ್ಲ.
ಬೆಳಿಗ್ಗೆ ಕಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿದರೆ ಏನೆಲ್ಲಾ ಆಗುತ್ತೆ ನೋಡಿ
ನೀವು ಸಂಜೆಯ ಸಮಯದಲ್ಲಿ ಚಹಾ ಕುಡಿಯುತ್ತೀರಾ? ಇದು ಎಷ್ಟು ಹಾನಿಕರ ಗೊತ್ತಾ?
ಪಪ್ಪಾಯಿ ಹಣ್ಣಿಗಿಂತ ಪಪ್ಪಾಯಿ ಕಾಯಿ ತಿಂದರೆ ಏನೆಲ್ಲಾ ಲಾಭವಿದೆ ನೋಡಿ
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.