ಹೆಚ್ಚಿನ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಬಗ್ಗೆ ನಿರೀಕ್ಷೆಯಲ್ಲಿದ್ದರು. ಈಗ ಅಂತವರಿಗೆ ಒಂದು ಗುಡ್ ನ್ಯೂಸ್ ಇದೆ. ಗೃಹಲಕ್ಷ್ಮಿ ಯೋಜನೆಯ ಮಾರ್ಗಸೂಚಿಗಳು ಬಿಡುಗಡೆಯಾದ ನಂತರ ಅರ್ಜಿ ನಮೂನೆಯನ್ನು ಸಹ ಬಿಡುಗಡೆ ಮಾಡಲಾಗಿದೆ. ಕರ್ನಾಟಕ ರಾಜ್ಯ ಕುಟುಂಬ ಕಲ್ಯಾಣ ಇಲಾಖೆ ಈ ಅರ್ಜಿ ನಮೂನೆಯನ್ನು ಬಿಡುಗಡೆ ಮಾಡಿದೆ. ಈ ಅರ್ಜಿಯನ್ನು ತುಂಬಲು ಏನೆಲ್ಲಾ ಮಾಹಿತಿಗಳು ಬೇಕು ಅನ್ನೊದನ್ನ ಸಂಪೂರ್ಣವಾಗಿ ಈ ಲೇಖನದಲ್ಲಿ ಓದಿ. ಇನ್ನು ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸ್ ಆಪ್ ಗ್ರೂಪ್ ಜಾಯಿನ್ ಆಗಿ.
ಗೃಹಲಕ್ಷ್ಮಿ ಯೋಜನೆ ಅರ್ಜಿ ತುಂಬುವುದು ಹೇಗೆ
ಈ ನಮೂನೆಯಲ್ಲಿ ಮನೆಯ ಯಜಮಾನಿ ಎಂದು ಘೋಷಿಸುವ ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಇರುವ ಮೊಬೈಲ್ ನಂಬರ್, ಆಧಾರ್ ಕಾರ್ಡ್, ವೋಟರ್ ಐ ಡಿ, ರೇಷನ್ ಕಾರ್ಡ್, ಸೇರಿದಂತೆ ಇನ್ನು ಕೆಲವು ದಾಖಲೆಗಳ ಅಗತ್ಯವಿದೆ. ಈ ಅರ್ಜಿಯನ್ನು ಸಲ್ಲಿಸಲು ಜೂನ್ 15 ರಿಂದ ಅವಕಾಶವಿದೆ. ಹಾಗೂ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕ ಜುಲೈ 15.
ವಿಭಾಗ ಒಂದರಲ್ಲಿ ಒಟ್ಟು ಮೂರು ಪ್ರಶ್ನೆಗಳಿರುತ್ತವೆ. ಇದರಲ್ಲಿ ಮನೆಯ ಯಜಮಾನಿಯನ್ನು ಸ್ವಯಂ ಅರ್ಜಿದಾದರೆ ಘೋಷಿಸಬೇಕಾಗಿದೆ. ನಂತರ ಅಲ್ಲಿ ವಿಳಾಸ, ಮನೆಯ ಯಜಮಾನಿಯ ಹೆಸರನ್ನು ತುಂಬಬೇಕು. ಇದಾದ ನಂತರ ವಿಭಾಗ 1 ರ a, b ಹಾಗೂ c ಎಂಬಲ್ಲಿ ಅರ್ಜಿದಾರರ ಆಧಾರ್ ಕಾರ್ಡ್ ನಂಬರ್, ವೋಟರ್ ಐ ಡಿ ನಂಬರ್, ಹಾಗೂ ರೇಷನ್ ಕಾರ್ಡ್ ನಂಬರ್ ಅನ್ನು ತುಂಬಬೇಕು.
2 ನೇ ವಿಭಾಗದಲ್ಲಿ ಪತಿಯ ಹೆಸರು ಹಾಗೂ ಪತಿಯ ಆಧಾರ್ ಕಾರ್ಡ್ ನಂಬರ್ ಅನ್ನು ನಮೂದಿಸಬೇಕಾಗಿದೆ. ಇದಾದ ನಂತರ ಪತಿಯ ವೋಟರ್ ಐ ಡಿ ನಂಬರ್ ನಮೂದಿಸಬೇಕು. ನಂತರ ಗೃಹಲಕ್ಷ್ಮಿ ಯೋಜನೆಯ ಅರ್ಜಿದಾರರು ತಮ್ಮ ಜಾತಿಯನ್ನು ನಮೂದಿಸಬೇಕು. ಅಂದರೆ ಪರಿಶಿಷ್ಟ ಜಾತಿ, ಪಂಗಡ, ಓ ಬಿ ಸಿ ಹಾಗೂ ಇತರೆ ಎಂದು ನಾಲ್ಕು ಒಪ್ಶನ್ ನೀಡಲಾಗಿದೆ. ಇದರಲ್ಲಿ ಅರ್ಜಿದಾದರೂ ಸೇರಿರುವ ಸಮೂದಾಯಕ್ಕೆ ಮಾರ್ಕ್ ಮಾಡಬೇಕು.
6 ನೇ ವಿಭಾಗದಲ್ಲಿ ಅರ್ಜಿದಾರರ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಇಲ್ಲಿ ಅರ್ಜಿದಾದರಿಗೆ ಎರಡು ಮೊಬೈಲ್ ಸಂಖ್ಯೆಯನ್ನು ನಮೂದಿಸಲು ಅವಕಾಶ ಮಾಡಿಕೊಡಲಾಗಿದೆ.ಒಂದರಲ್ಲಿ ತಾವು ಬಳಸುತ್ತಿರುವ ಮೊಬೈಲ್ ನಂಬರ್ ಹಾಗೂ ಇನ್ನೊಂದರಲ್ಲಿ ಅವರ ಪತಿಯ ಅಥವಾ ಅವರ ಮಕ್ಕಳ ಮೊಬೈಲ್ ನಂಬರ್ ನಮೂದಿಸಬೇಕು.
8 ನೇ ವಿಭಾಗದಲ್ಲಿ ಅರ್ಜಿದಾರರ ಬ್ಯಾಂಕ್ ಖಾತೆಯ ವಿವರ ಹಾಗೂ ಐ ಎಫ್ ಎಸ್ ಸಿ ಕೋಡ್ ನಮೂದಿಸಬೇಕಾಗುತ್ತೆ. ಇದಾದ ನಂತರ ಮನೆಯ ಯಜಮಾನಿ ಯಾವೆಲ್ಲ ದಾಖಲೆಗಳನ್ನು ನೀಡಬೇಕು ಎಂಬ ವಿವರ ಇದೆ. ಹಾಗೆಯೆ ಪತಿಯ ವಿವರಗಳನ್ನು ಸಹ ಕೇಳಲಾಗಿದೆ. ಅಲ್ಲಿ ಕೇಳಿರುವ ದಾಖಲೆಗಳ ಜೆರಾಕ್ಸ್ ಪ್ರತಿಯನ್ನು ತಪ್ಪದೆ ಲಗತ್ತಿಸಬೇಕು.
ಮನೆಯ ಯಜಮಾನಿಯ ಆಧಾರ್ ಕಾರ್ಡ್, ವೋಟರ್ ಕಾರ್ಡ್, ರೇಷನ್ ಕಾರ್ಡ್ ಹಾಗೂ ಇತರೆ ಅಗತ್ಯ ದಾಖಲೆಗಳ ಜೆರಾಕ್ಸ್ ಅವಶ್ಯಕವಾಗಿದೆ. ಹಾಗೆಯೆ ಅವರ ಪತಿಯ ದಾಖಲೆಗಳ ಜೆರಾಕ್ಸ್ ಸಹ ಬೇಕಾಗಿದೆ. ನಂತರ ಅರ್ಜಿಯ ಕೆಲ ಭಾಗದಲ್ಲಿ ಸ್ವಯಂ ಘೋಷಣೆಗೆ ಜಾಗವನ್ನು ನೀಡಲಾಗಿದೆ. ನಾನು, ನನ್ನ ಪತಿಯು ಆದಾಯ ತೆರಿಗೆ ಹಾಗೂ ಜಿಎಸ್ ಟಿ ಪಾವತಿದಾರರಾಗಿರುವುದಿಲ್ಲ ಎಂಬುದನ್ನು ಸ್ವಯಂ ದೃಢೀಕರಣ ಮಾಡಬೇಕಾಗುತ್ತೆ. ಇದು ತುಂಬಾನೇ ಮಹತ್ವದ ವಿಷಯ ಯಾಕೆಂದರೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿಯನ್ನು ಪಡೆಯಲು ಇಲ್ಲಿ ಯಾವುದೇ ತಪ್ಪು ಮಾಹಿತಿಯನ್ನು ನೀಡಿಲ್ಲ ಎಂಬ ಧ್ರಡೀಕರಣವನ್ನು ಇದು ನೀಡುತ್ತದೆ.
ನಂತರ ಅರ್ಜಿ ತುಂಬಿದ ದಿನಾಂಕವನ್ನು ಬರೆಯಬೇಕು ಹಾಗೂ ಸಹಿ ಹಾಕಬೇಕು ಅಥವಾ ಎಡಗೈ ಹೆಬ್ಬೆಟ್ಟಿನ ಗುರುತನ್ನು ಹಾಕಲು ಸ್ಥಳಾವಕಾಶ ಮಾಡಿಕೊಡಲಾಗಿದೆ.
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕ ಜುಲೈ 15
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಆರಂಭ ದಿನಾಂಕ
ಗೃಹಲಕ್ಷ್ಮಿ ಯೋಜನೆಗೆ ಸಲ್ಲಿಸಲು ಜೂನ್ 15 ರಿಂದ ಅವಕಾಶವಿದೆ
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.