
ಬೆಂಗಳೂರಿನಲ್ಲಿ ಇಡ್ಲಿ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಶೀಟ್ ಬಳಸುವುದನ್ನು ಪತ್ತೆ ಹಚ್ಚಿದ ಆಹಾರ ಇಲಾಖೆ, ಇದೀಗ ಟ್ಯಾಟೋ ಮತ್ತು ಕೃತಕ ಬಣ್ಣಗಳ ಬಳಕೆಯತ್ತ ಗಮನ ಹರಿಸಿದೆ. ಟ್ಯಾಟೋಗಳಿಂದ ಎಚ್ಐವಿ ಮತ್ತು ಚರ್ಮದ ಕ್ಯಾನ್ಸರ್ನಂತಹ ರೋಗಗಳು ಹರಡುತ್ತಿವೆ ಎಂಬ ವರದಿಗಳ ಹಿನ್ನೆಲೆಯಲ್ಲಿ, ಸರ್ಕಾರ ಹೊಸ ಕಾನೂನುಗಳನ್ನು ಜಾರಿಗೆ ತರಲು ಮುಂದಾಗಿದೆ. ಇದರ ಜೊತೆಗೆ, ತರಕಾರಿ ಅಂಗಡಿಗಳಲ್ಲಿ ಮಾರಾಟವಾಗುವ ಹಸಿ ಬಟಾಣಿ ಕಾಳುಗಳು ಮತ್ತು ರಸ್ತೆ ಬದಿಗಳಲ್ಲಿ ಮಾರಾಟವಾಗುವ ಕಲ್ಲಂಗಡಿ ಹಣ್ಣುಗಳಲ್ಲಿ ಕೃತಕ ಬಣ್ಣಗಳನ್ನು ಬಳಸಲಾಗಿದೆಯೇ ಎಂಬುದನ್ನು ಪರಿಶೀಲಿಸಲು ಸರ್ಕಾರ ಮುಂದಾಗಿದೆ.
ಬೀದಿ ಬದಿಗಳಲ್ಲಿ, ಅಂಗಡಿಗಳಲ್ಲಿ, ಮಾಲ್ಗಳಲ್ಲಿ ಮಾರಾಟ ಮಾಡುವ ಕಲ್ಲಂಗಡಿ ಹಣ್ಣುಗಳನ್ನು ವಿವಿಧ ಮದ್ಯವರ್ತಿಗಳು ಹೊಲಗಳಿಂದ ಖರೀದಿ ಮಾಡಿ ಮಾರಾಟ ಕೇಂದ್ರಗಳಿಗೆ ತಲುಪಿಸುತ್ತಾರೆ. ಈ ಮದ್ಯವರ್ತಿಗಳಲ್ಲಿ ಕೆಲವರು ಹಣ್ಣುಗಳಿಗೆ ಕೃತಕ ಬಣ್ಣದ ಇಂಜೆಕ್ಷನ್ ನೀಡುತ್ತಾರೆ. ಅದರಿಂದ ಕಲ್ಲಂಗಡಿ ಹಣ್ಣನ್ನು ಕೊಯ್ದಾಗ ಅದು ಅತ್ಯಂತ ಕೆಂಪಾಗಿ, ಆಕರ್ಷಣೀಯವಾಗಿ ಕಾಣುತ್ತದೆ.
ಇನ್ನೂ ಕೆಲವರು ಕೆಂಪು ಬಣ್ಣದ ಜೊತೆಗೆ ರುಚಿಯನ್ನು ತರುವಂಥ ರಾಸಾಯನಿಕಗಳನ್ನು ಇಂಜೆಕ್ಟ್ ಮಾಡಿರುತ್ತಾರೆ. ಹಾಗಾಗಿ, ಕಲ್ಲಂಗಡಿ ಹಣ್ಣನ್ನು ಕೊಳ್ಳುವಾಗ ಅಂಗಡಿಯವರು ನೀಡುವ ಸ್ಯಾಂಪಲ್ ಹಣ್ಣು ಕೆಂಪು ಬಣ್ಣದ್ದಾಗಿರುತ್ತದೆ ಹಾಗೂ ರುಚಿಕರವಾಗಿರುತ್ತದೆ. ಇದಕ್ಕೆ ಗ್ರಾಹಕರು ಮರುಳಾಗಿ ಹಣ್ಣುಗಳನ್ನು ಕೊಳ್ಳುತ್ತಾರೆ.
ಕಲ್ಲಂಗಡಿ ಹಣ್ಣುಗಳಿಗೆ ರಾಸಾಯನಿಕ ಬಣ್ಣಗಳನ್ನು ಇಂಜೆಕ್ಟ್ ಮಾಡಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ, ಆಹಾರ ಇಲಾಖೆಯ ಅಧಿಕಾರಿಗಳು ಕರ್ನಾಟಕದಾದ್ಯಂತ ಕಲ್ಲಂಗಡಿ ಹಣ್ಣಿನ ಮಾದರಿಗಳನ್ನು ಸಂಗ್ರಹಿಸುತ್ತಿದ್ದಾರೆ. ಸಂಗ್ರಹಿಸಿದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದ್ದು, ವರದಿ ಬಂದ ನಂತರ ಹಣ್ಣಿನ ಗುಣಮಟ್ಟದ ಬಗ್ಗೆ ಮಾಹಿತಿ ಲಭ್ಯವಾಗಲಿದೆ.
ಇಂತಹ ಕಲಬೆರಕೆ ಹಣ್ಣುಗಳನ್ನು ಸೇವಿಸುವುದರಿಂದ ಫುಡ್ ಪಾಯ್ಸನಿಂಗ್, ಜೀರ್ಣಕ್ರಿಯೆಯ ತೊಂದರೆ, ಹಸಿವಿನ ಕೊರತೆ, ಸುಸ್ತು, ಬಾಯಾರಿಕೆ ಮತ್ತು ಕಿಡ್ನಿ ಸಮಸ್ಯೆಗಳಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.
ಮಾರುಕಟ್ಟೆಗೆ ಬಂದ ಕೆಮಿಕಲ್ ಕಲ್ಲಂಗಡಿ ಪತ್ತೆ ಹಚ್ಚುವುದು ಹೇಗೆ?
ನೀರಿನಲ್ಲಿ ಪರೀಕ್ಷೆ
*ಕಲ್ಲಂಗಡಿ ಹಣ್ಣಿನ ಸಣ್ಣ ತುಂಡನ್ನು ನೀರಿನಲ್ಲಿ ಹಾಕಿ.
*ನೀರು ಗುಲಾಬಿ ಬಣ್ಣಕ್ಕೆ ತಿರುಗಿದರೆ, ಹಣ್ಣಿನಲ್ಲಿ ಕೃತಕ ಬಣ್ಣ ಸೇರಿಸಲಾಗಿದೆ ಎಂದು ಅರ್ಥ.
ಟಿಶ್ಯೂ ಪೇಪರ್ ಪರೀಕ್ಷೆ
*ಟಿಶ್ಯೂ ಪೇಪರ್ನಿಂದ ಹಣ್ಣಿನ ಒಳಭಾಗವನ್ನು ಒತ್ತಿ ನೋಡಿ.
*ಟಿಶ್ಯೂ ಪೇಪರ್ಗೆ ಕೆಂಪು ಬಣ್ಣ ಅಂಟಿಕೊಂಡರೆ, ಹಣ್ಣು ಕಲಬೆರಕೆಯಾಗಿದೆ ಎಂದರ್ಥ.
ಇತರೆ ವಿಧಾನಗಳು
*ಕಲ್ಲಂಗಡಿ ಹಣ್ಣಿನ ಬಣ್ಣ ಅತಿಯಾಗಿ ಕೆಂಪಾಗಿದ್ದರೆ ಸಂಶಯಪಡಬೇಕು.
*ಕಲ್ಲಂಗಡಿ ಹಣ್ಣಿನ ಬೀಜಗಳು ಬಿಳಿ ಬಣ್ಣದಲ್ಲಿದ್ದರೆ, ಅದು ಕೃತಕವಾಗಿ ಮಾಗಿಸಿದ ಹಣ್ಣು ಎಂದು ತಿಳಿಯಬೇಕು.
*ಕಲ್ಲಂಗಡಿ ಹಣ್ಣಿನ ತಿರುಳು ತುಂಬಾ ಮೃದುವಾಗಿದ್ದರೆ, ಅದು ರಾಸಾಯನಿಕಗಳನ್ನು ಬಳಸಿ ಮಾಗಿಸಿದ ಹಣ್ಣು ಎಂದು ತಿಳಿಯಬೇಕು.
*ಹಣ್ಣಿನ ಮೇಲೆ ಬಿಳಿ ಅಥವಾ ಹಳದಿ ಬಣ್ಣದ ಪುಡಿ ಕಂಡುಬಂದರೆ, ಅದು ಕಾರ್ಬೈಡ್ ರಾಸಾಯನಿಕದ ಸಂಕೇತವಾಗಿದೆ.
*ಕಲ್ಲಂಗಡಿ ಹಣ್ಣಿನ ವಾಸನೆ ತಾಜಾವಾಗಿರಬೇಕು.
*ಹಣ್ಣಿನ ಮೇಲ್ಭಾಗದಲ್ಲಿ ಬಿರುಕುಗಳು ಅಥವಾ ರಂಧ್ರಗಳು ಇರಬಾರದು.
ಕೆಮಿಕಲ್ ಕಲ್ಲಂಗಡಿ ಹಣ್ಣನ್ನು ಸೇವಿಸುವುದರಿಂದ ಏನೆಲ್ಲಾ ಆಗುತ್ತೆ ನೋಡಿ
ಇಲ್ಲಿ ಕ್ಲಿಕ್ ಮಾಡಿ: ಕಲ್ಲಂಗಡಿ ಹಣ್ಣನ್ನು ತಿಂದರೆ ಅಪಾಯ ಫಿಕ್ಸ್! ಎಚ್ಚರ ಗ್ರಾಹಕರೇ!
Sri Rama is a seasoned journalist with four years of experience, specializing in capturing and analyzing the latest news and trending stories. He brings extensive expertise in news collection, reporting, and interviewing across a broad spectrum of topics, including politics.