ಚಳಿಗಾಲದಲ್ಲಿ ಹೆಚ್ಚಾಗಿ ಗಂಟಲು ನೋವಿನ ಸಮಸ್ಯೆ ಕಾಣಿಸಿಕೊಳ್ಳುತ್ತೆ. ಈ ಸಮಯದಲ್ಲಿ ಹೆಚ್ಚಾಗಿ ಶೀತ ಹಾಗೂ ಜ್ವರ ಕೂಡ ಕಾಣಿಸಿಕೊಳ್ಳುತ್ತೆ. ಗಂಟಲು ನೋವಿಗೆ ವೈರಸ್ ಹಾಗೂ ಬ್ಯಾಕ್ಟೀರಿಯಾ ಕೂಡ ಕಾರಣವಾಗಬಹುದು. ನೀವು ಕೂಡ ಗಂಟಲು ನೋವಿನ ಸಮಸ್ಯೆ ಇಂದ ಬಳಲುತ್ತಿದ್ದರೆ ಈ ಮನೆ ಮದ್ದನ್ನು ಬಳಸಿ ನೋಡಿ.
- ಚಳಿಗಾಲದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತೆ ಗಂಟಲು ನೋವು
- ಗಂಟಲು ನೋವಿಗೆ ಇಲ್ಲಿದೆ ಮನೆ ಮದ್ದು
- ಗಂಟಲು ನೋವಿಗೆ ವೈರಸ್ ಅಥವಾ ಬ್ಯಾಕ್ಟೀರಿಯಾ ಕೂಡ ಕಾರಣವಾಗಬಹುದು
ತುಳಸಿ ಕಷಾಯ: ತುಳಸಿಯನ್ನು ಆಯುರ್ವೇದದಲ್ಲಿ ಅತ್ಯಂತ ಪ್ರಯೋಜನಕಾರಿ ಎಂದು ಹೇಳಿದ್ದಾರೆ. ತುಳಸಿ ಕಷಾಯವನ್ನು ಕುಡಿಯುವುದರಿಂದ ಚಳಿಗಾಲದಲ್ಲಿ ಕಾಡುವ ಶೀತ, ಕೆಮ್ಮು ಹಾಗೂ ಗಂಟಲು ನೋವು ಕೂಡ ಕಡಿಮೆ ಆಗುತ್ತೆ.
ಜೇನುತುಪ್ಪ: ನಿಮಗೆ ಗಂಟಲು ನೋವಿನ ಸಮಸ್ಯೆ ಕಾಡುತ್ತಿದ್ದರೆ ಚಹಾದಲ್ಲಿ ಸೇರಿಸಿ ಕುಡಿಯಬಹುದು. ಜೇನುತುಪ್ಪವು ನಿಮ್ಮನ್ನು ವೈರಸ್ ನಿಂದ ರಕ್ಷಣೆ ನೀಡುತ್ತೆ. ಹಾಗೆ ಇದನ್ನು ಕುಡಿಯುವುದರಿಂದ ಗಂಟಲು ನೋವು ಕಡಿಮೆ ಆಗುತ್ತೆ.
ಅರಿಶಿನ: ಅರಿಶಿನ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಗಂಟಲು ನೋವಿನ ಸಮಸ್ಯೆ ಇದ್ದವರು ಹಾಲಿಗೆ ಅರಿಶಿನವನ್ನು ಬೆರೆಸಿ ಕುಡಿಯಬಹುದು.
ಬೆಚ್ಚಗಿನ ಉಪ್ಪು ಮತ್ತು ನೀರು: ನಿಮಗೆ ಗಂಟಲು ನೋವು ಕಾಡುತ್ತಿದ್ದರೆ ಸ್ವಲ್ಪ ಬೆಚ್ಚಗಿನ ನೀರಿಗೆ ಉಪ್ಪು ಬೆರೆಸಿ ಗಾರ್ಗಲ್ ಮಾಡಿ. ಹಾಗೆಯೆ ಸ್ವಲ್ಪ ಬಿಸಿ ನೀರು ಕುಡಿಯುವುದರಿಂದ ಗಂಟಲು ನೋವು ಕಡಿಮೆ ಆಗುತ್ತೆ.
ಇವುಗಳನ್ನೂ ಓದಿ:
ತೂಕ ಇಳಿಸಿಕೊಳ್ಳಲು ಈ ಟಿಪ್ಸ್ ಫಾಲೋ ಮಾಡಿ
ಪಪ್ಪಾಯಿ ಹಣ್ಣಿಗಿಂತ ಪಪ್ಪಾಯಿ ಕಾಯಿ ತಿಂದರೆ ಏನೆಲ್ಲಾ ಲಾಭವಿದೆ ನೋಡಿ
ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ಪಡೆಯಲು ಇದನ್ನು ಸೇವನೆ ಮಾಡಿ
ಚಳಿಗಾಲದಲ್ಲಿ ಈ ಆಹಾರವನ್ನು ಸೇವಿಸಿ ನಿಮ್ಮ ಆರೋಗ್ಯವನ್ನು ಕಾಪಾಡುತ್ತೆ
ಅಭಿಷೇಕ್ ಅವರು ಮಾಧ್ಯಮ ಕ್ಷೇತ್ರದಲ್ಲಿ ನಾಲ್ಕು ವರ್ಷದ ಅನುಭವ ಹೊಂದಿರುವ ಅನುಭವಸಂಪನ್ನ ಪತ್ರಕರ್ತ. ತಾಜಾ ಸುದ್ದಿ ಸಂಗ್ರಹಣೆ, ವರದಿಗಾರಿಕೆ, ಸಂದರ್ಶನ ಮತ್ತು ವಿವಿಧ ಪ್ರಸ್ತುತ ವಿಷಯಗಳ ವಿಶ್ಲೇಷಣೆಯಲ್ಲಿ ಅವರು ಪರಿಣತಿ ಹೊಂದಿದ್ದಾರೆ. ಓದುಗರಿಗೆ ಆಕರ್ಷಕ ಮತ್ತು ಮಾಹಿತಿಪೂರ್ಣ ವಿಷಯವನ್ನು ತಲುಪಿಸುವುದು ಅವರ ಬರವಣಿಗೆಯ ಮುಖ್ಯ ಲಕ್ಷಣ.
