ಬೇಸಿಗೆಯಲ್ಲಿ ಹೆಚ್ಚಿನ ಜನರಿಗೆ ಬೆವರುಸಾಲೆ ಆಗುತ್ತೆ. ಇದನ್ನು ಹೀಟ್ ರಾಶ್ ಎಂದು ಕರೆಯುತ್ತಾರೆ. ಇದು ಸಾಮಾನ್ಯವಾಗಿ ತುರಿಕೆಯನ್ನು ಸಹ ಹೊಂದಿರುತ್ತೆ. ಬೇಸಿಗೆಯಲ್ಲಿ ಕಾಡುವ ಬೆವರುಸಾಲೆಗೆ ಮನೆಮದ್ದು ಕೂಡ ಇದೆ. ಆ ಮನೆಮದ್ದುಗಳು ಯಾವುದು? ಹಾಗೆ ಅದನ್ನು ಬಳಸುವುದೇ ಹೇಗೆ ಎಂದು ಸಂಪೂರ್ಣವಾಗಿ ಈ ಲೇಖನದಲ್ಲಿ ಓದಿ.
ಅಲೋವೆರಾ : ಇದು ಬೆವರುಸಾಲೆ ಸಮಯದಲ್ಲಿ ಬರುವ ತುರಿಕೆ ಹಾಗೂ ಸಂವೇದನೆಯನ್ನು ನಿವಾರಣೆ ಮಾಡಲು ಸಹಾಯ ಮಾಡುತ್ತದೆ. ಅಲೋವೆರಾ ಊತ ಹಾಗೂ ನೋವನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. ನೀವು ಬೆವರುಸಾಲೆ ಆದಂತಹ ಜಾಗದಲ್ಲಿ ಅಲೋವೆರಾ ಹಚ್ಚಬಹುದು.
ತೆಂಗಿನ ಎಣ್ಣೆ : ತೆಂಗಿನ ಎಣ್ಣೆಯು ಚರ್ಮದ ಉರಿಯನ್ನು ಶಮನಗೊಳಿಸುತ್ತದೆ. ಇದರ ಜೊತೆಗೆ ಬೆವರುಸಾಲೆ ಸಮಯದಲ್ಲಿ ಬರುವ ಉರಿಯೂತವನ್ನು ಕೂಡ ನಿವಾರಣೆ ಮಾಡುತ್ತೆ. ಎಣ್ಣೆಯು ಬೆವರು ಮತ್ತು ತೈಲ ನಾಳಗಳನ್ನು ತಡೆಯುವುದರಿಂದ ಮುಖಕ್ಕೆ ಹಚ್ಚದೆ ಇರುವುದೇ ಉತ್ತಮ. ನೀವು ಮೊಡವೆ ಪೀಡಿತ ಚರ್ಮವನ್ನು ಹೊಂದಿದ್ದರೆ, ವಿಶೇಷವಾಗಿ ಬೇಸಿಗೆಯಲ್ಲಿ ಬೆವರು ಮತ್ತು ತೈಲ ಉತ್ಪಾದನೆಯು ಹೆಚ್ಚಾಗುವಾಗ ನೀವು ಜಾಗರೂಕರಾಗಿರಬೇಕು.
ಬೆವರುಸಾಲೆಗೆ ಮೊದಲ ಚಿಕಿತ್ಸೆ ಏನೆಂದರೆ ಚರ್ಮವನ್ನು ತಂಪಾಗಿಸುವುದು. ಆದ ಕಾರಣ ನೀವು ತಣ್ಣೀರಿನಲ್ಲಿ ಒದ್ದೆ ಮಾಡಿದ ಬಟ್ಟೆಯನ್ನು ಹತ್ತರಿಂದ ಹದಿನೈದು ನಿಮಿಷಗಳ ಕಾಲ ಬೆವರುಸಾಲೆ ಆದಂತಹ ಜಾಗದಲ್ಲಿ ಇರಿಸಿ. ಈ ರೀತಿಯಾಗಿ ಮಾಡುವುದರಿಂದ ಬೆವರುಸಾಲೆ ಕಡಿಮೆ ಆಗಬಹುದು.
ಆಹಾರ ಸೇವನೆ ಮಾಡುವಾಗ ನೆಲದ ಮೇಲೆ ಯಾಕೆ ಕುಳಿತುಕೊಳ್ಳಬೇಕು
ಅಭಿಷೇಕ್ ಅವರು ಮಾಧ್ಯಮ ಕ್ಷೇತ್ರದಲ್ಲಿ ನಾಲ್ಕು ವರ್ಷದ ಅನುಭವ ಹೊಂದಿರುವ ಅನುಭವಸಂಪನ್ನ ಪತ್ರಕರ್ತ. ತಾಜಾ ಸುದ್ದಿ ಸಂಗ್ರಹಣೆ, ವರದಿಗಾರಿಕೆ, ಸಂದರ್ಶನ ಮತ್ತು ವಿವಿಧ ಪ್ರಸ್ತುತ ವಿಷಯಗಳ ವಿಶ್ಲೇಷಣೆಯಲ್ಲಿ ಅವರು ಪರಿಣತಿ ಹೊಂದಿದ್ದಾರೆ. ಓದುಗರಿಗೆ ಆಕರ್ಷಕ ಮತ್ತು ಮಾಹಿತಿಪೂರ್ಣ ವಿಷಯವನ್ನು ತಲುಪಿಸುವುದು ಅವರ ಬರವಣಿಗೆಯ ಮುಖ್ಯ ಲಕ್ಷಣ.
