
Vishwa Havyaka Sammela 2024na
ಬೆಂಗಳೂರು: ಬ್ರಾಹ್ಮಣ ಸಮುದಾಯದಲ್ಲಿ ಹವ್ಯಕರ ಸಂಖ್ಯೆ ತುಂಬಾ ಕಡಿಮೆಯಾಗುತ್ತಿದೆ. ಪೀಠಕ್ಕೆ ಬಂದ 30 ವರ್ಷಗಳ ಹಿಂದೆ ಇದ್ದ ಹವ್ಯಕ ಸಮುದಾಯದವರ ಸಂಖ್ಯೆ ಈಗ ಅರ್ಧಕ್ಕಿಂತ ಕಡಿಮೆಯಾಗಿದೆ. ಈಗಿನ ಯುವಜನಾಂಗ ಮದುವೆ, ಮಕ್ಕಳೆಂಬ ಜವಾಬ್ದಾರಿ ಹೊಂದುವುದರಿಂದ ವಿಮುಖರಾಗುತ್ತಿದ್ದಾರೆ.
ಹಿಂದಿನ ಕಾಲದಲ್ಲಿ ಮಕ್ಕಳನ್ನು ಹೊಂದುವುದು ಖುಷಿಯ ವಿಚಾರವಾಗಿದ್ದರೆ ಈಗ ಮಕ್ಕಳನ್ನು ಹೊಂದುವುದು ಹೊರೆ ಎಂದು ಭಾವಿಸುತ್ತಾರೆ. ಇಂತಹ ಆಲೋಚನೆ ಸಮಾಜದ ಬೆಳವಣಿಗೆಗೆ ಉತ್ತಮವಲ್ಲ ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಬೆಂಗಳೂರಿನಲ್ಲಿ ನಡೆದ ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಆಶೀರ್ವಚನದಲ್ಲಿ ಹೇಳಿದರು.
ಅಪರೂಪದ ಭಾರತದ ಗೋತಳಿಗಳನ್ನು ಉಳಿಸುವ ಅಭಿಯಾನದಂತೆ ಈಗ ಅಪರೂಪದ ಹವ್ಯಕ ತಳಿಗಳನ್ನು ಉಳಿಸುವ ಸಂದರ್ಭ ಬಂದಿದೆ ಎಂದು ಹೇಳಿದರು. ಅನೇಕ ಮಕ್ಕಳನ್ನು ಹೆತ್ತ ತಾಯಿಗೆ ಕಂಚಿ ಆಚಾರ್ಯರು ವೀರಮಾತ ಎಂಬ ಪ್ರಶಸ್ತಿ ನೀಡಿ ಗೌರವಿಸುತ್ತಿದ್ದರು. ಅದೇ ರೀತಿ ನಮ್ಮ ಮಠದಲ್ಲಿ ಆರಂಭಿಸಲಿದ್ದೇವೆ ಎಂದರು.
ಮೂರಕ್ಕಿಂತ ಹೆಚ್ಚು ಮಕ್ಕಳನ್ನು ಪಡೆದುಕೊಳ್ಳುವವರಾದ್ರೆ ನಿಮ್ಮ ಮಕ್ಕಳ ವಿದ್ಯಾಭ್ಯಾಸ, ನಿಮ್ಮ ಮಕ್ಕಳ ಉದ್ಯೋಗದ ಜವಾಬ್ದಾರಿ ಶ್ರೀ ರಾಮಚಂದ್ರಾಪುರ ಮಠದ್ದು, ಆ ಮಕ್ಕಳಿಗೆ ಮಠವೇ ತಾಯಿ ತಂದೆ ಆಗುತ್ತೆ ಎಂದು ಹೇಳಿದರು. ಈಗ ಹಳ್ಳಿಗಳಲ್ಲಿ ಎಷ್ಟೋ ಮನೆಗಳು ಮುಚ್ಚಿವೆ ಎಷ್ಟೋ ಪರಂಪರೆಗಳು ಮುಗಿದಿವೆ. ಆದ್ರೆ ಈ ವಿಷಯದ ಬಗ್ಗೆ ಯಾರು ಮಾತನಾಡುತ್ತಿಲ್ಲ ಹಾಗಾಗಿ ನಾವು ಈ ವಿಷಯದ ಬಗ್ಗೆ ಚಿಂತೆ ಮಾಡಬೇಕು ಎಂದು ಹೇಳಿದರು.
Also Read: ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಉದ್ಘಾಟನೆ Vishwa Havyaka Sammelana 2024
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.