- ಗುರು ಕರ್ಕಾಟಕ ರಾಶಿ ಪ್ರವೇಶದಿಂದ “ಹಂಸ ಮಹಾಪುರುಷ ರಾಜಯೋಗ”
- ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಳ, ಉದ್ಯೋಗ-ವ್ಯಾಪಾರದಲ್ಲಿ ಪ್ರಗತಿ, ಸುಖ-ಸಂತೋಷ ವೃದ್ಧಿ
- ಹೊಸ ಆದಾಯ ಮೂಲಗಳು, ಹಣಕಾಸು ಸ್ಥಿತಿ ಸುಧಾರಣೆ
ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ದೇವಗುರು ಬೃಹಸ್ಪತಿಯ ಸಂಚಾರವು ಅತ್ಯಂತ ಮಹತ್ವಪೂರ್ಣ ಘಟನೆಯಾಗಿದೆ. ಗುರು ಗ್ರಹದ ಸ್ಥಾನ ಬದಲಾವಣೆಯು ಎಲ್ಲ ರಾಶಿಗಳ ಜನರ ಜೀವನದ ಮೇಲೆ ಗಾಢ ಪ್ರಭಾವ ಬೀರುತ್ತದೆ. ಸದ್ಯ ಮಿಥುನ ರಾಶಿಯಲ್ಲಿ ಸಂಚರಿಸುತ್ತಿರುವ ಗುರು, ಇದೀಗ ತನ್ನ ಅತ್ಯಂತ ಪ್ರಿಯವಾದ, ಉತ್ಕೃಷ್ಟ ಸ್ಥಾನಕ್ಕೆ ಪದಾರ್ಪಣೆ ಮಾಡಲು ಸಿದ್ಧನಾಗಿದ್ದಾನೆ.
ಧೃಕ್ ಪಂಚಾಂಗದ ಪ್ರಕಾರ, ಅಕ್ಟೋಬರ್ 18, 2025 ರಂದು ಸಂಜೆ 07:57 ರ ಸುಮಾರಿಗೆ, ಪ್ರಸ್ತುತ ಮಿಥುನ ರಾಶಿಯಲ್ಲಿರುವ ಗುರು ಗ್ರಹವು ತನ್ನ ಅತ್ಯಂತ ಉತ್ಕೃಷ್ಟ ರಾಶಿಚಕ್ರ ಚಿಹ್ನೆಯಾದ ಕರ್ಕಾಟಕ ರಾಶಿಗೆ ಪ್ರವೇಶಿಸಲಿದ್ದಾನೆ. ಗುರು ತನ್ನ ಉತ್ಕೃಷ್ಟ ರಾಶಿಯನ್ನು ಪ್ರವೇಶಿಸುತ್ತಿದ್ದಂತೆ, ಪಂಚ ಮಹಾಪುರುಷ ಯೋಗಗಳಲ್ಲಿ ಒಂದಾದ ಅತ್ಯಂತ ಶುಭಕರ ‘ಹಂಸ ಮಹಾಪುರುಷ ರಾಜಯೋಗ’ ನಿರ್ಮಾಣವಾಗಲಿದೆ.
ಈ ಹಂಸ ರಾಜಯೋಗದ ಪ್ರಭಾವವು ಎಲ್ಲಾ 12 ರಾಶಿಗಳ ಮೇಲೂ ಕಂಡುಬಂದರೂ, ಮೂರು ಅದೃಷ್ಟದ ರಾಶಿಗಳ ಪಾಲಿಗೆ ಇದು ನಿಜಕ್ಕೂ ಬಂಗಾರದ ಸಮಯವಾಗಲಿದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಲಕ್ಷ್ಮೀ-ಕುಬೇರರ ಸಂಪತ್ತೇ ಅವರ ಕೈ ಸೇರಲಿದೆ, ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ, ಮತ್ತು ಬಾಳೇ ಬಂಗಾರವಾಗಲಿದೆ!
ಹಂಸ ಮಹಾಪುರುಷ ರಾಜಯೋಗದಿಂದ ಅದೃಷ್ಟ ಬದಲಾಗಲಿರುವ 3 ರಾಶಿಗಳು
ಕನ್ಯಾ ರಾಶಿ (Virgo): ಕನ್ಯಾ ರಾಶಿಯವರಿಗೆ ಗುರು ಗೋಚಾರದಿಂದ ನಿರ್ಮಾಣವಾಗುವ ಹಂಸ ಮಹಾಪುರುಷ ರಾಜಯೋಗದ ಪರಿಣಾಮವಾಗಿ ಜೀವನದಲ್ಲಿ ಸುಖ-ಸಂತೋಷ ವೃದ್ಧಿಯಾಗಲಿದೆ. ಅದೃಷ್ಟದ ಸಂಪೂರ್ಣ ಬೆಂಬಲದಿಂದ ಭಾರೀ ಧನ-ಸಂಪತ್ತು ನಿಮ್ಮ ಕೈ ಸೇರಲಿದೆ. ಸಮಾಜದಲ್ಲಿ ನಿಮ್ಮ ಕೀರ್ತಿ ಮತ್ತು ಪ್ರತಿಷ್ಠೆ ಗಣನೀಯವಾಗಿ ಹೆಚ್ಚಾಗಲಿದೆ, ಜನರು ನಿಮ್ಮನ್ನು ಗೌರವಿಸುವರು. ಕುಟುಂಬದಲ್ಲಿ ಯಾವುದೇ ಶುಭ ಮಂಗಳ ಕಾರ್ಯಗಳು ಜರುಗುವ ಸಾಧ್ಯತೆಗಳಿವೆ, ಇದು ಮನೆಯಲ್ಲಿ ನೆಮ್ಮದಿ ಮತ್ತು ಸಂತೋಷವನ್ನು ತರುತ್ತದೆ.
ಇದನ್ನೂ ಓದಿ: ಶುಕ್ರನಿಂದ ಧನಶಕ್ತಿ ರಾಜಯೋಗ, ಈ 3 ರಾಶಿಗೆ ಹಣದ ಸುರಿಮಳೆ ಖಚಿತ! ಅದೃಷ್ಟ ಬದಲಾಗಲಿದೆ
ಮಿಥುನ ರಾಶಿ (Gemini): ಮಿಥುನ ರಾಶಿಯವರಿಗೆ ಹಂಸ ರಾಜಯೋಗವು ಜೀವನದಲ್ಲಿ ಹೊಸ ಹುರುಪು ಮತ್ತು ಉತ್ಸಾಹವನ್ನು ನೀಡಲಿದೆ. ಉದ್ಯೋಗಸ್ಥರಿಗೆ ಪ್ರಮೋಷನ್ (ಬಡ್ತಿ) ಸಿಗುವ ಪ್ರಬಲ ಸಾಧ್ಯತೆಗಳಿವೆ, ನಿಮ್ಮ ವೃತ್ತಿಜೀವನದಲ್ಲಿ ಉತ್ತಮ ಪ್ರಗತಿ ಕಾಣುವಿರಿ. ನಿರುದ್ಯೋಗಿಗಳಿಗೆ ಒಳ್ಳೆಯ ಕಡೆ, ಅಪೇಕ್ಷಿತ ಕೆಲಸ ಸಿಗಲಿದೆ. ಆದಾಯದ ಹೊಸ ಹೊಸ ಮೂಲಗಳು ಸೃಷ್ಟಿಯಾಗುವುದರಿಂದ ನಿಮ್ಮ ಹಣಕಾಸಿನ ಸ್ಥಿತಿ ಮೊದಲಿಗಿಂತಲೂ ಗಣನೀಯವಾಗಿ ಸುಧಾರಿಸಲಿದೆ.
ತುಲಾ ರಾಶಿ (Libra): ತುಲಾ ರಾಶಿಯವರಿಗೆ ಹಂಸ ಮಹಾಪುರುಷ ರಾಜಯೋಗವು ಬಾಳಲ್ಲಿ ನಿಜಕ್ಕೂ ಬಂಗಾರದ ಸಮಯವನ್ನು ತರಲಿದೆ. ಅದರಲ್ಲೂ, ನಿಮ್ಮ ವೃತ್ತಿ ಬದುಕಿನಲ್ಲಿ ಇದು ಭಾರೀ ಅದೃಷ್ಟದ ಸಮಯವಾಗಿದ್ದು, ವೇತನ ಹೆಚ್ಚಳವನ್ನು ಖಂಡಿತವಾಗಿ ನಿರೀಕ್ಷಿಸಬಹುದು. ಹಿಂದೆ ನೀವು ಮಾಡಿರುವ ಯಾವುದೇ ಹೂಡಿಕೆಗಳಿಂದ ಭರ್ಜರಿ ಲಾಭ ಸಿಗಲಿದ್ದು, ನಿಮ್ಮ ಸಂಪತ್ತು ವೃದ್ಧಿಯಾಗಲಿದೆ. ವ್ಯಾಪಾರಸ್ಥರಿಗೆ ಬ್ಯಾಂಕ್ ಬ್ಯಾಲೆನ್ಸ್ ಗಮನಾರ್ಹವಾಗಿ ಹೆಚ್ಚಾಗಲಿದ್ದು, ವ್ಯವಹಾರ ವಿಸ್ತರಣೆಯ ಸಾಧ್ಯತೆಗಳಿವೆ.
ಇದನ್ನೂ ಓದಿ: ಜುಲೈನಲ್ಲಿ ಜಾಕ್ಪಾಟ್: ಶನಿ-ಬುಧ ಗ್ರಹಗಳ ಹಿಮ್ಮುಖ ಚಲನೆ, ಈ 3 ರಾಶಿಗೆ ಹಣದ ಸುರಿಮಳೆ ಖಚಿತ!
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷ್ಯ ಲೆಕ್ಕಾಚಾರಗಳು, ಸಾಮಾನ್ಯ ನಂಬಿಕೆಗಳು ಮತ್ತು ಜ್ಯೋತಿಷ್ಯ ತಜ್ಞರ ಅಭಿಪ್ರಾಯಗಳನ್ನು ಆಧರಿಸಿದೆ. ವೈಯಕ್ತಿಕ ಜಾತಕದ ಆಧಾರದ ಮೇಲೆ ಫಲಿತಾಂಶಗಳು ಬದಲಾಗಬಹುದು.)
ಅಭಿಷೇಕ್ ಅವರು ಮಾಧ್ಯಮ ಕ್ಷೇತ್ರದಲ್ಲಿ ನಾಲ್ಕು ವರ್ಷದ ಅನುಭವ ಹೊಂದಿರುವ ಅನುಭವಸಂಪನ್ನ ಪತ್ರಕರ್ತ. ತಾಜಾ ಸುದ್ದಿ ಸಂಗ್ರಹಣೆ, ವರದಿಗಾರಿಕೆ, ಸಂದರ್ಶನ ಮತ್ತು ವಿವಿಧ ಪ್ರಸ್ತುತ ವಿಷಯಗಳ ವಿಶ್ಲೇಷಣೆಯಲ್ಲಿ ಅವರು ಪರಿಣತಿ ಹೊಂದಿದ್ದಾರೆ. ಓದುಗರಿಗೆ ಆಕರ್ಷಕ ಮತ್ತು ಮಾಹಿತಿಪೂರ್ಣ ವಿಷಯವನ್ನು ತಲುಪಿಸುವುದು ಅವರ ಬರವಣಿಗೆಯ ಮುಖ್ಯ ಲಕ್ಷಣ.
