
Haigunda Island
ಉತ್ತರ ಕನ್ನಡ: ಉತ್ತರ ಕನ್ನಡ ಎಂದರೆ ಸುಂದರವಾದ ಪರಿಸರ ನೆನಪಾಗುತ್ತೆ. ಕರಾವಳಿ ಪ್ರದೇಶವನ್ನು ನೋಡುವುದೇ ಅದ್ಬುತವಾಗಿರುತ್ತೆ. ಉತ್ತರ ಕನ್ನಡದ ಹೊನ್ನಾವರದಲ್ಲಿ [Haigunda Island] ಹೈಗುಂದ ದ್ವೀಪವಿದೆ. ಈ ದ್ವೀಪವು ಹವ್ಯಕ ಬ್ರಾಹ್ಮಣರ ಮೂಲ ನೆಲೆ. ಹಾಗೆ ಹೈಗುಂದ ದ್ವೀಪದ ಬಗ್ಗೆ ಇನ್ನಷ್ಟು ರೋಚಕ ವಿಷಯವನ್ನು ತಪ್ಪದೇ ಈ ಲೇಖನದಲ್ಲಿ ಓದಿ.
ಹವ್ಯಕುಂಡ ಎಂಬುದರ ಪ್ರಾಕೃತ ರೂಪ ಹೈಗುಂದ. ಇಲ್ಲಿ ನೀವು ತಿಳಿಯಬೇಕಾದ ವಿಶೇಶವಾದ ಸಂಗತಿ ಏನೆಂದರೆ ಇದು ಮಾನವ ನಿರ್ಮಿತ ದ್ವೀಪ. ಈಗ ನೀವು ಈ ದ್ವೀಪಕ್ಕೆ ಹೋಗಬೇಕೆಂದರೆ ಸೇತುವೆಯ ಮೂಲಕ ಹೋಗಬಹುದು. ಮೊದಲು ಹೈಗುಂದ ದ್ವೀಪಕ್ಕೆ ಹೋಗಬೇಕೆಂದರೆ ದೋಣಿಯ ಸಹಾಯದಿಂದ ಹೋಗಬೇಕಾಗಿತ್ತು. ಕದಂಬರ ಕಾಲದಲ್ಲಿ ಅದೆಷ್ಟೋ ರಾಜಮನೆತನದವರ ಗುರಿಯಾಗಿತ್ತು ಈ ಹೈಗುಂದ.
ಕದಂಬ ರಾಜ ಮಯೂರ ವರ್ಮನು ತನ್ನ ಯಜ್ಞ ಕ್ರಿಯೆಗಳನ್ನು ನಡೆಸುವುದಕ್ಕಾಗಿ ಅಹಿಚ್ಛತ್ರ ನಿಂದ 32 ಬ್ರಾಹ್ಮಣ ಕುಟುಂಬಗಳನ್ನು ಇಲ್ಲಿಗೆ ಕರೆದುಕೊಂಡು ಬಂದನು. ವಿವಿಧ ಗೋತ್ರದ ಬ್ರಾಹ್ಮಣರನ್ನು ಮಯೂರವರ್ಮ ಇಲ್ಲಿಗೆ ಕರೆಸಿಕೊಂಡು ಅಶ್ವಮೇಧ ಯಾಗ, ವಾಜಪೇಯಿ ಯಾಗ ಹಾಗೂ ರಾಜಸೂಯ ಯಾಗಗಳನ್ನು ನಡೆಸುತ್ತಿದ್ದನು. ಅಲ್ಲಿ ಆಗಿನ ಕಾಲದಲ್ಲಿ ಯಜ್ಞ ಯಾಗಗಳು ನಡೆಯುತ್ತಿತ್ತು ಎಂಬುದಕ್ಕೆ ಇನ್ನು ಸಹ ಸಾಕ್ಷಿ ಹೈಗುಂದದಲ್ಲಿ ಸಿಗುತ್ತೆ. ಅದೇನೆಂದರೆ ಈಗಲೂ ಅಲ್ಲಿ ಹಲವು ಹಿಂದಿನ ಕಾಲದ ಇಟ್ಟಿಗೆಗಳು ಸಿಗುತ್ತೆ.
ಶರಾವತಿ ನದಿಯ ದಡದಲ್ಲಿದ್ದ ಈ ಭಾಗವನ್ನು ನಾಲ್ಕು ಕಡೆಯಿಂದ ಕೊರೆಯಿಸಿ ಮಯೂರವರ್ಮನು ಇದನ್ನು ದ್ವೀಪವನ್ನಾಗಿಸಿದ. ಇದಕ್ಕೆ ಮುಖ್ಯ ಕಾರಣವೆಂದರೆ ಪಲ್ಲವರು ಹಾಗೂ ಇತರೆ ಪಂಗಡಗಳು ಇಲ್ಲಿ ಆಕ್ರಮಣವನ್ನು ಮಾಡಲು ಪ್ರಯತ್ನಿಸುತ್ತಿದ್ದರು. ಕದಂಬರ ಕಾಲದಲ್ಲಿ ದುರ್ಗಾಂಬಿಕಾ ದೇವಿಯ ದೇವಾಲಯವನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಈಗ ದುರ್ಗಾಂಬಿಕಾ ದೇವಾಲಯದ ಹೊರಗಿನ ರಚನೆಯನ್ನು ನವೀಕರಣ ಮಾಡಲಾಗಿದೆ.
ನಂತರ ಈ ಜಾಗಕ್ಕೆ ಜೈನರ ಆಗಮನವಾಗಿತ್ತು. ಈ ಜಾಗದ ಕಾವಲಿಗಾಗಿ ತುಳುನಾಡ ದೈವ ಬೊಬ್ಬರ್ಯನನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಈಗಲೂ ಇಲ್ಲಿ 6 ಅಡಿ ಬೊಬ್ಬರ್ಯನ ವಿಗ್ರಹನು ಇದೆ.
ಈಗ ಹವ್ಯಕರು ಮಾತ್ರವಲ್ಲದೆ ಬೇರೆ ಎಕ್ಕಾರು ಇಲ್ಲಿ ಮನೆಯನ್ನು ಕಟ್ಟಿಕೊಂಡು ಅನ್ಯೋನವಾಗಿ ವಾಸ ಮಾಡುತ್ತಿದ್ದಾರೆ. ಇದೆ ಭೂಮಿಯಲ್ಲಿ ಸಿಕ್ಕ ಇಟ್ಟಿಗೆಗಳಿಂದ ಜನರು ಮನೆಯನ್ನು ಕಟ್ಟಿಕೊಂಡಿದ್ದಾರೆ ಎಂದು ಹೇಳಲಾಗುತ್ತೆ. ಶ್ರೀ ದುರ್ಗಾಂಬಿಕಾ ದೇವಿ ಶ್ರೀ ಕ್ಷೇತ್ರ ಹೈಗುಂದ ದೇವಾಲಯದ ಬ್ರಹ್ಮಕಲಶೋತ್ಸವದಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರಿಂದ ಆಶೀರ್ವಚನ 24-03-2022 ರಂದು ನಡೆದಿತ್ತು.
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.