- ಆಗಸ್ಟ್ 13 ಮತ್ತು 30ರಂದು ಗುರು ಗ್ರಹವು ಪುನರ್ವಸು ನಕ್ಷತ್ರದ ಪಾದಗಳನ್ನು ಪ್ರವೇಶಿಸಲಿದ್ದು, ಆಗಸ್ಟ್ನಲ್ಲಿ ಎರಡು ಬಾರಿ ನಕ್ಷತ್ರ ಸಂಕ್ರಮಣ ಮಾಡಲಿದೆ
- ಈ ರಾಶಿಗಳವರಿಗೆ ವೃತ್ತಿ-ವ್ಯವಹಾರದಲ್ಲಿ ಲಾಭ, ಮದುವೆ ಯೋಗ, ಹೊಸ ಉದ್ಯೋಗಾವಕಾಶಗಳು, ಮತ್ತು ಆರ್ಥಿಕ ಸ್ಥಿತಿಯಲ್ಲಿ ಭಾರಿ ಸುಧಾರಣೆ ಕಂಡುಬರಲಿದೆ
ಜ್ಯೋತಿಷ್ಯ ಶಾಸ್ತ್ರದಲ್ಲಿ, ದೇವಗುರು ಬೃಹಸ್ಪತಿಯ ಸಂಚಾರಕ್ಕೆ ವಿಶೇಷ ಮಹತ್ವವಿದೆ. ಗುರು ಗ್ರಹದ ಶುಭ ದೃಷ್ಟಿಯು ನಮ್ಮ ಅದೃಷ್ಟವನ್ನೇ ಬದಲಾಯಿಸಿಬಿಡುತ್ತದೆ. ಅಂಥದ್ದೇ ಒಂದು ಅಪರೂಪದ ವಿದ್ಯಮಾನ ಇದೀಗ ಸಂಭವಿಸಲಿದೆ! ಬರುವ ಆಗಸ್ಟ್ ತಿಂಗಳಲ್ಲಿ ಗುರು ಗ್ರಹವು ಎರಡು ಬಾರಿ ತನ್ನ ನಕ್ಷತ್ರ ಸ್ಥಾನವನ್ನು ಬದಲಾಯಿಸಲಿದೆ. ಇದು ಕೆಲವು ಅದೃಷ್ಟಶಾಲಿ ರಾಶಿಗಳ ಪಾಲಿಗೆ ಅದೃಷ್ಟದ ಬಾಗಿಲನ್ನು ತೆರೆಯಲಿದೆ.
ಮೂರು ರಾಶಿಗಳಿಗೆ ಹೆಚ್ಚುವುದು ಗುರು ಬಲ! ಹೆಚ್ಚುತ್ತಲೇ ಹೋಗುವುದು ಸಂಪತ್ತು, ಸಮೃದ್ಧಿ!
ಸಾಮಾನ್ಯವಾಗಿ ಗ್ರಹಗಳು ಒಂದು ತಿಂಗಳಲ್ಲಿ ಒಂದು ಬಾರಿ ತಮ್ಮ ನಕ್ಷತ್ರವನ್ನು ಬದಲಾಯಿಸಿದರೆ, ಆಗಸ್ಟ್ನಲ್ಲಿ ಗುರು ಎರಡು ಬಾರಿ ನಕ್ಷತ್ರ ಸಂಕ್ರಮಣ ಮಾಡಲಿದ್ದಾನೆ. ಈ ಬದಲಾವಣೆಗಳು ನಿಜಕ್ಕೂ ವಿಶೇಷವಾಗಿವೆ:
- ಆಗಸ್ಟ್ 12 ರವರೆಗೆ ಗುರು ಗ್ರಹವು ಆದ್ರಾ ನಕ್ಷತ್ರದಲ್ಲಿದ್ದರೆ,
- ಆಗಸ್ಟ್ 13, 2025 ರಂದು ಗುರು ಪುನರ್ವಸು ನಕ್ಷತ್ರದ ಮೊದಲ ಪಾದ ಪ್ರವೇಶಿಸುತ್ತಾನೆ.
- ನಂತರ, ಆಗಸ್ಟ್ 30 ರಂದು, ಪುನರ್ವಸು ನಕ್ಷತ್ರದ ಎರಡನೇ ಪಾದಕ್ಕೆ ಅಡಿಯಿಡುತ್ತಾನೆ.
ಕರ್ಕಾಟಕ ರಾಶಿ ಯವರಿಗೆ ಗುರು ಸಂಚಾರವು ವಿಶೇಷವಾಗಿ ಶುಭ ಫಲಗಳನ್ನು ತರಲಿದೆ. ನಿಮ್ಮ ಮನೆಯಲ್ಲಿ ಕೆಲವು ಶುಭ ಕಾರ್ಯಗಳು ಅಥವಾ ಕೆಲಸಗಳು ನಡೆಯಬಹುದು. ಮದುವೆಗೆ ಸಂಬಂಧಿಸಿದ ಸಮಸ್ಯೆಗಳು ಕೊನೆಗೊಳ್ಳುತ್ತವೆ. ವೃತ್ತಿಜೀವನದಲ್ಲಿನ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ವ್ಯಾಪಾರಸ್ಥರ ಆದಾಯ ಹೆಚ್ಚಾಗಬಹುದು, ಇದು ನಿಮ್ಮ ಆರ್ಥಿಕ ಸ್ಥಿತಿಯನ್ನು ಮತ್ತಷ್ಟು ಸುಧಾರಿಸುತ್ತದೆ.
ಇದನ್ನೂ ಓದಿ: ಆಗಸ್ಟ್ 1ರಿಂದ ಈ ರಾಶಿಗಳ ಅದೃಷ್ಟವೇ ಬದಲಾಗಲಿದೆ; ಸಂಪತ್ತಿನ ಸುರಿಮಳೆ, ರಾಜಯೋಗ ಖಚಿತ!
ಮೇಷ ರಾಶಿಯವರೇ, ನಾಳೆಯಿಂದ ನಿಮ್ಮ ಅದೃಷ್ಟ ಖುಲಾಯಿಸಲಿದೆ. ಅರ್ಧಕ್ಕೆ ನಿಂತು ಹೋಗಿದ್ದ ನಿಮ್ಮ ಕೆಲಸ ಕಾರ್ಯಗಳು ಪೂರ್ಣವಾಗುತ್ತವೆ. ವೃತ್ತಿ ಮತ್ತು ವ್ಯವಹಾರದಲ್ಲಿ ಲಾಭದಾಯಕ ಮಾರ್ಗಗಳು ತೆರೆದುಕೊಳ್ಳುತ್ತವೆ. ನಿಮ್ಮ ಕಠಿಣ ಪರಿಶ್ರಮಕ್ಕೆ ಪ್ರತಿಫಲ ದೊರೆತು, ಪ್ರತಿ ಹಂತದಲ್ಲಿಯೂ ಆರ್ಥಿಕ ಲಾಭವಾಗುವುದು. ಸಮಾಜದಲ್ಲಿ ನಿಮ್ಮ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಜೀವನದಲ್ಲಿನ ಸಮಸ್ಯೆಗಳು ಕೊನೆಗೊಂಡು, ನೆಮ್ಮದಿಯ ಜೀವನ ನಿಮ್ಮದಾಗುತ್ತದೆ.
ಮೀನ ರಾಶಿಯವರೇ, ನಿಮಗೆ ಹೊಸ ಉದ್ಯೋಗಾವಕಾಶಗಳು ಅರಸಿಕೊಂಡು ಬರುತ್ತವೆ. ನಿಮ್ಮಲ್ಲಿ ನಕಾರಾತ್ಮಕ ಆಲೋಚನೆಗಳು ದೂರವಾಗಿ, ಸಕಾರಾತ್ಮಕತೆ ಹೆಚ್ಚುತ್ತದೆ. ನಿಮ್ಮ ನಿರ್ಧಾರಗಳಲ್ಲಿ ಆತ್ಮವಿಶ್ವಾಸ ಹೆಚ್ಚಾಗುವುದು. ವ್ಯವಹಾರದಲ್ಲಿ ಭಾರಿ ಲಾಭವಾಗಬಹುದು. ವೈಯಕ್ತಿಕ ಜೀವನದಲ್ಲಿ, ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯುವುದು ಸಾಧ್ಯವಾಗುತ್ತದೆ. ನಿಮ್ಮ ವೃತ್ತಿಜೀವನದಲ್ಲಿ ಹೊಸ ಎತ್ತರವನ್ನು ತಲುಪಲು ಇದು ಉತ್ತಮ ಅವಕಾಶ.
ಇದನ್ನೂ ಓದಿ: ವಯಸ್ಸಾದಂತೆ ಸುಂದರವಾಗಿ ಕಾಣ್ತಾರೆ ಈ ರಾಶಿಯ ಜನರು! ನೀವೇನಾ ಆ ಅದೃಷ್ಟವಂತರು?
Disclaimer: ಇದು ಕೇವಲ ಸಾಮಾನ್ಯ ಜ್ಯೋತಿಷ್ಯದ ಮಾಹಿತಿಯ ಮುಖಾಂತರ ಬರೆಯಲಾಗಿದೆ. ಹೆಚ್ಚಿನ ವಿವರಗಳಿಗಾಳಿ ನುರಿತ ಜ್ಯೋತಿಷ್ಯರನ್ನು ಸಂಪರ್ಕಿಸುವುದು ಉತ್ತಮ
ಆರಾಧ್ಯ ಅವರು ಐದು ವರ್ಷಗಳಿಂದ ಜ್ಯೋತಿಷ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಅನುಭವ ಹೊಂದಿರುವ ಕಂಟೆಂಟ್ ರೈಟರ್. ಜ್ಯೋತಿಷ್ಯ ವಿಷಯಗಳನ್ನು ಆಧಾರಿತ ಮಾಹಿತಿಯೊಂದಿಗೆ ಸಂಶೋಧಿಸಿ, ಸರಳ ಮತ್ತು ನಿಖರ ರೀತಿಯಲ್ಲಿ ಓದುಗರಿಗೆ ತಲುಪಿಸುವಲ್ಲಿ ಅವರಿಗೆ ವಿಶೇಷ ನೈಪುಣ್ಯ ಇದೆ. ವಿಶ್ವಾಸಾರ್ಹ ಮತ್ತು ಉಪಯುಕ್ತ ಮಾಹಿತಿಯನ್ನು ನೀಡುವುದು ಅವರ ಬರವಣಿಗೆಯ ಮೂಲ ಸಿದ್ಧಾಂತ.
