ಗೃಹಜ್ಯೋತಿ ಯೋಜನೆಯಡಿ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಕಾಂಗ್ರೆಸ್ ಸರ್ಕಾರ ಹೇಳಿದೆ. ಗೃಹಜ್ಯೋತಿ ಯೋಜನೆಯ ಬಗ್ಗೆ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ? ಯಾರಿಗೆಲ್ಲ ಉಚಿತ ವಿದ್ಯುತ್ ಸಿಗುತ್ತೆ? ಎಲ್ಲದರ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.
| Join Whats App group | Click Here to Join |
ಆಗಸ್ಟ್ 1 ರಿಂದ ಗೃಹಜ್ಯೋತಿ ಯೋಜನೆ ಜಾರಿಯಾಗಲಿದ್ದು ಎಲ್ಲಾ ನಾಗರಿಕರು ಜೂನ್ ತಿಂಗಳ ವಿದ್ಯುತ್ ಬಿಲ್ ಅನ್ನು ಪಾವತಿಸಬೇಕು. ಜುಲೈ ತಿಂಗಳ ವಿದ್ಯುತ್ ಬಿಲ್ ಪಾವತಿಸುವ ಅವಶ್ಯಕತೆ ಇಲ್ಲ. ಕರ್ನಾಟಕದಲ್ಲಿ 2.16 ಕೋಟಿ ಜನರು 200 ಯೂನಿಟ್ ಕಿಂತ ಕಡಿಮೆ ವಿದ್ಯುತ್ ಬಳಸುತ್ತಿದ್ದಾರೆ. ಹಾಗೆಯೆ 2 ಲಕ್ಷ ಮಂದಿ 200 ಯೂನಿಟ್ ಕಿಂತ ಜಾಸ್ತಿ ವಿದ್ಯುತ್ ಬಳಸುತ್ತಿದ್ದಾರೆ.
ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಗೃಹಜ್ಯೋತಿ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ಸೇವಾ ಸಿಂಧು [Seva Sindu Portal] ಪೋರ್ಟಲ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗುತ್ತೆ. ಕರ್ನಾಟಕ ರಾಜ್ಯದಲ್ಲಿ ಸುಮಾರು 98% ರಷ್ಟು ಜನರು ಈ ಉಚಿತ ವಿದ್ಯುತ್ ಯೋಜನೆಯ ಫಲಾನುಭವಿಗಳಾಗಿದ್ದರೆ. ಆದರೆ ಪ್ರತಿಯೊಬ್ಬ ಫಲಾನುಭವಿಯ ವಾರ್ಷಿಕ ವಿದ್ಯುತ್ ಬಿಲ್ ಆಧಾರದ ಮೇಲೆ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಒಂದು ವರ್ಷದ ಶೇಕಡಾ 10% ರಷ್ಟು ವಿದ್ಯುತ್ ಬಳಕೆ ಮಾಡಿದರು ನೀವು ಈ ಯೋಜನೆಯ ಪ್ರಯೋಜನವನ್ನು ಬಳಸಬಹುದಾಗಿದೆ.
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಒಂದು ವೇಳೆ 200 ಯೂನಿಟ್ ಕಿಂತ ಜಾಸ್ತಿ ವಿದ್ಯುತ್ ಬಳಸಿದರೆ ನಿಮಗೆ ಉಚಿತ ವಿದ್ಯುತ್ ಯೋಜನೆ ಸಿಗುವುದಿಲ್ಲ. ಒಂದು ವೇಳೆ ವಾರ್ಷಿಕ ಸರಾಸರಿ ಹಾಗೂ 10% ಬಫರ್ ತೆಗೆದುಕೊಂಡು 200 ಯೂನಿಟ್ ಒಳಗೆ ನೀವು ಬಳಕೆ ಮಾಡಿದರೆ ಹೆಚ್ಚುವರಿಯಾಗಿ ಬಳಸಿದ ಯೂನಿಟ್ ಗೆ ಮಾತ್ರ ಬಿಲ್ ಹಣ ಪಾವತಿಸಬೇಕಾಗುತ್ತೆ.
ಒಬ್ಬ ವ್ಯಕ್ತಿ ಒಂದು ಮೀಟರ್
ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಹಲವು ಮೀಟರ್ ನೋಂದಣಿಯಾಗಿದ್ದರೆ ಅದರಲ್ಲಿ ಕೇವಲ ಒಂದು ಮೀಟರ್ ಅಷ್ಟೇ ಗಣನೆಗೆ ಬರುತ್ತದೆ. ಅಂದರೆ ಕೇವಲ ಒಂದು ಮೀಟರ್ ಬಿಲ್ ನಲ್ಲಿ ಮಾತ್ರ ಕಡಿತವಾಗುತ್ತದೆ. ಈ ಯೋಜನೆಯ ಫಲಾನುಭವಿಗಳು ಯಾವುದೇ ಬಾಕಿ ಹಣವನ್ನು ಇಟ್ಟುಕೊಂಡಿದ್ದರೆ ಸರ್ಕಾರ ಆ ಹಣವನ್ನು ಭರಿಸುವುದಿಲ್ಲ. ಹಾಗೆಯೆ ಬಾಕಿ ಹಣವನ್ನು ಇಟ್ಟುಕೊಂಡಿರುವ ಮನೆಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಎಂದು ಹೇಳಿದ್ದಾರೆ.
ಬಸ್ ನಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ಸ್ಮಾರ್ಟ್ ಕಾರ್ಡ್ ಬೇಕು ಇದು ಎಲ್ಲಿ ಸಿಗುತ್ತೆ?
ಫ್ರೀ ಕರೆಂಟ್ ನಿರೀಕ್ಷೆಯಲ್ಲಿದ್ದವರಿಗೆ ಶಾಕ್ ..!
ಅಭಿಷೇಕ್ ಅವರು ಮಾಧ್ಯಮ ಕ್ಷೇತ್ರದಲ್ಲಿ ನಾಲ್ಕು ವರ್ಷದ ಅನುಭವ ಹೊಂದಿರುವ ಅನುಭವಸಂಪನ್ನ ಪತ್ರಕರ್ತ. ತಾಜಾ ಸುದ್ದಿ ಸಂಗ್ರಹಣೆ, ವರದಿಗಾರಿಕೆ, ಸಂದರ್ಶನ ಮತ್ತು ವಿವಿಧ ಪ್ರಸ್ತುತ ವಿಷಯಗಳ ವಿಶ್ಲೇಷಣೆಯಲ್ಲಿ ಅವರು ಪರಿಣತಿ ಹೊಂದಿದ್ದಾರೆ. ಓದುಗರಿಗೆ ಆಕರ್ಷಕ ಮತ್ತು ಮಾಹಿತಿಪೂರ್ಣ ವಿಷಯವನ್ನು ತಲುಪಿಸುವುದು ಅವರ ಬರವಣಿಗೆಯ ಮುಖ್ಯ ಲಕ್ಷಣ.
