Gopravasa Owner
Go Pravasa ಎಂಬ ಹೆಸರನ್ನು ನೀವು Dr Bro ಅವರ ವಿಡಿಯೋದಲ್ಲಿ ನೋಡಿರಬಹದು. ಈಗ ಸೋಶಿಯಲ್ ಮೀಡಿಯಾದಲ್ಲಂತೂ ಎಲ್ಲಾ ಕಡೆ ಇದೆ ಪೋಸ್ಟ್ ವೈರಲ್ ಆಗ್ತಾ ಇದೆ. ಕರ್ನಾಟಕದಲ್ಲಿ ಡಾ ಬ್ರೋ ಅಂತಾನೆ ಪ್ರಸಿದ್ಧವಾಗಿರುವ ಗಗನ್ ಶ್ರೀನಿವಾಸ್ (Gagan Srinivas) ಈಗ ಹೊಸ ಕೆಲಸಕ್ಕೆ ಮುಂದಾಗಿದ್ದಾರೆ.
ಪ್ರವಾಸ ಮಾಡುವ ಮೂಲಕವೇ ಪ್ರಸಿದ್ಧರಾಗಿರುವ ಗಗನ್ ಈಗ ಬೆಂಗಳೂರಿನಲ್ಲಿ ಹೊಸ ಕಚೇರಿಯನ್ನ ಆರಂಭ ಮಾಡಿದ್ದಾರೆ. ವಿಜಯನಗರದಲ್ಲಿ Dr Bro, Go Pravasa ಹೆಸರಿನ ಕಚೇರಿಯನ್ನು ಆರಂಭ ಮಾಡಿದ್ದಾರೆ. ಆಗಸ್ಟ್ 15 ಅಂದರೆ ಸ್ವಾತಂತ್ರ್ಯ ದಿನದಂದು ಗೋ ಪ್ರವಾಸ ಕಚೇರಿ ಆರಂಭವಾಗಿದೆ.
ಗೋ ಪ್ರವಾಸ ಆಫೀಸ್ ಫೋಟೋವನ್ನು ಗಗನ್ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದರು. ಅದಕ್ಕೆ ಸಾಕಷ್ಟು ಜನರ ಲೈಕ್ಸ್ ಹಾಗೂ ಕಾಮೆಂಟ್ಸ್ ಸಹ ಬಂದಿದೆ. ಜನರು ಹೇಗೆ Dr Bro ಗಗನ್ ಅವರ ವೀಡಿಯೋಸ್ ಗಳಿಗೆ ಬೆಂಬಲವನ್ನು ನೀಡಿದ್ದರೋ ಹಾಗೆ ಈ ಗೋ ಪ್ರವಾಸ ಎಂಬ ಹೊಸ ಬಿಸಿನೆಸ್ ಗೆ ಸಹ ಬೆಂಬಲವನ್ನು ನೀಡುತ್ತೇವೆ ಎಂದು ಜನರು ಹೇಳಿದ್ದಾರೆ. ಗಗನ್ ಇನ್ಸ್ಟಾಗ್ರಾಮ್ ಪೋಸ್ಟ್ ಗೆ ಸುಮಾರು ಎರಡು ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ.
ಈ ಹಿಂದೆ ಗೋ ಪ್ರವಾಸದ ಟೀಮ್ ಜೊತೆ ಪ್ರವಾಸಕ್ಕೆ ಹೋಗಿ ಬಂದಿರುವ ನೂರಕ್ಕೂ ಅಧಿಕ ಜನರು ಸೋಶಿಯಲ್ ಮೀಡಿಯಾದಲ್ಲಿ ಬೆಸ್ಟ್ ರೇಟಿಂಗ್ಸ್ ಅನ್ನು ಸಹ ನೀಡಿದ್ದಾರೆ. (Gopravasa Owner) ಗೋ ಪ್ರವಾಸ ಮಡಿದ ನಂತರ ಟ್ರಾವೆಲ್ ವಿಡಿಯೋ ಹಾಕೋದನ್ನ ನಿಲ್ಲಿಸಬೇಡಿ ಎಂದು ಡಾ ಬ್ರೋ ಅವರ ಪೋಸ್ಟ್ ಗೆ ಅಭಿಮಾನಿಗಳು ಕಾಮೆಂಟ್ಸ್ ಸಹ ಮಾಡಿದ್ದಾರೆ.
ಅಭಿಷೇಕ್ ಅವರು ಮಾಧ್ಯಮ ಕ್ಷೇತ್ರದಲ್ಲಿ ನಾಲ್ಕು ವರ್ಷದ ಅನುಭವ ಹೊಂದಿರುವ ಅನುಭವಸಂಪನ್ನ ಪತ್ರಕರ್ತ. ತಾಜಾ ಸುದ್ದಿ ಸಂಗ್ರಹಣೆ, ವರದಿಗಾರಿಕೆ, ಸಂದರ್ಶನ ಮತ್ತು ವಿವಿಧ ಪ್ರಸ್ತುತ ವಿಷಯಗಳ ವಿಶ್ಲೇಷಣೆಯಲ್ಲಿ ಅವರು ಪರಿಣತಿ ಹೊಂದಿದ್ದಾರೆ. ಓದುಗರಿಗೆ ಆಕರ್ಷಕ ಮತ್ತು ಮಾಹಿತಿಪೂರ್ಣ ವಿಷಯವನ್ನು ತಲುಪಿಸುವುದು ಅವರ ಬರವಣಿಗೆಯ ಮುಖ್ಯ ಲಕ್ಷಣ.
