
ಈ ವರ್ಷ ಗಣೇಶ ಚತುರ್ಥಿ ಆಗಸ್ಟ್ 26, 2025 ರಂದು ಆಚರಿಸಲಾಗುತ್ತಿದೆ. ಈ ವಿಶೇಷ ದಿನದಂದು ಮನೆಯಲ್ಲೇ ಗಣೇಶನ ಮೂರ್ತಿಯನ್ನು ಸ್ಥಾಪಿಸಿ ಪೂಜಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ, ಮನೆಯಲ್ಲಿ ಗಣೇಶನ ವಿಗ್ರಹವನ್ನು ಇಡುವ ಮುನ್ನ ವಾಸ್ತು ಶಾಸ್ತ್ರದ ಕೆಲ ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅತ್ಯಂತ ಅಗತ್ಯ. ಸರಿಯಾದ ದಿಕ್ಕು, ಮೂರ್ತಿಯ ಗಾತ್ರ ಮತ್ತು ಪೂಜಾ ವಿಧಾನ ಇವೆಲ್ಲವು ಮನೆಯ ಶಾಂತಿ ಮತ್ತು ಸಮೃದ್ಧಿಗೆ ನೇರವಾಗಿ ಪ್ರಭಾವ ಬೀರುತ್ತವೆ.
ಈ ಲೇಖನದಲ್ಲಿ, ನೀವು ಮನೆಯಲ್ಲಿ ಗಣೇಶನ ವಿಗ್ರಹವನ್ನು ಇಡುವ ಮುನ್ನ ಗಮನಿಸಬೇಕಾದ ಮುಖ್ಯ ವಾಸ್ತು ಸಲಹೆಗಳನ್ನು ಹಾಗೂ ಪೂಜಾ ವಿಧಾನವನ್ನು ವಿವರಿಸುತ್ತಿದ್ದೇವೆ
ವಾಸ್ತು ಶಾಸ್ತ್ರದ ಪ್ರಕಾರ, ಈಶಾನ್ಯ ದಿಕ್ಕು ದೇವತೆಗಳ ವಾಸಸ್ಥಾನವಾಗಿದೆ. ಈ ದಿಕ್ಕಿನಲ್ಲಿ ಗಣೇಶನ ಮೂರ್ತಿಯನ್ನು ಇಡುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹರಿದುಬರುತ್ತದೆ. ಇದು ಮನೆಯಲ್ಲಿನ ವಾಸ್ತು ದೋಷಗಳನ್ನು ನಿವಾರಣೆ ಮಾಡುತ್ತವೆ ಎಂಬ ನಂಬಿಕೆಯೂ ಇದೆ. ಗಣೇಶನ ವಿಗ್ರಹವನ್ನು ಪೂರ್ವಕ್ಕೆ ಮುಖ ಮಾಡಿಸಿ ಸ್ಥಾಪಿಸುವುದು ಅತ್ಯಂತ ಶುಭಕರ. ಇದರಿಂದ ಮನೆಯಲ್ಲಿ ಸಕಾರಾತ್ಮಕತೆ, ಶ್ರದ್ಧೆ ಮತ್ತು ಶಾಂತಿ ಹೆಚ್ಚಾಗುತ್ತದೆ.
ಇದನ್ನೂ ಓದಿ: ಗಣೇಶನ ಮೂರ್ತಿ ಪ್ರತಿಷ್ಠಾಪನೆಗೂ ಮುನ್ನ ಪಾಲಿಸಬೇಕಾದ ನಿಯಮಗಳು
ಗಣೇಶ ವಿಗ್ರಹದ ಗಾತ್ರ
ಗಣೇಶನ ವಿಗ್ರಹವನ್ನು ಆರಿಸುವಾಗ ಅದರ ಗಾತ್ರಕ್ಕೂ ವಿಶೇಷ ಗಮನ ನೀಡಬೇಕು. ವಾಸ್ತು ಶಾಸ್ತ್ರದ ಪ್ರಕಾರ, ಮನೆಗೆ ತುಂಬಾ ದೊಡ್ಡ ಅಥವಾ ತುಂಬಾ ಚಿಕ್ಕ ವಿಗ್ರಹ ಸೂಕ್ತವಲ್ಲ. ಮಧ್ಯಮ ಗಾತ್ರದ ವಿಗ್ರಹವನ್ನು ಆರಿಸಿಕೊಳ್ಳುವುದು ಸಮತೋಲನಕ್ಕೆ ಸಹಾಯಕ. ಈ ಮೂಲಕ ಪೂಜಾ ಸ್ಥಳದಲ್ಲಿ ಭಕ್ತಿಯಿಂದ ಕೂಡಿದ ವಾತಾವರಣ ನಿರ್ಮಾಣವಾಗುತ್ತದೆ.
ಪ್ರತಿದಿನ ಗಣೇಶನ ಮೂರ್ತಿಯ ಮುಂದೆ ದೀಪ ಹಚ್ಚುವುದು ಮನೆಯಲ್ಲಿ ಶುದ್ಧತೆ ಮತ್ತು ಶಕ್ತಿ ಹರಡುವುದಕ್ಕೆ ಸಹಾಯಕ. ಹೀಗೆ ಮಾಡಿದರೆ ನಕಾರಾತ್ಮಕ ಶಕ್ತಿಗಳು ದೂರ ಹೋಗುತ್ತವೆ ಎಂಬ ನಂಬಿಕೆಯಿದೆ. ಜೊತೆಗೆ, ಲಕ್ಷ್ಮಿ ದೇವಿಯ ಮೂರ್ತಿಯನ್ನೂ ಗಣಪತಿಯೊಂದಿಗೆ ಪೂಜಿಸುವ ಮೂಲಕ ಸಂಪತ್ತು, ಸಮೃದ್ಧಿ ಮತ್ತು ಶಾಂತಿ ಮನೆಮಾಡುತ್ತದೆ.
Aaradhya is an accomplished content writer with five years of experience specializing in astrology. She possesses extensive expertise in researching, analyzing, and crafting insightful and engaging articles on various astrological topics.