ಕರ್ನಾಟಕ ಸರ್ಕಾರವು BPL ರೇಷನ್ ಕಾರ್ಡ್ ಹೊಂದಿರುವವರಿಗೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಉಚಿತ ಕರೆಂಟ್ ನೀಡುವುದಾಗಿ ಆದೇಶವನ್ನು ಹೊರಡಿಸಿದೆ. ಪ್ರತಿ ತಿಂಗಳು 75 ಯೂನಿಟ್ ವಿದ್ಯುತ್ ಉಚಿತವಾಗಿ ಪಡೆಯಬಹುದು. ಹಾಗಾದರೆ ಈ ಸೌಲಭ್ಯವನ್ನು ಪಡೆಯುವುದು ಹೇಗೆ? ಯಾವೆಲ್ಲ ದಾಖಲೆಗಳು ಬೇಕು ಎಲ್ಲವನ್ನು ಸಂಪೂರ್ಣವಾಗಿ ತಿಳಿಯೋಣ ಬನ್ನಿ.
ಇಂಧನ ಇಲಾಖೆಯಿಂದ ಉಚಿತ ವಿದ್ಯುತ್ ಯೋಜನೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಬಿ ಪಿ ಎಲ್ ರೇಷನ್ ಕಾರ್ಡ್ ಹೊಂದಿದವರು ಹಾಗೂ ಪರಿಶಿಷ್ಟ ಜಾತಿ ಅಥವಾ ಪಂಗಡದವರಿಗೆ 75 ಯೂನಿಟ್ ಫ್ರೀ ವಿದ್ಯುತ್ ಸಿಗುತ್ತೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಕಡೆಯಿಂದ ಕರ್ನಾಟಕ ಸರ್ಕಾರವು ಅಮೃತ ಜ್ಯೋತಿ ಅಡಿಯಲ್ಲಿ ಫ್ರೀ ವಿದ್ಯುತ್ ನೀಡುವುದಾಗಿ ಆದೇಶವನ್ನು ಹೊರಡಿಸಿದೆ.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
- ಪಾನ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಆಧಾರ್ ಕಾರ್ಡ್
- ರೇಷನ್ ಕಾರ್ಡ್ / ಬಿ ಪಿ ಎಲ್ ಕಾರ್ಡ್ {RC ಸಂಖ್ಯೆ ಇರಬೇಕು}
- ಜಾತಿ ಪ್ರಮಾಣ ಪತ್ರ {RD ಸಂಖ್ಯೆ ಇರಬೇಕು}
ಇದನ್ನೂ ಓದಿ: ಆಧಾರ್ ಕಾರ್ಡ್ ಹೊಂದಿದ್ದರೆ 2 ಲಕ್ಷ ರೂಪಾಯಿ ಕೇಂದ್ರ ಸರ್ಕಾರದಿಂದ ಸಿಗುತ್ತೆ
ಅರ್ಜಿಯನ್ನು ಸಲ್ಲಿಸುವುದು ಹೇಗೆ?
ನೀವು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗುತ್ತೆ. ಹಾಗಾಗಿ ನಿಮ್ಮ ಹತ್ತಿರದ ಗ್ರಾಂ ಒನ್ ಸೇವಾ ಸಿಂಧುವಿಗೆ ಭೇಟಿ ನೀಡಿ. ಮೇಲೆ ನೀಡಿರುವ ಎಲ್ಲ ದಾಖಲೆ ಪ್ರಮಾಣ ಪತ್ರಗಳು ಅವಶ್ಯಕ.
BPL ರೇಷನ್ ಕಾರ್ಡ್ ಹೊಂದಿದವರು ಮತ್ತು ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದವರು ಮಾತ್ರ ಈ ಸೌಲಭ್ಯಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.
ಇದನ್ನೂ ಓದಿ:
ನರೇಂದ್ರ ಮೋದಿ ಸರ್ಕಾರದಿಂದ ಮಹಿಳೆಯರಿಗೆ ಸಿಗುತ್ತೆ 15000 ರೂಪಾಯಿ
ಅಭಿಷೇಕ್ ಅವರು ಮಾಧ್ಯಮ ಕ್ಷೇತ್ರದಲ್ಲಿ ನಾಲ್ಕು ವರ್ಷದ ಅನುಭವ ಹೊಂದಿರುವ ಅನುಭವಸಂಪನ್ನ ಪತ್ರಕರ್ತ. ತಾಜಾ ಸುದ್ದಿ ಸಂಗ್ರಹಣೆ, ವರದಿಗಾರಿಕೆ, ಸಂದರ್ಶನ ಮತ್ತು ವಿವಿಧ ಪ್ರಸ್ತುತ ವಿಷಯಗಳ ವಿಶ್ಲೇಷಣೆಯಲ್ಲಿ ಅವರು ಪರಿಣತಿ ಹೊಂದಿದ್ದಾರೆ. ಓದುಗರಿಗೆ ಆಕರ್ಷಕ ಮತ್ತು ಮಾಹಿತಿಪೂರ್ಣ ವಿಷಯವನ್ನು ತಲುಪಿಸುವುದು ಅವರ ಬರವಣಿಗೆಯ ಮುಖ್ಯ ಲಕ್ಷಣ.
