
nail biting
ಉಗುರು ಕಚ್ಚುವುದು (Nail Biting) ಎನ್ನುವುದು ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಸಾಮಾನ್ಯವಾಗಿ ಕಾಣುವ ಒಂದು ಮನೋವೈಜ್ಞಾನಿಕ ಅಭ್ಯಾಸವಾಗಿದೆ. ಈ ದೇಹಭಾಷೆಯ ಹಿಂದೆ ಅನೇಕ ಆಂತರಿಕ ಕಾರಣಗಳಿವೆ – ಒತ್ತಡ, ಆತಂಕ, ಬೋರ್ಡಂ ಅಥವಾ ಅಭ್ಯಾಸದಿಂದ ಕೂಡ. ಹೆಚ್ಚು ಜನರು ಇದನ್ನು ತೀಕ್ಷ್ಣವಾಗಿ ಗಮನಿಸದೆ ಸಾಧಾರಣವೆಂದು ಎಣಿಸುತ್ತಾರೆ. ಆದರೆ ಈ ಸಾಧಾರಣ ಅಭ್ಯಾಸವೇ ನಿಮ್ಮ ದೈನಂದಿನ ಆರೋಗ್ಯದ ಮೇಲೆ ಹಾಗೂ ಭವಿಷ್ಯದ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ನೀವು ಅರಿತೀರಾ?
ಉಗುರುಗಳ ಕೆಳಭಾಗದಲ್ಲಿ ಬ್ಯಾಕ್ಟೀರಿಯಾ, ಧೂಳು ಮತ್ತು ಸೋಂಕುಕಾರಿ ಸೂಕ್ಷ್ಮಜೀವಿಗಳು ಸಂಗ್ರಹವಾಗಿರುತ್ತವೆ. ನೀವು ಈ ಉಗುರುಗಳನ್ನು ಬಾಯಿ ಮೂಲಕ ಕಚ್ಚಿದಾಗ, ಆ ಬ್ಯಾಕ್ಟೀರಿಯಾಗಳು ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ನುಗ್ಗಿ ಕೆಳಗಿನ ಸಮಸ್ಯೆಗಳಿಗೆ ಕಾರಣವಾಗಬಹುದು:
- ಹೊಟ್ಟೆ ನೊವು
- ಆಹಾರ ನಾಳದ ಸೋಂಕು
- ಉಗುರುಮೂಲ ಚರ್ಮದ ಇನ್ಫೆಕ್ಷನ್
- ಬಾಯಿಯ ಸೋಂಕುಗಳು
ಇದರ ಜೊತೆಗೆ, ಹಲ್ಲುಗಳ ಮೇಲೂ ಪರಿಣಾಮ ಬಿದ್ದು, ಹಲ್ಲಿನ ಶಕ್ತಿಯು ಕುಂಠಿತವಾಗಬಹುದು. ಹೀಗಾಗಿ, ಆರೋಗ್ಯದ ದೃಷ್ಟಿಯಿಂದ ಈ ಅಭ್ಯಾಸವನ್ನು ತಕ್ಷಣವೇ ನಿಲ್ಲಿಸುವುದು ಅವಶ್ಯಕ.
ಇದನ್ನೂ ಓದಿ: ಇಂತಹ ಬಟ್ಟೆಗಳಿಂದ ಮನೆ ಒರೆಸಿದರೆ ಶ್ರೀಮಂತರೂ ಬಡರಾಗಬಹುದು!
ಜ್ಯೋತಿಷ್ಯ ಶಾಸ್ತ್ರದಲ್ಲಿ, ದೇಹದ ಪ್ರತಿಯೊಂದು ಅಂಗವು ಒಂದು ಗ್ರಹದ ಪ್ರತೀಕವಾಗಿದೆ ಎಂದು ಹೇಳಲಾಗುತ್ತದೆ. ಅದರಂತೆ, ಉಗುರುಗಳು ಸೂರ್ಯ ಗ್ರಹವನ್ನು ಪ್ರತಿನಿಧಿಸುತ್ತವೆ. ಪದೇ ಪದೇ ಉಗುರುಗಳನ್ನ ಕಚ್ಚುವುದರಿಂದ ಸೂರ್ಯ ಗ್ರಹ ದುರ್ಬಲವಾಗುತ್ತ ಹೋಗುತ್ತೆ ಎಂದು ಹೇಳಲಾಗಿದೆ. ಇನ್ನು ಪದೇ ಪದೇ ಉಗುರುಗಳನ್ನ ಕಚ್ಚುವುದರಿಂದ ಆತ್ಮ ವಿಶ್ವಾಸ ಕುಂಠಿತ ವಾಗುತ್ತಾ ಹೋಗುತ್ತದೆ. ಹಿಂದೂ ಶಾಸ್ತ್ರಗಳು ಹೇಳುವ ಪ್ರಕಾರ ಉಗುರು ಕಚ್ಚುವ ವ್ಯಕ್ತಿಯ ಮೇಲೆ ನಕಾರಾತ್ಮಕ ಪ್ರಭಾವ ಹೆಚ್ಚಾಗಿ ಬೀರುತ್ತವೆ. ಜೀವನದಲ್ಲಿ ಅನೇಕ ರೀತಿಯ ತೊಂದರೆಗಳನ್ನು ಹಾಗೂ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ.
ಹಾಗೆಯೆ ಉಗುರು ಕಚ್ಚುವ ಜನರಿಗೆ ಹಣದ ಕೊರತೆ ಕೂಡ ಎಂದು ಜ್ಯೋತಿಷ್ಯದಲ್ಲಿ ತಿಳಿಸಲಾಗಿದೆ. ಉಗುರನ್ನು ಕಡಿಯುವುದು ಶನಿ ದೋಷಕ್ಕೆ ಕಾರಣವಾಗುತ್ತೆ. ಹೀಗೆ ಮಾಡುವುದರಿಂದ ಶನಿಯ ದೃಷ್ಟಿ ನಿಮ್ಮ ಮೇಲೆ ಬೀರಲಿದೆ. ಇದರಿಂದಾಗಿ ನಿಮ್ಮ ಜೀವನದಲ್ಲಿ ಅಡೆತಡೆಗಳು ಪ್ರಾರಂಭವಾಗುತ್ತೆ ಹಣಕಾಸಿನ ಸಮಸ್ಯೆ ಸಹ ಎದುರಾಗುತ್ತೆ ಎಂದು ತಿಳಿಸಿದ್ದಾರೆ. ಆದರಿಂದ ಈ ಕೆಟ್ಟ ಅಭ್ಯಾಸವನ್ನು ಈಗಲೇ ನಿಲ್ಲಿಸುವುದು ಉತ್ತಮ.
ಇದನ್ನೂ ಓದಿ: ಈ 5 ರಾಶಿಯ ಮಹಿಳೆಯರು ಹೆಚ್ಚು ಜಗಳಗಂಟರು
Aaradhya is an accomplished content writer with five years of experience specializing in astrology. She possesses extensive expertise in researching, analyzing, and crafting insightful and engaging articles on various astrological topics.