
Kendasampige Serial
ಕಲರ್ಸ್ ಕನ್ನಡದ [Colors Kannada] ಟಾಪ್ ಧಾರಾವಾಹಿಗಳಲ್ಲಿ ಕೆಂಡಸಂಪಿಗೆ [Kendasampige] ಧಾರವಾಹಿ ಕೂಡ ಒಂದು. ದಿನದಿಂದ ದಿನಕ್ಕೆ ರೋಚಕ ತಿರುವುಗಳನ್ನು ಕೆಂಡಸಂಪಿಗೆ ಧಾರವಾಹಿ ಪಡೆದುಕೊಂಡು ಸಾಗುತ್ತಿದೆ. ಈಗ ಎಲೆಕ್ಷನ್ ನಲ್ಲಿ ತೀರ್ಥಂಕರ ಪ್ರಸಾದ ಸುಧಾಕರ್ ರಾವ್ ವಿರುದ್ಧ ರೋಚಕ ಗೆಲುವನ್ನು ಪಡೆದಿದ್ದಾನೆ. ಎಲ್ಲರು ಕೂಡ ಈ ಸಂಭ್ರಮದಲ್ಲಿದ್ದರೆ ತೀರ್ಥನ ಯೋಚನೆಯೇ ಬೇರೆ ಆಗಿದೆ.
ತೀರ್ಥ ಮನೆಗೆ ಬರುವಾಗ ಪದ್ಮ ಹಾಗೂ ಸುಮನಾ ಇಬ್ಬರು ಕೂಡ ಅವನಿಗೆ ಆರತಿ ಮಾಡಬೇಕು ಎಂದು ಕಾಯುತ್ತಿರುತ್ತಾರೆ. ಹಾಗೆ ಮನೆಗೆ ತೀರ್ಥ ಹಾಗೂ ನಿತ್ಯ ಇಬ್ಬರು ಬಂದಾಗ ಹೊರಗಡೆಗೆ ನಿಲ್ಲಲು ಪದ್ಮ ಅವನಿಗೆ ಹೇಳುತ್ತಾಳೆ. ಈ ಸಮಯದಲ್ಲಿ ಸುಮನಾ ಆರತಿ ತೆಗೆದುಕೊಂಡು ಹೋದಾಗ ಅಲ್ಲಿಗೆ ಸಾಧನ ಬಂದು ಇದೇನು ಹೊಸ ವೇಷ ನಿಮ್ಮದು ತೀರ್ಥ ಗೆದ್ದ ಅಂತ ಅಭಿಮಾನಿಗಳು ಊರಿನ ಜನರೆಲ್ಲಾ ಅವನಿಗೆ ಅಲ್ಲೇ ಆರತಿ ಮಾಡಿ ಕಳಿಸ್ತಾರೆ. ಈಗ ನೀವೇನು ಇಲ್ಲಿ ಆರತಿ ಮಾಡೋದು ಬೇಡ ಎಂದು ಹೇಳ್ತಾಳೆ.
ಕೆಂಡಸಂಪಿಗೆ ಕನ್ನಡ ಸೀರಿಯಲ್ ನಲ್ಲಿ ನಂತರ ಪದ್ಮ ಎಲ್ಲರ ದ್ರಷ್ಟಿ ನನ್ನ ಮಗನ ಮೇಲೆ ಬಿದ್ದಿರುತ್ತೆ ಹಾಗಾಗಿ ನಾನು ಅವನಿಗೆ ದೃಷ್ಠಿ ತೆಗೆಯಲೇಬೇಕು ನೀನು ಸುಮ್ಮನೆ ಇರು ಎಂದು ಅವಳಿಗೆ ಸಾಧನಗೆ ಹೇಳುತ್ತಾಳೆ. ನಂತರ ನಿತ್ಯ ಹಾಗೂ ತೀರ್ಥ ಜೊತೆಗೆ ಬಂದು ನಿನ್ತಗ ಸಾಧನ ಸುಮನಾ ಹತ್ತಿರ ಬಂದು ಈಗ ನೀನೆ ಇವರಿಬ್ಬರಿಗೂ ಆರತಿ ಮಾಡು ಎಂದು ಹೇಳಿದಾಗ ಸುಮನಾಗೆ ತುಂಬಾ ಬೇಜಾರಾಗುತ್ತೆ. ತೀರ್ಥ ಗೆದ್ದಿರೋದಕ್ಕೆ ಕಾರಣ ನಿತ್ಯ ನೀನು ಅವಳಿಗೂ ಆರತಿ ಮಾಡಿದ್ರೆ ಏನು ತೊಂದರೆ ಇಲ್ಲ ಎಂದು ಹೇಳ್ತಾಳೆ.
ಅದಕ್ಕೆ ಪದ್ಮ ಬಂದು ಏನು ಅವಶ್ಯಕತೆ ಇಲ್ಲ ನಾನೆ ಆರತಿ ಮಾಡ್ತೀನಿ ಅದು ಸುಮನಾ ಹಾಗೂ ತೀರ್ಥನಿಗೆ ಯಾಕೆಂದರೆ ಸುಮನ ಎಷ್ಟೊಂದು ಕಷ್ಟ ಪಟ್ಟಿದ್ದಾಳೆ ಎಂದು ಅವರಿಬ್ಬರಿಗೆ ಆರತಿಯನ್ನು ಮಾಡ್ತಾಳೆ ಪದ್ಮ. ನಂತರ ಸುಮನಾ ಹತ್ತಿರ ಬಂದು ಡೈವೋರ್ಸ್ ವಿಷಯವನ್ನು ಮಾತಾಡಬೇಕು ಎಂದು ತೀರ್ಥ ಬಂದಿರ್ತಾನೆ. ಆದರೆ ಅದೇ ಸಮಯಕ್ಕೆ ಪದ್ಮ ಅಲ್ಲಿಗೆ ಬಂಡ ಕಾರಣ ಅವನಿಗೆ ಅದೇನು ಸಹ ಮಾತನಾಡುವುದಕ್ಕೆ ಆಗಲ್ಲ.
ನಂತರ ಪದ್ಮ ದೇವರ ಪೂಜೆ ವಿಷಯ ಮಾತನಾಡಿದಾಗ ನನಗೆ ಅದ್ರ ಮೇಲೆ ಎಲ್ಲ ಆಸಕ್ತಿ ಇಲ್ಲ ಎಂದು ತೀರ್ಥ ಹೇಳಿದಕ್ಕೆ ಪದ್ಮಗೆ ಶಾಕ್ ಆಗುತ್ತೆ, ಇದೇನೋ ತೀರ್ಥ ನೀನಾ ಹೀಗೆ ಮಾತನಾಡ್ತಾಯಿರೋದು? ಯಾವತ್ತೂ ಕೂಡ ದೇವರು ಅಂತೆಲ್ಲ ಹೇಳತ ಇದ್ಯಲ್ಲ ಈಗ ಏನ್ ಆಯಿತು ನಿನಗೆ ಎಂದು ಪ್ರಶ್ನೆ ಮಾಡ್ತಾಳೆ. ಅದಕ್ಕೆ ಅವನು ಅದೆಲ್ಲ ಎಲೆಕ್ಷನ್ ಕಿಂತ ಮೊದಲು ಈಗ ಅದೇನು ಎಬ್ಬ ಎಂದು ಹೇಳ್ತಾನೆ. ಅದಕ್ಕೆ ಹೀಗೆಲ್ಲ ಮಾಡಬಾರದು ದೇವರು ಎಲ್ಲ ಸಮಯಕ್ಕೆ ಬೇಕು. ನೀನು ಗೆಲ್ಲಬೇಕೆಂದು ದೇವರ ಹತ್ತಿರ ಕೇಳಿ ಈಗ ಗೆದ್ದ ಮೇಲೆ ದೇವರು ಬೇಡ ಅಂದ್ರೆ ಹೇಗೆ ಎಂದು ಪದ್ಮ ಅವನಿಗೆ ಕೇಳ್ತಾಳೆ.
Kendasampige: ಸುಮನಾ ಹೊಸ ಪ್ಲಾನ್
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.