ಎಲ್ಲರೂ ಸಹ ಬೆಳಿಗ್ಗೆ ಎದ್ದ ತಕ್ಷಣ ಟೂತ್ ಪೇಸ್ಟ್ ಅನ್ನು ಬಳಸಿ ನಮ್ಮ ಹಲ್ಲನ್ನು ಉಜ್ಜುತ್ತೇವೆ. ಆದರೆ ಈ ರೀತಿಯಾಗಿ ಪ್ರತಿದಿನ ನೀವು ಬಳಸುವ ಪೇಸ್ಟ್ ವಿಷವಾಗಿ ಕಾಡ್ತಾ ಇದೆ ಅಂತ ಹೇಳಿದ್ರೆ ನೀವು ನಂಬುತ್ತಿರಾ? ಈಗಂತೂ ಬಣ್ಣ ಬಣ್ಣದ ಪೇಸ್ಟ್ ಗಳು ಸಹ ಬರುತ್ತವೆ. ಹಾಗೆಯೆ ವಿಧ ವಿಧವಾದ ಫ್ಲೇವರ್ ನಲ್ಲಿ ಸಹ ಟೂತ್ ಪೇಸ್ಟ್ ಸಿಗುತ್ತವೆ. ಹಾಗಾದ್ರೆ ಈ ಪೇಸ್ಟ್ ಗಳನ್ನೂ ಬಳಸುವುದರಿಂದ ಏನೆಲ್ಲಾ ಆಗುತ್ತೆ ಅಂತ ನೋಡಿ.
ಹಲ್ಲುಗಳನ್ನು ಸ್ವಚ್ಛ ಮಾಡಲು ಟೂತ್ ಪೇಸ್ಟ್ ಗಳಲ್ಲಿ ಕೆಮಿಕಲ್ ಅನ್ನು ಬಳಸುತ್ತಾರೆ. ವಿಶೇಷವಾಗಿ ಇದರಲ್ಲಿರುವ ಫ್ಲೋರೈಡ್ ನಿಮ್ಮ ಹೊಟ್ಟೆಗೆ ಹೋದರೆ ವಿಷಕ್ಕೆ ಸಮಾನ. ನೀವು ಈ ಪೇಸ್ಟ್ ಅನ್ನು ಬಳಸಿ ಹಲ್ಲನ್ನು ಉಜ್ಜುವಾಗ ಸ್ವಲ್ಪ ಪ್ರಮಾಣದಲ್ಲಿ ಆದರೂ ಅದು ನಿಮ್ಮ ಹೊಟ್ಟೆಗೆ ಹೋಗೆ ಹೋಗುತ್ತದೆ. ಇದು ದೇಹಕ್ಕೆ ಹಾನಿಕರ.
ಕುಕ್ಕರ್ ನಲ್ಲಿ ಅನ್ನ ಮಾಡುವುದರಿಂದ ಏನೆಲ್ಲಾ ಆರೋಗ್ಯ ಸಮಸ್ಯೆ ಉಂಟಾಗುತ್ತೆ ಗೊತ್ತಾ?
ಚಿಕ್ಕ ಮಕ್ಕಳಿಗೆ ಹಲ್ಲನ್ನು ಉಜ್ಜಲು ಪೇಸ್ಟ್ ಹಾಕಿ ಕೊಟ್ಟರೆ ಅದು ಅವರ ಮೇಲೆ ಬೇಗ ಪರಿಣಾಮವನ್ನು ಬೀರುತ್ತದೆ. Sodium lauryl sulfate ಇದನ್ನು ಪೇಸ್ಟ್ ನಲ್ಲಿ ಬಳಸುತ್ತಾರೆ ಹಾಗೆ ಇದೆ ಕೆಮಿಕಲ್ ಅನ್ನು ಹಾರ್ಪಿಕ್ ನಲ್ಲಿ ಹಾಗೆ ಶಾಂಪೂ ನಲ್ಲಿ ಸಹ ಬಳಸುತ್ತಾರೆ. ಹಾಗೆಯೆ ಇದರ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಅಂಶ ಸಹ ಟೂತ್ ಪೇಸ್ಟ್ ನಲ್ಲಿ ಇರುತ್ತದೆ. ಇದರ ಜೊತೆಗೆ ಇನ್ನು ಹಲವಾರು ಕೆಮಿಕಲ್ ಗಳನ್ನು ಪೇಸ್ಟ್ ನಲ್ಲಿ ಬಳಸುವುದರಿಂದ ದೇಹದ ಮೇಲೆ ಪರಿಣಾಮವನ್ನು ಬೀರುತ್ತೆ.
Join Our Group | Click Here |
ಟೂತ್ ಪೇಸ್ಟ್ ಬಳಸುವುದರಿಂದ ಏನೆಲ್ಲಾ ತೊಂದರೆ ಕಾಡಬಹುದು?
- ಬುದ್ದಿ ಕ್ಷೀಣವಾಗುವುದು ಮತ್ತು ಮೆದುಳಿಗೆ ಘಾಸಿಯಾಗುವುದು
- ಹಾರ್ಮೋನ್ ನಲ್ಲಿ ಏರು ಪೇರಾಗುತ್ತೆ
- ಮೆದುಳಿನ ತೊಂದರೆ ಕಾಡಬಹುದು
- ಮೂತ್ರ ಪಿಂಡದ ತೊಂದರೆ ಬರಬಹುದು
- ಹೃದಯ ಸಮಸ್ಯೆ ಕಾಡಬಹುದು
- ಥೈರಾಯ್ಡ್ ತೊಂದರೆ
ಆದ ಕಾರಣ ನೀವು ಹಲ್ಲನು ಉಜ್ಜುವಾಗ ಟೂತ್ ಪೇಸ್ಟ್ ಬಳಕೆಯನ್ನು ಕಡಿಮೆ ಮಾಡಿ. ಇದರ ಬದಲು ಮನೆಯಲ್ಲಿ ತಯಾರಿಸಿದ ಹಲ್ಲು ಪುಡಿಯನ್ನು ಬಳಸಬಹುದು.
ಮನೆಯಲ್ಲಿ ಟೂತ್ ಪೌಡರ್ ಮಾಡೋದು ಹೇಗೆ?
ನೀವು ಅರಿಶಿನ ಪುಡಿ, ಸೈನ್ದವ ಲವಣ, ಬೆಟ್ಟದ ನೆಲ್ಲಿಕಾಯಿ ಪೌಡರ್, ಸೀಗೆಕಾಯಿ ಪುಡಿ, ಕೊಬ್ಬರಿ ಎಣ್ಣೆ, ಇದ್ದಿಲು ಪುಡಿ ಹಾಗೆಯೆ ನೀವು ಬೇಕಾದ್ರೆ ಲವಂಗದ ಪುಡಿಯನ್ನು ಇದಕ್ಕೆ ಸೇರಿಸಬಹುದು. ನಿಮಗೆ ಲಿಕ್ವಿಡ್ ತರಾ ಬೇಕು ಅಂದರೆ ಶುದ್ಧವಾದ ತೆಂಗಿನ ಎಣ್ಣೆಗೆ ಲವಂಗದ ಎಣ್ಣೆಯನ್ನು ಸೇರಿಸಿ ಅದಕ್ಕೆ ಕರ್ಪೂರದ ಎಣ್ಣೆ ಯನ್ನು ಸೇರಿಸಿ ಹಲ್ಲನ್ನು ಉಜ್ಜಬಹುದು.
ನಿಮಗೆ ಮನೆಯಲ್ಲಿ ಟೂತ್ ಪೌಡರ್ ತಯಾರಿಸಲು ಆಗದಿದ್ದರೆ. ನೀವು ಮಾರ್ಕೆಟ್ ನಿಂದ ನ್ಯಾಚುರಲ್ ಆಗಿರುವ ಟೂತ್ ಪೌಡರ್ ಖರೀದಿಸಬಹುದು.