
ಎಲ್ಲರು ಮಲಗುವ ಶೈಲಿ ಒಂದೇ ರೀತಿ ಆಗಿ ಇರುವುದಿಲ್ಲ. ಕೆಲವರು ತಮ್ಮ ಬದಿಯಲ್ಲಿ ಮಲಗುತ್ತಾರೆ ಹಾಗೆ ಇನ್ನು ಕೆಲವರು ಹೊಟ್ಟೆಯ ಮೇಲೆ ಮಲಗುತ್ತಾರೆ. ಹೊಟ್ಟೆಯ ಮೇಲೆ ಮಲಗಬಾರದು ಎಂದು ಹಲವಾರು ಹೇಳಿದ್ದನ್ನ ನೀವು ಕೇಳಿರಬಹುದು. ಈ ರೀತಿಯಾಗಿ ಹೊಟ್ಟೆಯ ಮೇಲೆ ಮಲಗುವುದು ನಮ್ಮ ದೇಹಕ್ಕೆ ಅಪಾಯ ಆಗಬಹುದೇ? ಎಂದು ತಿಳಿಯಿರಿ.
- ಹೊಟ್ಟೆಯ ಮೇಲೆ ಮಲಗಿದರೆ ಏನಾಗುತ್ತೆ?
- ಬೆನ್ನು ಮೂಳೆಯ ಒತ್ತಡ ಜಾಸ್ತಿ ಆಗಬಹುದು
- ಗರ್ಭಿಣಿಯರು ಹೀಗೆ ಮಲಗಬಾರದು
ತಜ್ಞರು ಹೇಳಿದ ಪ್ರಕಾರ ಹೊಟ್ಟೆಯ ಮೇಲೆ ಮಲಗುವುದರಿಂದ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ. ಹೀಗೆ ಮಲಗುವುದರಿಂದ ನಮ್ಮ ಬೆನ್ನು ಮೂಳೆಯ ಮೇಲೆ ಒತ್ತಡ ಬೀಳುತ್ತೆ. ಹೀಗೆ ಮಲಗುವುದರಿಂದ ದೇಹದ ಹೆಚ್ಚಿನ ಭಾರ ಹೊಟ್ಟೆಯ ಮೇಲೆ ಬೀಳುತ್ತೆ. ಇದರಿಂದ ಬೆನ್ನು ಮೂಳೆಯ ಮೇಲೆ ಒತ್ತಡ ಬೀಳುತ್ತೆ. ಈ ರೀತಿಯಾಗಿ ಹೊಟ್ಟೆಯ ಮೇಲೆ ಮಲಗುವುದು ದೇಹದ ಹಲವು ಭಾಗಗಳಿಗೆ ಒಳ್ಳೆಯದಲ್ಲ.
ಹೊಟ್ಟೆಯ ಮೇಲೆ ಮಲಗುವುದರಿಂದ ನಿಮ್ಮ ದೇಹದಲ್ಲಿ ಜುಮ್ ಎನ್ನುವ ಅನುಭವ ಆಗಬಹುದು. ಹಾಗೆಯೆ ಹಲವರಿಗೆ ಪದೇ ಪದೇ ಕುತ್ತಿಗೆ ನೋವು ಕೂಡ ಕಾಣಿಸಿಕೊಳ್ಳುವ ಸಂಭವ ಇದೆ. ಗರ್ಭಿಣಿಯರು ಯಾವುದೇ ಕಾರಣಕ್ಕೂ ಹೊಟ್ಟೆಯ ಮೇಲೆ ಮಲಗಬಾರದು. ಯಾಕೆಂದರೆ ಗರ್ಭವಾಸ್ಥೆಯ ಸಮಯದಲ್ಲಿ ಹೊಟ್ಟೆಯ ಮೇಲೆ ಮಲಗುವುದರಿಂದ ಮಗುವಿನ ಮೇಲೆ ಪರಿಣಾಮ ಬೀರಬಹುದು.
ಹೊಟ್ಟೆಯ ಮೇಲೆ ಮಲಗುವುದರಿಂದ ಯಾವೆಲ್ಲ ಪ್ರಯೋಜನಗಳಿವೆ?
ಈಗ ನೀವು ಹೊಟ್ಟೆಯ ಮೇಲೆ ಮಲಗುವುದರಿಂದ ಏನೆಲ್ಲಾ ನಷ್ಟ ಆಗುತ್ತೆ ಅಂತ ನೋಡಿದಿರಲ್ಲ ಹೀಗೆ ಮಲಗುವುದರಿಂದ ಕೆಲವೊಂದು ಲಾಭಗಳು ಕೂಡ ಇದೆ. ಅದೇನೆಂದರೆ ಗೊರಕೆ ಹೊಡಿಯುವ ವ್ಯಕ್ತಿ ಹೊಟ್ಟೆಯ ಮೇಲೆ ಮಲಗುವುದರಿಂದ ಗೊರಕೆ ಬರುವುದಿಲ್ಲ.
ಇವುಗಳನ್ನೂ ಓದಿ:
ರಾತ್ರಿ ಮಲಗುವ ಮುನ್ನ ಬಾಳೆಹಣ್ಣು ತಿಂದರೆ ಏನಾಗುತ್ತೆ ನೋಡಿ
ಅಣಬೆ ಸೇವನೆ ಮಾಡುವ ಮುನ್ನ ತಪ್ಪದೆ ಇದನ್ನು ನೋಡಿ