ಇತ್ತೀಚಿನ ದಿನಗಳಲ್ಲಿ ಎಲ್ಲರೂ ಸಹ ಕಡಿಮೆ ಸಮಯದಲ್ಲಿ ಹೆಚ್ಚಿನ ಕೆಲಸವನ್ನು ಮಾಡಲು ಬಯಸುತ್ತಾರೆ. ಹಾಗೆಯೆ ಹೆಚ್ಚಿನ ಜನರು ಪ್ರತಿದಿನ ಕುಕ್ಕರ್ ನಲ್ಲಿ ಅನ್ನವನ್ನು ಬೇಯಿಸುತ್ತಾರೆ. ಆದರೆ ಈ ರೀತಿಯಾಗಿ ಕುಕ್ಕರ್ ನಲ್ಲಿ ಮಾಡಿದ ಅನ್ನವನ್ನು ಸೇವನೆ ಮಾಡುವುದರಿಂದ ಏನೆಲ್ಲಾ ಸಮಸ್ಯೆ ಉಂಟಾಗುತ್ತೆ? ಹಾಗೆಯೆ ಕುಕ್ಕರ್ ನಲ್ಲಿ ಬೇಯಿಸಬಾರದ ವಸ್ತುಗಳ ಬಗ್ಗೆ ಸಹ ಮಾಹಿತಿಯನ್ನು ತಿಳಿಯೋಣ ಬನ್ನಿ.
ಹೆಚ್ಚಿನ ಜನರ ಮನೆಯಲ್ಲಿ ಪ್ರೆಷರ್ ಕುಕ್ಕರ್ {Pressure Cooker} ಬಳಸುವುದು ಸಾಮಾನ್ಯವಾಗಿದೆ. ಇದರಿಂದ ಆಹಾರವನ್ನು ತ್ವರಿತವಾಗಿ ಬೇಯಿಸುವುದು ಮಾತ್ರವಲ್ಲ ಈ ರೀತಿಯಾಗಿ ಕುಕ್ಕರ್ ನಲ್ಲಿ ಆಹಾರವನ್ನು ಬೇಯಿಸುವುದರಿಂದ ಇಂಧನವು ಉಳಿತಾಯವಾಗುತ್ತದೆ. ಆದರೆ ಕುಕ್ಕರ್ ನಲ್ಲಿ ಮಾಡಿದ ಆಹಾರವು ನಮ್ಮ ದೇಹಕ್ಕೆ ಪ್ರಯೋಜನವನ್ನು ನೀಡುವುದರ ಬದಲು ಹಾನಿಯುಂಟುಮಾಡುತ್ತೆ.
ಕುಕ್ಕರ್ ನಲ್ಲಿ ಬೇಯಿಸಿದ ಆಹಾರವನ್ನು ಸೇವನೆ ಮಾಡುವುದರಿಂದ ಅಸಿಡಿಟಿ ಸಮಸ್ಯೆಗಳು ನಿಮ್ಮನ್ನು ಕಾಡುತ್ತದೆ. ಹೆಚ್ಚಿನ ಉರಿಯಲ್ಲಿ ಆಹಾರವನ್ನು ಬೇಯಿಸುವುದರಿಂದ ಅದರ ಪೋಷಕಾಂಶಗಳು ನಾಶವಾಗುತ್ತೆ. ಕುಕ್ಕರ್ ನಲ್ಲಿ ಅಡುಗೆ ಮಾಡುವುದರಿಂದ ಆಹಾರದ ಪೌಷ್ಟಿಕಾಂಶದ ಮೌಲ್ಯವನ್ನು ಕಡಿಮೆ ಮಾಡುತ್ತೆ ಎಂದು ವರದಿಯಾಗಿದೆ.
ಈ ವಸ್ತುಗಳನ್ನು ಕುಕ್ಕರ್ ನಲ್ಲಿ ಬೇಯಿಸಬೇಡಿ
ಆಲೂಗಡ್ಡೆ: ಆಲೂಗಡ್ಡೆಯನ್ನು ಪ್ರೆಷರ್ ಕುಕ್ಕರ್ ನಲ್ಲಿ ಬೇಯಿಸಿದರೆ ಆಲೂಗಡ್ಡೆಯ ರುಚಿ ನಾಶವಾಗುತ್ತೆ. ಹಾಗೆಯೆ ಕುಕ್ಕರ್ ನಲ್ಲಿ ಬೇಯಿಸಿದ ಕಾರಣ ಆಲೂಗಡ್ಡೆಯಲ್ಲಿರುವ ಪಿಷ್ಟವು ಒಂದು ರೀತಿಯ ರಾಸಾಯನಿಕವನ್ನು ಉಂಟು ಮಾಡುತ್ತೆ. ಈ ರಾಸಾಯನಿಕವು ಆರೋಗ್ಯಕ್ಕೆ ಹಾನಿಯನ್ನು ಉಂಟುಮಾಡುತ್ತೆ.
ಅಕ್ಕಿ: ಹೆಚ್ಚಿನ ಜನರು ಅನ್ನವನ್ನು ಮಾಡಲು ಕುಕ್ಕರ್ ಅನ್ನು ಬಳಸುತ್ತಾರೆ. ಹೀಗೆ ಕುಕ್ಕರ್ ನಲ್ಲಿ ಅಕ್ಕಿಯನ್ನು ಬೇಯಿಸುವುದರಿಂದ ಅಕ್ಕಿಯಲ್ಲಿರುವ ಪಿಷ್ಟ ರಾಸಾಯನಿಕಗಳು ಬಿಡುಗಡೆ ಆಗುತ್ತದೆ. ನಂತರ ಇದು ಫೋಮ್ ಆಗಿ ಕಾಣಿಸಿಕೊಳ್ಳುತ್ತದೆ. ಬಾಣಲೆಯಲ್ಲಿ ಅನ್ನವನ್ನು ಮಾಡಿದಾಗ ಇದನ್ನು ಸುಲಭವಾಗಿ ತೆಗೆಯಬಹುದು. ಆದರೆ ಈ ಫೋಮ್ ಕುಕ್ಕರ್ ನಲ್ಲಿ ಮಾಡಿದಾಗ ಹೊರಬರುವುದಿಲ್ಲ. ಈ ರೀತಿಯಾದ ಅನ್ನವನ್ನು ಸೇವನೆ ಮಾಡುವುದರಿಂದ ಜೀರ್ಣಾಂಗ ಸಮಸ್ಯೆ ಉಂಟಾಗುತ್ತೆ.
ಇದನ್ನೂ ಓದಿ: ನೀವು ಕೈಯಿಂದ ಆಹಾರವನ್ನು ಸೇವಿಸುತ್ತೀರಾ?
ಪಾಸ್ತಾ: ಪಾಸ್ತಾವನ್ನು ಯಾವುದೇ ಕಾರಣಕ್ಕೂ ಕುಕ್ಕರ್ ನಲ್ಲಿ ಬೇಯಿಸಬೇಡಿ. ಯಾಕೆಂದರೆ ಈ ರೀತಿಯಾಗಿ ಪಾಸ್ತಾವನ್ನು ಕುಡಿಸುವುದರಿಂದ ನರವೈಜ್ಞಾನಿಕ ಅಸ್ವಸ್ಥತೆ ಹಾಗೂ ಕ್ಯಾನ್ಸರ್ ನಂತ ಅಪಾಯಕಾರಿ ಕಾಯಿಲೆಗಳು ಬರುವ ಸಾಧ್ಯತೆ ಕೂಡ ಇರುತ್ತದೆ.
ಮೀನು: ಮೀನನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತೆ. ಆದರೆ ಕುಕ್ಕರ್ ನಲ್ಲಿ ಮೀನನ್ನು ಬೇಯಿಸುವುದರಿಂದ ಅದರಿಂದ ಹೊರ ಬರುವ ಬ್ಯಾಕ್ಟೀರಿಯಾ ಗಳು ದೇಹಕ್ಕೆ ಹನಿ ಉಂಟುಮಾಡುತ್ತೆ. ಆದ ಕಾರಣ ಮೀನುಗಳನ್ನು ಕುಕ್ಕರ್ ನಲ್ಲಿ ಬೇಯಿಸಬೇಡಿ.