
ನಾವು ನಿತ್ಯ ಬಳಸುವ ಕೆಲವೊಂದು ತರಕಾರಿಗಳು ನಮ್ಮ ಹೊಟ್ಟೆಯನ್ನು ಶುಭ್ರಗೊಳಿಸುತ್ತವೆ ಅಲ್ಲದೇ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ ಇಂಥ ತರಕಾರಿಗಳ ಪೈಕಿ ಕ್ಯಾರೆಟ್ ಮೊದಲ ಸ್ತನದಲ್ಲಿ ಕಾಣಿಸಿಕೊಳ್ಳುತ್ತದೆ ಕ್ಯಾರೆಟ್ ನಲ್ಲಿ ಫೈಬರ್ ಅಂಶ ಅಧಿಕವಾಗಿದೆ. ಈ ಕ್ಯಾರಟ್ ನಿಂದ ನಮಗೆ ತುಂಬಾ ಉಪಯೋಗವಿದೆ. ಹಾಗಾದ್ರೆ ನೋಡಿ ಕ್ಯಾರಟ್ ನಮ್ಮ ದೇಹಕ್ಕೆ ಎಷ್ಟು ಸಹಾಯಕಾರಿ ಆಗಿದೆ ಅಂತ.
- ಕ್ಯಾರಟ್ ಸೇವನೆಯಿಂದ ನಮ್ಮ ದೇಹಕ್ಕೆ ಸಿಗುತ್ತೆ ಹಲವು ಲಾಭಗಳು
- ಅಜೀರ್ಣ ಹಾಗೂ ಮಲಬದ್ಧತೆ ನಿವಾರಣೆಗೆ ಕ್ಯಾರಟ್ ಸಹಾಯಕಾರಿ
- ಗಜ್ಜರಿಯ ರಸ ಕುಡಿಯುವುದರಿಂದ ಮೂತ್ರ ಸ್ವಚ್ಛವಾಗುತ್ತೆ
ನಿತ್ಯ ಬೆಳಿಗ್ಗೆ ಹಸಿ ಕ್ಯಾರೆಟ್ ಅನ್ನು ಅಲ್ಪ ಆಹಾರದ ರೂಪದಲ್ಲಿ ತಿಂದರೆ ಹೊಟ್ಟೆಯಲ್ಲಿ ಆಶ್ರಯ ಪಡೆಯುವ ಕೊಕ್ಕೆ ಹುಳುಗಳು ಸರ್ವನಾಶವಾಗುತ್ತದೆ. ಹೊಟ್ಟೆ ನೋವು ಹೊಟ್ಟೆ ಮುರಿತ ಕರುಳು ಹುಣ್ಣುಗಳ ನಿವಾರಣೆಗೆ ಗಜ್ಜರಿ ರಸ ಮೂರು ಚಮಚದಷ್ಟು ದಿನದಲ್ಲಿ ಮೂರು ಬಾರಿ ಕುಡಿಯಬೇಕು ಹಸಿ ಕ್ಯಾರೆಟ್ ನಿಯಮಿತವಾಗಿ ಸೇವಿಸುತ್ತಾ ಇದ್ದಲ್ಲಿ ಬಾಯಿ ರುಚಿ ಸಮತೋಲನ ಕಾಯ್ದುಕೊಳ್ಳುತ್ತದೆ.
ಪ್ರತಿದಿನ ಮುಂಜಾನೆ 60 ಮಿಲಿಟರ್ ಕ್ಯಾರೆಟ್ ರಸ ಸೇವಿಸಿದರೆ ಅಜೀರ್ಣ, ಅಲ್ಸರ್ ಮಲಬದ್ಧತೆ ಇತ್ಯಾದಿ ರೋಗಗಳಿಂದ ಶತಾಂಶ ವಿನಾಯಿತಿ ಪಡೆಯಬಹುದು. ಅಜೀರ್ಣದ ತೊಂದರೆಗಳಿಗೆ ಗಜ್ಜರಿಯನ್ನು ಹಸಿಯಾಗಿದು ತಿನ್ನಬೇಕು, ಇದರಿಂದ ಜಠರ ದೋಷ ನಿವಾರಣೆಗೆ ಪಚನ ಶಕ್ತಿ ಹೆಚ್ಚುವುದು.
ಹೀಗೆ ಅಗಿದು ತಿನ್ನುವುದರಿಂದ ಬಾಯಿಯ ದುರ್ಗಂಧವು ತೊಲಗುವುದು ಗಜ್ಜರಿ ರಸ ಎರಡು ಚಮಚ ಬಸಳೆ ಸೊಪ್ಪಿನ ರಸ ಎರಡು ಚಮಚ ನಿಂಬೆರಸ ಅರ್ಧ ಹೋಳು ಬೆರೆಸಿ ಕುಡಿದರೆ ಜಠರ ಶುದ್ದಿಯಾಗುವುದು ಮಲಬದ್ಧತೆ ನಿವಾರಣೆಯಾಗುವುದು.
ಗಜ್ಜರಿಯನ್ನು ತುರಿದು ಅದರ ರಸ ಪ್ರತಿದಿನ ಬೆಳಿಗ್ಗೆ ಒಂದು ಚಮಚದಷ್ಟು ಕೆಲವು ದಿನಗಳ ವರೆಗೆ ಕುಡಿಯುವುದರಿಂದ ಮಕ್ಕಳ ಕರುಳಿನಲ್ಲಿ ಕ್ರಿಮಿವುಗಳೆಲ್ಲ ನಾಶವಾಗುವವು ಮೂತ್ರವು ಸ್ವಚ್ಛವಾಗುವುದು. ಗಜ್ಜರಿಯನ್ನು ತುರಿದುಕೊಂಡು ಅದಕ್ಕೆ ಒಂದೆರಡು ಚಮಚ ಜೇನು ಅರ್ಧ ಹೋಳು ನಿಂಬೆ ರಸವನ್ನು ಮಿಶ್ರಣ ಮಾಡಿ ತಿನ್ನುತ್ತಿದ್ದರೆ ನರಮಂಡಲ ಶ್ವಾಸಕೋಶ ಮೂತ್ರಪಿಂಡಗಳಿಗೆ ಶಕ್ತಿ ಬರುವುದು ದುರ್ಬಲ ಹೃದಯದವರಿಗೆ ಟಾನಿಕ್ ನಂತೆ ಕೆಲಸ ಮಾಡುವುದು ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುವುದು.
ಗಜ್ಜರಿ ಕೋಸುಂಬರಿ ಸಲಾಡ್ ಸೇವನೆಯಿಂದ ದೇಹಕ್ಕೆ ಆರೋಗ್ಯವು ಚೈತನ್ಯವು ಉಂಟಾಗುವುದು
ಈ ಕಾಯಿಲೆ ಬರುವ ಮುನ್ನ ಮೌತ್ ವಾಶ್ ಬಳಸುವುದನ್ನು ನಿಲ್ಲಿಸಿ
ಎತ್ತರವಾಗಲು ಬಯಸುವವರು ಈ ರೀತಿಯಾಗಿ ಮಾಡಿ
ಮೂಗು ಕಟ್ಟಿದ್ದರೆ ಈ ಮನೆಮದ್ದನ್ನು ಬಳಸಿ
ಕ್ಯಾನ್ಸರ್ ಹಾಗೂ ಬಂಜೆತನಕ್ಕೆ ಕಾರಣವಾಗುತ್ತೆ ಭಾರತದಲ್ಲಿ ಮಾರಾಟವಾಗುವ ಸ್ಯಾನಿಟರಿ ಪ್ಯಾಡ್
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.